ಸುಮ್ಮನೆ ಆರಂಭವಾದ ಸಾಂಗತ್ಯ ಬೆಳೆದಿರುವುದು ಖುಷಿ ತಂದಿರುವ ವಿಚಾರ. ಅದೀಗ ಇಂಗ್ಲಿಷ್ ಬ್ಲಾಗ್ ಅನ್ನೂ ಆರಂಭಿಸಿದೆ. ಇದು ನಿಜಕ್ಕೂ ಸಂಭ್ರಮಿಸುವ ಸಂಗತಿ. ಅದಕ್ಕೇ “ಸಾಂಗತ್ಯ” ಕನ್ನಡ ಬ್ಲಾಗ್ ನಲ್ಲಿದ್ದ ಪ್ರಕಟಣೆಯನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ; ಸಾಂಗತ್ಯ ಇಂಗ್ಲಿಷ್ ಬ್ಲಾಗ್ ನ ಸಂಪರ್ಕ ಕೊಂಡಿಯೊಂದಿಗೆ.
ಸಾಂಗತ್ಯ ಆರಂಭವಾಗುವ ಮುನ್ನ ಹೀಗೆ ಬೆಳೆಯುತ್ತದೆಂದು ಊಹಿಸಿಯೇ ಇರಲಿಲ್ಲ. ಸಾಂಗತ್ಯ ಚಿತ್ರೋತ್ಸವದಲ್ಲಿ ಸೇರಿಕೊಂಡ ಒಂದಿಷ್ಟು ಮಂದಿ ಸಿನಿಮಾ ನೋಡುವ ಬಗೆ ಕಲಿತುಕೊಂಡು, ಏನಾದ್ರೂ ಬರೆಯಲು ಇಷ್ಟಪಟ್ಟರೆ ಅದಕ್ಕೊಂದು ವೇದಿಕೆ ಇರಬೇಕೆಂದು ಆರಂಭಿಸಿದ್ದು ಈ ಸಾಂಗತ್ಯ ಕನ್ನಡ ಬ್ಲಾಗ್.
ಗ್ರೂಪ್ ಬ್ಲಾಗಿಂಗ್ ಎಷ್ಟು ಖುಷಿ ಕೊಟ್ಟಿತೆಂದರೆ, ಸಾಂಗತ್ಯದ ಶ್ರಮ ಹರಿದು ಬಂದ ಬಗೆಯೇ ಅದಕ್ಕೆ ಉದಾಹರಣೆ. ಮೈಸೂರಿನ ವಿದ್ಯಾರ್ಥಿಯೊಬ್ಬ ಇವುಗಳನ್ನೀಗ ಹವ್ಯಾಸದಿಂದ ನಿರ್ವಹಿಸುತ್ತಿದ್ದಾನೆ. ಕನ್ನಡದಲ್ಲಿ ಜಗತ್ತಿನ ಚೆಂದದ ಸಿನಿಮಾಗಳ ಬಗ್ಗೆ ಒಂದಿಷ್ಟು ಮಾಹಿತಿ ಸಿಗುವಂತಾಗಬೇಕೆಂಬುದು ನಂತರದ ಆಶಯವಾಗಿತ್ತು. ಆದರೆ ಸಿಕ್ಕಎಲ್ಲರ ಬೆಂಬಲ ಇನ್ನೂ ದೊಡ್ಡದಾಗಿ ಬೆಳೆಸುತ್ತಿದೆ.
ನಿಜಕ್ಕೂ ಈ ಬೆಂಬಲಕ್ಕೆಸಾಂಗತ್ಯದ ತಂಡದ ಪರವಾಗಿ ಕೃತಜ್ಞತೆ. ಪ್ರಸ್ತುತ ಸಾಂಗತ್ಯದಲ್ಲಿ ಅತ್ಯುತ್ತಮ ಚಿತ್ರಗಳ ವಿಡಿಯೋ ಕ್ಲಿಪ್ಪಿಂಗ್, ಚಿತ್ರಗಳ ಫೋಟೋ ಸಮೂಹ, ಚಿತ್ರಗಳ ಕುರಿತ ಮಾಹಿತಿ ಚಿತ್ರ ಖಜಾನೆ, ವಿವಿಧ ನಿರ್ದೇಶಕರುಗಳ ಉತ್ಸವ…ಹೀಗೆ ವಿಭಿನ್ನವಾಗಿ ಸಾಂಗತ್ಯ ಬೆಳೆಯುತ್ತಿದೆ. ಇದೇ ಹುಮ್ಮಸ್ಸಿನಲ್ಲಿ ಇರುವಾಗ ಸಾಂಗತ್ಯ ಇಂಗ್ಲಿಷ್ ನಲ್ಲಿ ಆರಂಭವಾದರೆ ಹೇಗೆ? ಎಂಬ ಆಲೋಚನೆ ಬಂದಿತು. ಎಲ್ಲರೂ ಹ್ಲೂಂ ಎಂದರು. ಒಂದಿಷ್ಟು ಮಂದಿ ಇಂಗ್ಲಿಷ್ ನಲ್ಲಿ ಬರೆಯುವ ಸಮುದಾಯವೂ ಸಿದ್ಧವಾಯಿತು. ಆ ಹಿನ್ನೆಲೆಯಲ್ಲಿ ಸಾಂಗತ್ಯದ ಇಂಗ್ಲಿಷ್ ಆವೃತ್ತಿ ಸಿದ್ಧವಾದದ್ದೇ ಅಲ್ಲ. ಶಿವರಾತ್ರಿಯಂದು ಕಾರ್ಯಾರಂಭ ಮಾಡಿದೆ. ಇದು ಕನ್ನಡ ಸಾಂಗತ್ಯದ ಅನುವಾದಿತ ಮಾದರಿಯಲ್ಲ.
ಅಲ್ಲಿಯೇ ಬೇರೆ ತೆರನಾದ ಚರ್ಚೆಗಳು, ಸಿನಿಮಾ ಕುರಿತ ವಿಮರ್ಶೆಗಳು, ಸಂವಾದಗಳು ಆರಂಭವಾಗುತ್ತವೆ. ಹಾಗಾಗಿ ಇಂಗ್ಲಿಷ್ ನಲ್ಲಿ ಬರೆಯುವ ಸಮುದಾಯಕ್ಕೆ ಅದು ಧ್ವನಿಯಾಗಲಿದೆ. ಕನ್ನಡದಲ್ಲೂ ವಿಭಿನ್ನ ರೀತಿಯ ಜಗತ್ತಿನ ಉತ್ತಮ ಸಿನಿಮಾ, ನಿರ್ದೇಶಕರ ಬಗ್ಗೆ ಸಂವಾದ, ಚರ್ಚೆ ಇತ್ಯಾದಿ ನಡೆದೇ ಇರುತ್ತದೆ. ಒಟ್ಟು ಎರಡರ ಉದ್ದೇಶವೂ ಒಂದೇ.
ಸಾಂಗತ್ಯ ಸಿನಿಮಾಸಕ್ತ ಎಲ್ಲರ ವೇದಿಕೆಯಾಗಬೇಕು, ಧ್ವನಿಯಾಗಬೇಕೆಂಬುದು. ಆ ನಿಟ್ಟಿನಲ್ಲಿ ಇಂಗ್ಲಿಷ್ ಬ್ಲಾಗ್ ಗೂ ಎಲ್ಲರ ಸಹಕಾರ ಅಗತ್ಯ. ಎರಡೂ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ. ಚೆನ್ನಾಗಿದೆ ಎನ್ನಿಸಿದರೆ ನಿಮ್ಮ ಬ್ಲಾಗ್ ರೋಲ್ ಗಳಲ್ಲಿ ಅದಕ್ಕೆ ಸ್ಥಾನ ಕಲ್ಪಿಸಿ. ಸಾಂಗತ್ಯದ ಪ್ರಯತ್ನವನ್ನು ಆ ಮೂಲಕ ಬೆಂಬಲಿಸಿ. ಇಂಗ್ಲಿಷ್ ಬ್ಲಾಗ್ ನ ವಿಳಾಸ : www.saangatya.blogspot.com
ನಮಸ್ತೆ.. ನಾವಡ ಸರ್ ..
ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ವಂದೇ,
– ಶಮ, ನಂದಿಬೆಟ್ಟ