ಚೆಂಡೆಮದ್ದಳೆ

ಕಡಲಿಗೆ ಹೆಬ್ಬಾಗಿಲುಗಳಿಲ್ಲ…

ನನ್ನ ಬಗ್ಗೆ

ನಾನು ಸುದ್ದಿ ಜೀವಿ. ನಿತ್ಯವೂ ಸುದ್ದಿ ಬರೆಯುವುದು ನನ್ನ ಕಾಯಕ. ಅದರ ಮಧ್ಯೆ ಆಗಾಗ್ಗೆ ಹೊರಡುವ ಭಾವನೆಗಳ ಮೆರವಣಿಗೆಯ ಸೊಗಸನ್ನು ತುಂಬಿಕೊಳ್ಳಲು ಈ ಬ್ಲಾಗ್.

27 thoughts on “ನನ್ನ ಬಗ್ಗೆ

 1. ನಾವು ಹಂಗಾಮಾದಿಂದ ಬರೀತಿರೋದು. ಈ ಕಥೆಯ copyright ನಮ್ಮ ಹತ್ರ ಇದೆ, ನೀವು ಹಿಂಗೆಲ್ಲ ಪ್ರಕಟ ಮಾಡೋ ಹಾಗಿಲ್ಲ … ಹಿಹಿಹಿ… ತುಂಬಾ ಚೆನ್ನಾಗಿದೆ ಕಥೆ, ನವಿರಾದ ಭಾವನೆಗಳು ಸೂಕ್ತವಾಗಿ ವ್ಯಕ್ತವಾಗಿವೆ.ನಿಮ್ಮ ಎಲ್ಲಾ post ಗಳನ್ನೂ ಓದಿದೆ. ಈ ಕಥೆ ಭಾಳ ಇಷ್ಟವಾಯ್ತು.ನಿಮ್ಮದೇ ಆದ ನೂತನ ಶೈಲಿಯಲ್ಲಿ ಬರೆಯುತ್ತೀರಿ. ಬರವಣಿಗೆಯನ್ನು ಮುಂದುವರೆಸಿ, ಶುಭಾಶಯಗಳು.
  -ಶ್ರೀಕಾಂತ

 2. ಓ ನೀವು ವಿಜಯಕರ್ನಾಟಕದ ನಾವಡರಾ?! ಒಂದ್ಸಲ ಭೇಟಿಯಾಗಿದ್ದೆ, ಯಾವ್ದೋ ಆಹ್ವಾನಪತ್ರಿಕೆ ತಲುಪಿಸೋಕೆ. ನನ್ನ ಬ್ಲಾಗ್‌ಗಳಿಗೆ ಬಂದು ಕಾಮೆಂಟಿಸಿದ್ದಕ್ಕೆ ಧನ್ಯವಾದ:) ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ, ಲಿಂಕ್ ಹಾಕಿಕೊಳ್ತಿದ್ದೀನಿ.

 3. ಚೇತನಾ, ಶ್ರೀಕಾಂತ್, ಕೇಶವರ ಅಭಿಪ್ರಾಯಕ್ಕೆ ಧನ್ಯವಾದ.
  ಕೇಶವ ಮತ್ತು ಶ್ರೀಯವರಿಗೂ ಲಿಂಕ್ ಹಾಕಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.

  ಶ್ರೀಯವರೇ, ವಿಜಯಕರ್ನಾಟಕದ ನಾವಡರೆಂದು ಬೇಸರವಾಯ್ತಾ?
  ನಾವಡ

 4. ಸೋಮು ಅವರೇ,
  ಧನ್ಯವಾದ. ಆದರೆ ಯಾರೂ ಮತ್ತ್ಯಾರಿಗೂ ಕಲಿಸುವುದಿಲ್ಲ. ಕೇವಲ ಸಂದರ್ಭ ಮತ್ತು ಸನ್ನಿವೇಶ ಕಲಿಸಬಲ್ಲವು ಎಂಬುದು ನನ್ನ ನಂಬಿಕೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಆಗಾಗ್ಗೆ ಬರ್ತಾಇರಿ.
  ನಾವಡ

 5. ನಾವಡರಿಗೆ ನಮಸ್ಕಾರ,

  ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ನಿಮ್ಮ ಅನೇಕ ಲೇಖನಗಳನ್ನು ವಿಜಯಕರ್ನಾಟಕದಲ್ಲಿ ಓದಿದ್ದೇನೆ.ನಿಮ್ಮ ಬರವಣಿಗೆ ತುಂಬ ಇಷ್ಟವಾಯಿತು

  ವಿಶ್ವಾಸದಿಂದ
  ಮದ್ದೂರು ಸುಧೀಂದ್ರ ಬುದ್ಯ

 6. ನಾವಡ ಅವರೇ,

  ಬ್ಲಾಗ್‌ ಚೆನ್ನಾಗಿದೆ. ಇದರ ಬಗ್ಗೆ ಕೇಳಿದ್ದೆ, ಆದರೆ ಓದಿದ್ದು ಮಾತ್ರ ಇವತ್ತು.
  ಮೊದಲು ಓದಿದ್ದು ಕವಿತೆ. ನನ್ನ ಕಲೀಗ್‌ ಶ್ರೀದೇವಿ ಕಳಸದ ಓದಲು ಸೂಚಿಸಿದ್ದರು. ಚೆನ್ನಾಗಿದೆ ನಾವಡ. ಕಡಲ ನೀರಷ್ಟೇ ಅಲ್ಲ, ಕಣ್ಣೀರೂ ಉಪ್ಪುಪ್ಪು. ಅಲೆಗಳು ಕಡಲಲ್ಲಷ್ಟೇ ಅಲ್ಲ, ಮನದಲ್ಲೂ ಉಕ್ಕುತ್ತವೆ. ಕಂಗಳ ಮೂಲಕ ನೀರಾಗಿ ಅಪ್ಪಳಿಸುತ್ತವೆ. ದುಃಖ ಹೊರಬರುವುದೇ ಹಾಗೆ.

  ಕಣ್ಣೀರೆಂದರೆ ನೂರೆಂಟು ನೆನಪುಗಳು ಉಕ್ಕುತ್ತವೆ. ಮನಸ್ಸೇ ಹಾಗೆ, ತಲೆ ಕೆಟ್ಟ ಫೊಟೊಕಾಪಿ ಯಂತ್ರದಂತೆ. ಯಾರೋ ಪುಣ್ಯಾತ್ಮ ಹತ್ತಿಪ್ಪತ್ತು ಪ್ರತಿಗಳು ಬೇಕೆಂದು ಸೆಟಿಂಗ್‌ ಬದಲಿಸಿರುತ್ತಾನೆ. ಯಾವುದೋ ಮೂಡ್‌ನಲ್ಲಿ ನಾವು ಒಂದು ಪ್ರತಿ ಬೇಕೆಂದು ಬಟನ್‌ ಅದುಮುತ್ತೇವೆ. ತಗೋ, ದಬ ದಬ ಪ್ರತಿಗಳು ಬೀಳತೊಡಗುತ್ತವೆ. ಕೆಟ್ಟ ನೆನಪುಗಳನ್ನು ಮನಸ್ಸು ಕಕ್ಕುವುದೇ ಹೀಗೇ, ಅಲ್ಲವೆ?

  ನಿಮ್ಮ ಇತರ ಬರಹಗಳನ್ನು ಓದಿದ ಹಾಗೆ, ಅಭಿಪ್ರಾಯ ಬರೆಯಲು ಯತ್ನಿಸುತ್ತೇನೆ. ಬರೆಯುತ್ತಿರಿ. ಓದಲು, ಆ ನೆಪದಲ್ಲಿ ಮತ್ತೆ ಮತ್ತೆ ಬರೆಯಲು ನಮಗೂ ಸಾಧ್ಯವಾದೀತು.

  – ಚಾಮರಾಜ ಸವಡಿ,
  ಸುವರ್ಣ ನ್ಯೂಸ್‌ ಚಾನೆಲ್‌

 7. ಪ್ರಿಯ ಆತ್ಮೀಯ ಸ್ನೇಹಿತರೆ,

  ನಿಮ್ಮ ಅಂತರ್ಜಾಲ ಬಹಳ ಸುಂದರವಾಗಿದೆ.

  ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ – kannadajokes@gmail.com

  ಧನ್ಯವಾದಗಳೊಂದಿಗೆ…..

 8. Athmiya Navadare,

  Nimma Blog adara hesarina hage vidhinnavada anubhava mathu kushi koduthe..thanks . Nimma “Chitrotsava” Idea thumba vishishtavagide. Nimage nenapirabeku navu (“Sneha Samooha”)ayogisuthidda Rangotsavagalige uthamavada Prothsahavannu koduthidhiri…Monne “Mahathma Manthana” Emba 4 dinada ragotsava madidhevu Alli mathe nimmadhe korathe…Namma thanda ahhinayisida “Hay…Ram…”(Last days of Gandhi) 28-11-08 randu Rangashankara dalli Repeat show maduthidheve.. Sadyavadare Banni..Nimmella prothsahakke dhanyavadhagalu hagu nirantharavagi sagiruva nimma sahitya sevege nanna shubhashayagalu…Ravichandra

 9. ಹಾಯ್,

  ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

  ಧನ್ಯವಾದಗಳು,

  ಶಮ, ನಂದಿಬೆಟ್ಟ

  ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
  http://minchulli.wordpress.com

 10. ನಮಸ್ತೆ ನಾವಡರಿಗೆ ,
  ಭೀಮಸೇನ್ ಜೋಷಿಯವರ ಬಗ್ಗೆ ಹುಡುಕುತ್ತಿದ್ದ ನನ್ನನ್ನು google ನಂತಹ google.com ನಿಮ್ಮ ತಾಣಕ್ಕೆ ತಂದಿಳಿಸಿತು.
  ಬಹಳ ಸೊಗಸಾಗಿದೆ ನಿಮ್ಮ ಬ್ಲಾಗ್ . ಮೊದಲು ಕಂಡ “ಕಡಲಿಗೆ ಹೆಬ್ಬಾಗಿಲುಗಳಿಲ್ಲ…” ಸಾಲು ಮತ್ತೆ ಮತ್ತೆ ನಿಮ್ಮ ಬ್ಲಾಗ್ ಗೆ ಬರುವಂತೆ ಮಾಡುತ್ತಿದೆ.
  ಹೀಗೆ ಬರೆಯುತ್ತಾ ಇರಿ.
  ರವಿಶಂಕರ್

 11. ನಮಸ್ತೆ ನಾವಡರಿಗೆ ,
  ಭೀಮಸೇನ್ ಜೋಷಿಯವರ ಬಗ್ಗೆ ಹುಡುಕುತ್ತಿದ್ದ ನನ್ನನ್ನು google ನಂತಹ google.com ನಿಮ್ಮ ತಾಣಕ್ಕೆ ತಂದಿಳಿಸಿತು.
  ಬಹಳ ಸೊಗಸಾಗಿದೆ ನಿಮ್ಮ ಬ್ಲಾಗ್ . ಮೊದಲು ಕಂಡ “ಕಡಲಿಗೆ ಹೆಬ್ಬಾಗಿಲುಗಳಿಲ್ಲ…” ಸಾಲು ಮತ್ತೆ ಮತ್ತೆ ನಿಮ್ಮ ಬ್ಲಾಗ್ ಗೆ ಬರುವಂತೆ ಮಾಡುತ್ತಿದೆ.
  ಹೀಗೆ ಬರೆಯುತ್ತಾ ಇರಿ.

  ರವಿಶಂಕರ್

 12. ಕಳೆದೆರಡು ದಿನಗಳಿಂದ ಬೇರೆ ಬೇರೆ ಕಾರಣಗಳಿಗೆ ಬೇಸರಗೊಂಡಿದ್ದೆ. ಇಂದು ಒಂದು ಹೇಳಿದವರು 24 ಗಂಟೆಯೊಳಗೆ ಬದಲಾವಣೆಯ ಬಾಗಿಲಲ್ಲಿ ನಿಂತಿದ್ದರು. ಅಲ್ಪ ಸ್ವಲ್ಪ ಬರೆಯುವ ಜಾಯಮಾನವಿರುವ ನಾನು ನಿಮ್ಮ ಬ್ಲಾಗ್ ಅನ್ನು ತಿರುವು ಹಾಕಿದೆ. ಬೇಸರ ದೂರ ಸರಿಯಿತು. ಮತ್ತೆ ಯಾವುದಾದರೊಂದು ಪುಟ್ಟ ಲೇಖನಕ್ಕೆ ಹುರುಪಾಯಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: