ಬಿಕ್ಕಿದ ಸಾಲು

ಬಿಕ್ಕಿದ ಸಾಲುಗಳು-ಹೊಸತು

bombat-baduku-2

ಹೂವು ಅರಳುತ್ತಿರುವಾಗ

ಬಣ್ಣ ಕುಣಿಯುತ್ತಿತ್ತು

*

ರಸ್ತೆ ಮಧ್ಯೆ ಅನಾಥವಾಗಿ

ಬಿದ್ದಿದ್ದ

ಒಂದೇ ಚಪ್ಪಲಿ

ಮತ್ತೊಂದರ

ಕುಶಲದ ಬಗ್ಗೆಯೇ

ಯೋಚಿಸುತ್ತಿತ್ತು

*

ಅಂಗಡಿಯ ಎದುರು

ನಿಂತ ಆ ಬಾಲಕ

ಗೋಡೆಯ ಬಣ್ಣದ

ಆಯಸ್ಸನ್ನು ಅಳೆಯುತ್ತಿದ್ದ

ದೊಡ್ಡ ಕೆರೆಯಲ್ಲಿ

ಅರಳಿ ನಿಂತಿದ್ದ

ತಾವರೆಗೆ

ಏಕತಾನತೆ

ಸಾಕಾಗಿದೆಯಂತೆ

*

ಅವನ ಕತ್ತಿಗೆ

ಸುತ್ತಿಕೊಂಡಿದ್ದ

ಟೇಪಿಗೂ

ವಯಸ್ಸಾಗಿದೆ

*

ಚೆಸ್‌ ಬೋರ್ಡ್ ನ

ರಾಜನ

ದರಬಾರು

ಇನ್ನೂ ಮುಗಿದಿಲ್ಲ

*

ಗೊಂಬೆಯೊಂದು

ಸೂತ್ರ ಹರಿದು

ಕೆಳಗೆ ಬಿತ್ತು
ಜೀವ ಹೋಗಲಿಲ್ಲ !

Advertisements

One thought on “ಬಿಕ್ಕಿದ ಸಾಲುಗಳು-ಹೊಸತು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s