ಮತ್ತೊಬ್ಬ ಪನ್ನೀರ್ ಸೆಲ್ವಂ ಹುಟ್ಟುವ ಹೊತ್ತು?
ಕಟ್ಟಾ-ಮೀಠಾ

ಮತ್ತೊಬ್ಬ ಪನ್ನೀರ್ ಸೆಲ್ವಂ ಹುಟ್ಟುವ ಹೊತ್ತು?

ಮತ್ತೊಬ್ಬ ಪನ್ನೀರ್ ಸೆಲ್ವಂ ಹುಟ್ಟುವ ಸಂದರ್ಭ ಎದುರಾಗಿದೆ. ಸುಮಾರು 120 ಕ್ಕೂ ಹೆಚ್ಚು ಶಾಸಕರ ಬಲವನ್ನು ಹೊಂದಿದ್ದು, ಇನ್ನೇನು ಮುಖ್ಯಮಂತ್ರಿ ಪಟ್ಟ ಏರಬೇಕೆಂದಿದ್ದ ಶಶಿಕಲಾ ನಟರಾಜನ್ ಗೆ ಸುಪ್ರೀಂಕೋರ್ಟ್ ತೀರ್ಪು ದೊಡ್ಡ ಆಘಾತವನ್ನು ನೀಡಿದೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೋರ್ಟ್ 4 ವರ್ಷಗಳ ಜೈಲುವಾಸವನ್ನು ವಿಧಿಸಿದೆ. ಇದರೊಂದಿಗೆ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲುವಂತೆಯೂ ಇಲ್ಲ. ಹಾಗಾಗಿ ಸದ್ಯಕ್ಕಂತೂ ಶಶಿಕಲಾಳ ರಾಜಕೀಯ ಜೀವನ ಮುಗಿದಂತೆಯೇ. ಪ್ರಕರಣ ಪಡೆದಿರುವ ಕುತೂಹಲ ಮತ್ತೊಂದು ಕಡೆ. ಯಾಕೆಂದರೆ, ಶಶಿಕಲಾರ … ಓದನ್ನು ಮುಂದುವರೆಸಿ

ಬಿಕ್ಕಿದ ಸಾಲುಗಳು-ಹೊಸತು
ಬಿಕ್ಕಿದ ಸಾಲು

ಬಿಕ್ಕಿದ ಸಾಲುಗಳು-ಹೊಸತು

ಹೂವು ಅರಳುತ್ತಿರುವಾಗ ಬಣ್ಣ ಕುಣಿಯುತ್ತಿತ್ತು * ರಸ್ತೆ ಮಧ್ಯೆ ಅನಾಥವಾಗಿ ಬಿದ್ದಿದ್ದ ಒಂದೇ ಚಪ್ಪಲಿ ಮತ್ತೊಂದರ ಕುಶಲದ ಬಗ್ಗೆಯೇ ಯೋಚಿಸುತ್ತಿತ್ತು * ಅಂಗಡಿಯ ಎದುರು ನಿಂತ ಆ ಬಾಲಕ ಗೋಡೆಯ ಬಣ್ಣದ ಆಯಸ್ಸನ್ನು ಅಳೆಯುತ್ತಿದ್ದ ದೊಡ್ಡ ಕೆರೆಯಲ್ಲಿ ಅರಳಿ ನಿಂತಿದ್ದ ತಾವರೆಗೆ ಏಕತಾನತೆ ಸಾಕಾಗಿದೆಯಂತೆ * ಅವನ ಕತ್ತಿಗೆ ಸುತ್ತಿಕೊಂಡಿದ್ದ ಟೇಪಿಗೂ ವಯಸ್ಸಾಗಿದೆ * ಚೆಸ್‌ ಬೋರ್ಡ್ ನ ರಾಜನ ದರಬಾರು ಇನ್ನೂ ಮುಗಿದಿಲ್ಲ * ಗೊಂಬೆಯೊಂದು ಸೂತ್ರ ಹರಿದು ಕೆಳಗೆ ಬಿತ್ತು ಜೀವ ಹೋಗಲಿಲ್ಲ ! ಓದನ್ನು ಮುಂದುವರೆಸಿ

ನಗರೀಕರಣವೆಂಬ ಡೆಡ್ಎಂಡ್ ಇಲ್ಲದ ರಸ್ತೆ
ನಗರಮುಖಿ

ನಗರೀಕರಣವೆಂಬ ಡೆಡ್ಎಂಡ್ ಇಲ್ಲದ ರಸ್ತೆ

ಒಂದು ಮಾಯೆ ನಮ್ಮನ್ನು ಆವರಿಸಿಕೊಂಡಾಗ ನಮ್ಮದು ಅನಿವಾರ್ಯ ಸ್ಥಿತಿ. ಯೋಚಿಸುವ ಕೆಲಸಕ್ಕೆವಿರಾಮ ಹೇಳಿರುತ್ತೇವೆ. ಅದು ಮಾಡಿಸುತ್ತಿರುತ್ತದೆ. ನಾವು ಮಾಡುತ್ತಿರುತ್ತೇವೆ. ಇಲ್ಲಿ ಮಾಯೆಯೆಂಬುದು ಸಂದರ್ಭವಷ್ಟೇ. ಅದು ನಿರ್ಗುಣಿ. ಗುಣಾವಗುಣ ಆರೋಪವಿದ್ದರೂ ಅದನ್ನು ಎದುರಿಸುವವನದ್ದು. ನಗರವೆಂಬುದೇ ಮಾಯೆ. ಅದರ ಒಳಗೂ-ಹೊರಗೂ ನಾವಿದ್ದೇವಷ್ಟೇ. ಒಂದು ಮಸಾಲೆ ದೋಸೆ ನಮ್ಮೊಳಗೆ ಹೇಗೆ ನಗರ ಸಂವೇದನೆಯ ಬೀಜವನ್ನು ಬಿತ್ತಿದೆ ಎಂದು ಊಹಿಸಿಕೊಂಡರೆ, ನಿಜದಿ ನಾವೇನಾಗಿ ಉಳಿದಿದ್ದೇವೆ ಎನ್ನುವುದೇ ಸೋಜಿಗ. ಇದೊಂದು ಮಾಯೆ ಎನಿಸುವುದಿಲ್ಲವೇ? ಯಾಕೆಂದರೆ, ಮುಂಬು ಮಳೆಗೆ ಮುಳುಗಿತ್ತು, ಚೆನ್ನೈಯೂ ಮುಳುಗಿತ್ತು. ಈಗ ದಿಲ್ಲಿಯೇ … ಓದನ್ನು ಮುಂದುವರೆಸಿ

ಮಸಾಲೆ ದೋಸೆ ಮತ್ತು ನಗರ ಸಂವೇದನೆ
ನಗರಮುಖಿ

ಮಸಾಲೆ ದೋಸೆ ಮತ್ತು ನಗರ ಸಂವೇದನೆ

ಈ ಹೊತ್ತೇ ನಗರೀಕರಣದ್ದು. ಎಲ್ಲ ಹಳ್ಳಿಗಳೂ ನಗರಗಳಾಗುತ್ತಾ ಹೊರಟಿವೆ. ಎಲ್ಲರ ಕಣ್ಣಲ್ಲೂ ಒಂದಿಷ್ಟು ಬಣ್ಣಬಣ್ಣದ ಕನಸುಗಳಿವೆ.

ಕಳೆದ ಐದು ವಾರದಿಂದ ಪ್ರತಿ ಶನಿವಾರ ಉದಯವಾಣಿಯ ‘ನಗರಮುಖಿ’ ಅಂಕಣದಲ್ಲಿ ನಾನು ಬರೆಯುತ್ತಿದ್ದೇನೆ. ಅಲ್ಲಿಯ ಲೇಖನಗಳಿವು. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ-ಸಲಹೆಯನ್ನು ತಿಳಿಸಿ. ಓದನ್ನು ಮುಂದುವರೆಸಿ

ಮಕ್ಕಳೇಕೆ ಸುಳ್ಳು ಹೇಳುವುದಿಲ್ಲ
ಚಿತ್ರಿಕೆ

ಮಕ್ಕಳೇಕೆ ಸುಳ್ಳು ಹೇಳುವುದಿಲ್ಲ

ಮಕ್ಕಳೇಕೆ ಸುಳ್ಳು ಹೇಳುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಎಲ್ಲ ಮಕ್ಕಳ ಮುಂದೆ ಹೋಗಿ. ಅವರು ನಿಮ್ಮನ್ನು ದಂಗು ಬಡಿಸುವಂತೆ ಸುಳ್ಳು ಹೇಳುತ್ತಾರೆ. ಹಾಗಾದರೆ, ಈ ಮಾತು ಏಕೆ ಹುಟ್ಟಿತು ಎಂಬ ಪ್ರಶ್ನೆಯನ್ನು ಸೃಷ್ಟಿಸಿಕೊಂಡು ನಮ್ಮೊಳಗೆ ನಾವು ಹೊಕ್ಕೋಣ. ಆಗ ಎಲ್ಲವೂ ತಿಳಿದೀತು. ನನ್ನ ಮಗನಿಗೆ ಜೋರು ನಿದ್ದೆ ಮಾಡುವ ಅಭ್ಯಾಸ. ಅಂದೂ ಸಹ ಬೆಳಗ್ಗೆ ಮಳೆ ಬೇರೆ ಬರುತ್ತಿತ್ತು. ರಾಯರು ಏಳುವಾಗ ತಡವಾಯಿತು. ಶಾಲೆ ವ್ಯಾನ್ ಗೆ ಸಿದ್ಧವಾಗಲು ಇರುವುದು ಕೇವಲ ೧೫ ನಿಮಿಷ. ಅಷ್ಟರಲ್ಲಿ ಆತ, … ಓದನ್ನು ಮುಂದುವರೆಸಿ

ಪ್ರಚಲಿತ

‘ಯಾನ’ ದ ಕುರಿತು ಭೈರಪ್ಪ ನವರ ಸಂದರ್ಶನ

“ಯಾನ” ಹೊಸ ಕೃತಿಯ ಕುರಿತು ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಕ್ಲುಪ್ತ ಸಂದರ್ಶನವಿದು. ನಿಮ್ಮ ಹೊಸ ಕಾದಂಬರಿ ’ಯಾನ’ ಸಿದ್ಧವಾಗಿದೆ. ಮುಂದಿನ ವಾರದಲ್ಲಿ ಓದುಗರ ಕೈಗೆ ಸಿಗಲಿದೆ. ಈ ಹೊತ್ತಿನಲ್ಲಿ ಹೊಸ ಕಾದಂಬರಿ ಬಗ್ಗೆ ಹೇಳ್ತೀರಾ? ಹೇಳುವುದೇನೂ ಇಲ್ಲ. ಹೇಳಬೇಕಾದದ್ದನ್ನು ಕೃತಿಯಲ್ಲಿ ಬರೆದಿದ್ದೇನೆ. ಒಂದಂತೂ ನಿಜ. ಈ ಕಾದಂಬರಿ ನನಗೂ ಹೊಸ ಲೋಕವನ್ನು ಪರಿಚಯಿಸಿದ್ದು ನಿಜ. ಇದೂ ಒಂದು ಪಯಣವೇ. ನನ್ನ ಕಾದಂಬರಿ ಯಾನ ವೂ ಸಹ ಒಂದು ಪಯಣದ ಕುರಿತಾದದ್ದೇ. ಯಾನ ಅಂದರೂ ಪಯಣವೆಂದೇ ಅರ್ಥ. … ಓದನ್ನು ಮುಂದುವರೆಸಿ

ಧಾರಾವಾಹಿ

ಮನೆ ಕಟ್ಟಿ ನೋಡಿದಾಗ ಅನಿಸಿದ್ದು ಏನು ?

ಇದು ನನ್ನ ಹೊಸ ಧಾರಾವಾಹಿ. ಮನೆ ಕಟ್ಟಿದ ಕುರಿತಾದದ್ದು. ನಮ್ಮದೊಂದು ಕಲ್ಪನೆ ಮೂರ್ತ ಸ್ವರೂಪ ಪಡೆಯುವಾಗ ಅನುಭವಿಸುವ ಸಂಕಟ, ಇದನ್ನೇ ಆಧಾರವಾಗಿಸಿಕೊಂಡು ನಿರ್ಮಾಣಗೊಳ್ಳುವ ಹತ್ತು ಹಲವು ವಲಯಗಳು..ನಿಜ..ಯಶವಂತ ಚಿತ್ತಾಲರ ಶಿಕಾರಿ ನೆನಪಾಗುತ್ತದೆ. ವಾರಕ್ಕೊಂದು ಅಧ್ಯಾಯ ಬರೆಯುವೆ…ಓದಿ ಅಭಿಪ್ರಾಯಿಸಿ..ಆ ಪೈಕಿ ಇದು ಮೊದಲ ಕಂತು. ಬಹಳ ದಿನದಿಂದ ಬ್ಲಾಗಿನಿಂದ ದೂರವಿದ್ದೆ..ಈಗ ಮತ್ತೆ ಅದೇ ಅಂಗಳಕ್ಕೆ.. ಮನೆ ಕಟ್ಟುವುದು ಒಂದು ದೊಡ್ಡ ಕನಸು. ಅದರಲ್ಲೂ ತನ್ನ ಮಧ್ಯ ವಯಸ್ಸಿನಲ್ಲಿ ಸ್ವಂತದ್ದೊಂದು ಸೂರು ಹೊಂದಬೇಕೆಂಬ ಮಹದಾಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅದು … ಓದನ್ನು ಮುಂದುವರೆಸಿ