ಒಂದು
ಬಿಂದುವಿನಿಂದ
ಬದುಕು ಆರಂಭ
ಮತ್ತೊಂದು ಬಿಂದಿನಲ್ಲಿ
ವಿಲೀನ
ನಿಂತ ಭಂಗಿಯಲ್ಲೇ
ಹಾದಿ ಸವೆಸಬೇಕು
ಹೊಸ ಹಾದಿ
ಹುಡುಕಲು ಹೋಗಿ
ಕಳೆದುಹೋಗುವುದಕ್ಕಿಂತ
* * *
ಕತ್ತಲೆಯೇ
ಚೆಂದ
ಒಳಹೊಕ್ಕರೆ
ಯಾರೂ ಸಿಗುವುದಿಲ್ಲ
ಒಂಟಿ ಒಂಟೆಯ
ಬದುಕು
ಬೆಳಕಿಗೆ ಬಂದರೆ
ಜಾತ್ರೆಯೇ ಇದ್ದೀತು
ಅದಕ್ಕೇ
ನಾನೂ ಒಳಹೊಕ್ಕಿದ್ದೇನೆ
ಹೊರಬರಲು ಮನಸ್ಸಿಲ್ಲ
* * *
ನಿಂತ ಕ್ಷಣದ
ಎದುರು
ಭವಿಷ್ಯದ ಕ್ಷಣ
ಕೇಳಿತು
ಯಾರ ಬದುಕು ಕ್ಷಣಿಕ?
ನಿಂತ ಕ್ಷಣ ಹೇಳಿತು
ನನ್ನದು ಹಾಗಲ್ಲ
ಇರುವಷ್ಟೂ ಕಾಲ ನನ್ನದು
ಭವಿಷ್ಯವೆಂಬುದು ತಣ್ಣಗೆ
ಉತ್ತರಿಸಿತು
ನನ್ನ ಕ್ಷಣ ಬಂದ
ಮೇಲೆ ನೀನು
ಇದ್ದೂ ಸತ್ತಂತೆ