ಲೇಖನ

ವಿಶ್ವ ಕನ್ನಡ ಸಮ್ಮೇಳನ-ಹೊಸ ವ್ಯಾಖ್ಯೆ

ಐದು ವರ್ಷದಿಂದ ನಿರೀಕ್ಷಿಸುತ್ತಿದ್ದ ಘಳಿಗೆ ಇತಿಹಾಸದ ಅಧ್ಯಾಯಕ್ಕೆ ಸೇರಿದೆ. ನಾಡಿನ ಜನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಹೊಸ ಸಾಹಸ ಪೂರ್ತಿಗೊಳಿಸಿದ ಕೀರ್ತಿಗೆ ‘ಜನವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ‘ಕನ್ನಡದ ಗಂಗೆಯಲ್ಲಿ ತಮ್ಮ ಸರ್ವ ಪಾಪವನ್ನೂ ತೊಳೆದುಕೊಂಡು ಪಾವನರಾಗಿದ್ದಾರೆ’.

ಮೂರು ದಿನಗಳ ಕಾಲ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನ ಕನ್ನಡಿಗರ ಬಲ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ನಿಜ. ಸುಮಾರು ೨ ರಿಂದ ೩ ಲಕ್ಷ ಮಂದಿ ಸೇರಿ ಹಬ್ಬಕ್ಕೆ ಕಳೆಗಟ್ಟಿಸಿದ್ದೂ ಇತ್ತೀಚಿನ ವರ್ಷಗಳಲ್ಲಿ ಹೊಸತು. ಸಾಕಷ್ಟು ಲೋಪದೋಷಗಳಿದ್ದರೂ ಸಮ್ಮೇಳನ ಯಶಸ್ವಿಯಾಗಲು ಸರಕಾರ ಹಾಗೂ ಆಡಳಿತಶಾಹಿಗಿಂತ ದುಡಿದವರು ಸ್ವತಃ ಜನರೇ.

ಬೆಳಗಾವಿ ಹೊರತುಪಡಿಸಿ ಬೇರೆಲ್ಲಿ ನಡೆದಿದ್ದರೂ ಸರಕಾರಕ್ಕೆ ಕೀರ್ತಿ ಬದಲು ಅಪಕೀರ್ತಿಯೇ ಪ್ರಾಪ್ತವಾಗುತ್ತಿತ್ತು. ಈ ಮಾತಿಗೆ ಮೂಲವೆಂದರೆ ‘ಎಲ್ಲವು ವ್ಯವಸ್ಥಿತವಾಗಿರಲಿಲ್ಲ’. ಆದರೆ, ಗಡಿಭಾಗವೆಂಬ ಪ್ರೀತಿ, ಬೆಳಗಾವಿಯಲ್ಲಿದ್ದ ಮರಾಠಿಗರ ಕನ್ನಡ ವಿರೋಧಿ ಧೋರಣೆ ಎಲ್ಲವೂ ಕನ್ನಡಿಗರನ್ನು ಏಕಸೂತ್ರದಲ್ಲಿ ಬೆಸೆಯುವಂತೆ ಮಾಡಿತು. ಕನ್ನಡ ಮತ್ತು ಕರ್ನಾಟಕದ ಮೇಲಿನ ಪ್ರೀತಿ-ಭಕ್ತಿಯ ಎದುರು ಯಾವ ಕೊರತೆಯೂ ಬಾಧಿಸಲಿಲ್ಲ. ಮರಾಠಿಗರೂ ಅಷ್ಟೇ ಸಹಕರಿಸಿದರು. 50 ವರ್ಷದ ಇತಿಹಾಸದಲ್ಲಿ ಯಾವುದೇ ಸಮ್ಮೇಳನ ಗದ್ದಲವಿಲ್ಲದೇ ಮುಗಿದಿದ್ದಿಲ್ಲ. ಈ ಸಮ್ಮೇಳನಕ್ಕೆ ಅಂಥ ಅಪಕೀರ್ತಿ ಬಂದಿಲ್ಲವೆಂಬುದೇ ಸಮಾಧಾನ.
ಬೆಳಗಾವಿಗರಲ್ಲಿ ವಿಶ್ವಾಸ
ರಾಜ್ಯ, ದೇಶ, ವಿದೇಶಗಳಿಂದ ಸಾಕಷ್ಟು ಹರಿದು ಬಂದ ಜನಸ್ತೋಮ ರಾಜಕೀಯ ಮುಖಂಡರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಸಮ್ಮೇಳನದ ಸಂಘಟಕರಿಗೆ ಜನ ಬರಬೇಕಿತ್ತು, ತಾವು-ತಮ್ಮ ಸಾಧನೆ ರಾರಾಜಿಸಬೇಕಿತ್ತು. ಅವೆರಡೂ ಕೆಲಸ ಸಾಧ್ಯವಾಯಿತು. ಈ ಪ್ರಯತ್ನ ಬೆಳಗಾವಿ ಕನ್ನಡಿಗರಲ್ಲಿ ಮೂಡಿಸಿರುವ ವಿಶ್ವಾಸ ಮತ್ತು ತಾಯಿ ನಾಡಿನ ಮೇಲಿನ ಒಲುಮೆಗೆ ಬೆಲೆ ಕಟ್ಟಲಾಗದು. 37 ಕೋಟಿ ರೂ. ವೆಚ್ಚದಲ್ಲಿ ಸಂಘಟಿಸಿದ ಸಮ್ಮೇಳನದಿಂದ ಬೆಳಗಾವಿಗರಿಗೆ ಆದ ಕಣ್ಣಿಗೆ ತೋರುವ ಲಾಭವೆಂದರೆ ರಸ್ತೆ ಇತ್ಯಾದಿ ಅಭಿವೃದ್ಧಿ ಕಾರ್ಯಗಳು.

ಒಟ್ಟು ಐದು ದಿನಗಳಲ್ಲಿ ಅಂದಾಜಿನ ಪ್ರಕಾರ ಮೂರು ಕೋಟಿ ರೂ. ನಷ್ಟು ಪುಸ್ತಕ ಮಾರಾಟವಾಗಿದೆ. 19 ಗೋಷ್ಠಿಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಚರ್ಚೆ ನಡೆಯಿತು. ಕಲಾಪ್ರದರ್ಶನಕ್ಕೆ ಹೆಚ್ಚಿನ ಜನಸ್ತೋಮ ಹರಿದುಬಂದಿತು. ರಾತ್ರಿ ಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನಸಂಖ್ಯೆ ಕರಗಲೇ ಇಲ್ಲ. ಮೂರು ದಿನಗಳಲ್ಲಿ 2 ರಿಂದ 3 ಲಕ್ಷದಷ್ಟು ಮಂದಿ ಊಟೋಪಚಾರ ಪಡೆದರು. ವಸತಿ ಮತ್ತು ಊಟದ ವ್ಯವಸ್ಥೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಶ್ರಮ ಹಾಕಬೇಕಿತ್ತು. ವಸತಿ ವ್ಯವಸ್ಥೆಯಂತೂ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ಆರ್ಥಿಕ ಚಟುವಟಿಕೆ
ಸಮ್ಮೇಳನ ಒಂದು ವಾರ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಇಂಬು ನೀಡಿತು. ಅಂದಾಜಿನ ಪ್ರಕಾರ ನೂರು ಕೋಟಿ ರೂ. ನಷ್ಟು ವಹಿವಾಟು ನಡೆದಿದೆ. ಸುಮಾರು 15 ಸಾವಿರ ಕೆ. ಜಿ ಯಷ್ಟು ಕುಂದ ಮತ್ತು ಕರದಂಟು ಮಾರಾಟವಾಗಿದೆ. ಉಳಿದಂತೆ ಪ್ರವಾಸೋದ್ಯಮ, ಆತಿಥ್ಯ ಉದ್ಯಮವೆಲ್ಲದಕ್ಕೂ ವ್ಯಾಪಾರ ಚೆನ್ನಾಗಿತ್ತು. ಹೊರದೇಶಗಳಿಂದ 150 ಮಂದಿ ಅನಿವಾಸಿ ಕನ್ನಡಿಗರು ಹಾಗೂ ವಿವಿಧ ರಾಜ್ಯಗಳಿಂದ ೨೦೦ ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು ಸಮ್ಮೇಳನದ ಮಹತ್ವವನ್ನು ಹೆಚ್ಚಿಸಿತು. ಇದೇ ಸಂದ‘ದಲ್ಲಿ ಸಮ್ಮೇಳನದ ನೆನಪಿಗೆ 110 ಮೇರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ದುರಂತವೆಂದರೆ ಈ ಪಟ್ಟಿಯಲ್ಲಿ ಕಾರಂತ, ಮಾಸ್ತಿ, ಬೇಂದ್ರೆಯವರ ಕೃತಿ ಇರಲಿಲ್ಲ. ಇದರೊಂದಿಗೆ ‘ಪುನರಾವಲೋಕನ’ ಎಂಬ ಸ್ಮರಣ ಸಂಚಿಕೆಯೂ ಪ್ರಕಟಗೊಂಡಿತು.
ಹೊಸ ವ್ಯಾಖ್ಯೆ
ಈ ವಿಶ್ವ ಕನ್ನಡ ಸಮ್ಮೇಳನದ ಮೂಲಕ ಹೊಸ ವ್ಯಾಖ್ಯೆ ಸ್ಪಷ್ಟಗೊಂಡಿದೆ. ಇದುವರೆಗೆ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳಿಗೆ ವೇದಿಕೆ ನೀಡಬೇಕೇ ? ಬೇಡವೇ ? ಎಂಬ ದೊಡ್ಡ ಚರ್ಚೆಗೆ ಸರಕಾರ, ರಾಜಕಾರಣಿಗಳು ಹುಡುಕಿಕೊಂಡ ಉತ್ತರವಿದು. ಇನ್ನು ಮುಂದೆ ಐದು ವರ್ಷಕ್ಕೊಮ್ಮೆ ನಡೆಯುವುದಾದರೆ ಅದರ ದುರ್ಬಳಕೆ ತಡೆಯದಂತೆ ಎಚ್ಚರಿಸುವ ಹೊಣೆಯೂ ಈಗ ಕನ್ನಡಿಗರದ್ದಾಗಿದೆ. ಅಂಥದೊಂದು ಅಪವಾದ ಬಾರದಂತೆ ನಿರ್ವಹಿಸುವುದೂ ಸಂಘಟಕರ ಜವಾಬ್ದಾರಿಯಾಗಿದೆ. ಒಟ್ಟೂ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು ಬಿಟ್ಟರೆ ಸರಕಾರದ ಹೆಜ್ಜೆಗಳ ಆತ್ಮಾವಲೋಕನವಾಗಬೇಕಿದ್ದ ವೇದಿಕೆ ಅಂಥ ಉನ್ನತ ಮಟ್ಟವನ್ನು ತಲುಪಲಿಲ್ಲ ಎಂಬುದು ಸ್ಪಷ್ಟ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s