Latest Entries
ಬಿಕ್ಕಿದ ಸಾಲು

ಹಾಗಾಗಬಾರದಿತ್ತು

ಅವನು ಹಾಗೆ ಅಂದುಕೊಂಡಿದ್ದರೆ ಏನೂ ಆಗುತ್ತಿರಲಿಲ್ಲ.. ಅವಳೂ ಅಂದೇ ಸಿಗುತ್ತಿದ್ದಳು ಸಂಜೆಯಾಯಿತು ಇವನು ಅಂದುಕೊಳ್ಳುವಷ್ಟರಲ್ಲಿ ಅರಳಿದ ಮಲ್ಲಿಗೆಯೂ ನಿದ್ರೆಗೆ ಜಾರಿತು ಚಂದಿರ ಬರುವುದನ್ನೇ ಕಾಯುತ್ತಿದ್ದಾನೆ ಹೇಗೋ ಅಮಾವಾಸ್ಯೆ ಕಳೆಯಲೇಬೇಕು ಅವಳಿಲ್ಲದೇ ಓದನ್ನು ಮುಂದುವರೆಸಿ

ಪುಟ್ಟ ಪುಟ್ಟ ಕಥೆಗಳು

ಮತ್ತೊಂದು ಪುಟ್ಟ ಕಥೆ

ಒಂದು ಪುಟ್ಟ ಕಥೆ. ಒಂದು ಗುಬ್ಬಚ್ಚಿ ಒಂದು ಗೂಡು ಕಟ್ಟಿಕೊಂಡು ಬದುಕುತ್ತಿತ್ತಂತೆ. ಒಮ್ಮೇ ಹೀಗೇ ಹಾರಿ ಹೋಗುವಾಗ ಹದ್ದೊಂದು ಎದುರಾಯಿತಂತೆ. ಅದು ಗುಬ್ಬಚ್ಚಿಯನ್ನು ತಡೆದು ನಿಲ್ಲಿಸಿ, “ನೀನು ಹೀಗೆ ಪುಟ್ಟಗೆ, ಗರ್ಜಿಸದೇ ಇದ್ದರೆ ಯಾರೂ ಗಮನಿಸುವುದಿಲ್ಲ. ಎಲ್ಲರೂ ನಿನ್ನ ಮೇಲೆ ಸವಾರಿ ಮಾಡುತ್ತಾರೆ. ಅದಕ್ಕೇ ನನ್ನ ಹಾಗೆ ಇರಬೇಕು, ನೋಡು ನನಗೀಗ ಯಾರೂ ಏನೂ ಮಾಡುವುದಿಲ್ಲ. ನಾನೆಂದರೆ ದಾರಿ ಬಿಡುತ್ತಾರೆ’ ಎಂದಿತಂತೆ. ಮೊದಲು ಗುಬ್ಬಚ್ಚಿಗೆ ಸರಿ ಎನಿಸಲಿಲ್ಲ. “ಇಲ್ಲ, ನಾನಿರುವುದೇ ಹೀಗೆ, ಹೀಗಿದ್ದರೇ ನನ್ನನ್ನು ಗುರುತಿಸುತ್ತಾರೆ, ಗೌರವಿಸುತ್ತಾರೆ’ … ಓದನ್ನು ಮುಂದುವರೆಸಿ

ಚಿತ್ರಿಕೆ

ದಂಡುಪಾಳ್ಯ : ಸೆನ್ಸಾರ್ ಇಲ್ಲದ ಕ್ರೈಂಡೈರಿ

ಹಿಂಸೆಯನ್ನು ಕಲಾತ್ಮಕವಾಗಿ ತೋರಿಸುವುದು ಹೇಗೆ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟುಕೊಂಡು ಗಮನಿಸಿದರೆ ವಿಚಿತ್ರವಾದ ಅಭಿಪ್ರಾಯ ಮೂಡಬಹುದು. ಹಿಂಸೆಯೆಂಬುದೇ ಮಾನವ ವಿರೋಧಿ. ಅದನ್ನು ಕಲಾತ್ಮಕವಾಗಿ ತೋರಿಸುವುದು ಎಂದರೆ ಹೇಗೆ ಎಂದೂ ಅನಿಸಬಹುದು.  ಹಿಂಸೆ ನಮ್ಮ ಬದುಕಿನ ಭಾಗವೂ ಆಗಿರುವುದರಿಂದ ಭೀಭತ್ಸದ ನೆಲೆಯಲ್ಲಿ ಅದಕ್ಕೊಂದು ಸ್ಥಾನವನ್ನೂ ಕಲ್ಪಿಸಿದ್ದೇವೆ. ಹಾಗೆ ನೋಡುವುದಾದರೆ ಆ ಭೀಭತ್ಸತೆಗೂ ಮಿತಿ ಇದೆಯೇ ಎಂಬುದು ಚರ್ಚೆಗೆ ಯೋಗ್ಯವಾದ ಪ್ರಶ್ನೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ನಿರ್ದೇಶಕ ಶ್ರೀನಿವಾಸ್ ಬಾಬು ಅವರ ದಂಡುಪಾಳ್ಯ ಇಂಥದ್ದೇ ಪ್ರಶ್ನೆಯನ್ನು ಚರ್ಚೆಗೆ ಆಗು ಮಾಡುತ್ತದೆ. ಓಂ … ಓದನ್ನು ಮುಂದುವರೆಸಿ

ಬಿಕ್ಕಿದ ಸಾಲು

ಒಂದಿಷ್ಟು ಸಾಲು..ಅನಿಸಿದ್ದು..ಬರೆದದ್ದು

ಬೊಗಸೆ ಹಿಡಿದು ನಿಂತಿದ್ದೆ. ಕೈ ತುಂಬಾ ಬೆಳಕನ್ನು ಸುರಿದುಬಿಟ್ಟ ಆತ. ಈಗ ಚೂರು ಕತ್ತಲೆಯನ್ನು ಹುಡುಕುತ್ತಿದ್ದೇನೆ..ಬೆಳಕಿಗೆ ದೃಷ್ಟಿ ಬೊಟ್ಟು ಇಡಬೇಕು.,,! ** ಒಂದು ಪುಟ್ಟ ಕಥೆ. ಹೇಳುವುದರಲ್ಲೇ ಮುಗಿದು ಹೋಗಿಬಿಡುತ್ತೆ…ಮಗು ಪುಟ್ಟದು, ಓಡುತ್ತಿತ್ತು ಪುಟಪುಟನೆ…ಹೆಜ್ಜೆಯ ಶಬ್ದವೂ ಕೇಳುತ್ತಿರಲಿಲ್ಲ…ಓಡುವಾಗ ಚಪ್ಪಲಿಯನ್ನೂ ಹಾಕಿರಲಿಲ್ಲ. ಹಾಗಾಗಿ ಚಪ್ಪಲಿ ಪೀಪಿಯ ಶಬ್ದವೂ ಇಲ್ಲ..ನಾನೂ ಹಾಗೇ ಓಡತೊಡಗಿದೆ…ಮಗು ಹಿಂತಿರುಗಿ ನೋಡಿ ನಕ್ಕಿತು..ನಾನು ಗಲಿಬಿಲಿಗೊಂಡೆ..ಮಗು ಯಾಕೆ ನಗುತ್ತಿದೆ ಎಂದು. ಅದು ಇನ್ನಷ್ಟು ಪುಟ ಪುಟನೆ ನೆಗೆಯುವಂತೆ ಓಡತೊಡಗಿತು. ನಾನು ಹಿಡಿಯಲು ಹೋದವ ಬಿದ್ದುಬಿಟ್ಟೆ…ಈಗ ಮಗು ನಿಂತು … ಓದನ್ನು ಮುಂದುವರೆಸಿ

ವರ್ತಮಾನದ ಕಥೆಗಳು

ವರ್ತಮಾನದ ಕಥೆ-1

ಇದು ವರ್ತಮಾನದ ಕಥೆಗಳು. ಇತ್ತೀಚೆಗೆ ಒಂದಿಷ್ಟು ಬರೆದದ್ದು. ಇವುಗಳನ್ನು ಒಂದೊಂದೇ ಪೋಸ್ಟ್ ಮಾಡುವೆ. ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ದಯವಿಟ್ಟು ಹೇಳಿ. ಒಂದು ಬೇಸಗೆಯಲ್ಲಿ ಒಂದೂರಿನಲ್ಲಿ ಒಬ್ಬನೇ ರಾಜನಿದ್ದ. ದಿನವೂ ನೋಡಿಕೊಂಡಷ್ಟೇ ಪ್ರದೇಶವನ್ನು ನೋಡಿಕೊಂಡು ಬೇಸರವಾಗಿತ್ತು. ಚಿಕ್ಕ ಪ್ರದೇಶವಾದರೂ ಸಿಕ್ಕಾಪಟ್ಟೆ ಆಸ್ತಿ, ಕಾಲಾಳು, ಸೈನ್ಯ ಎಲ್ಲವಿತ್ತು. ಯಾವುದಕ್ಕೂ ಬರವಿರಲಿಲ್ಲ, ಒಳ್ಳೆ ಸಚ್ಚಾರಿತ್ರ್ಯದ ಹೆಂಡತಿಯೂ ಇದ್ದಳು. ಆದರೂ ಏಕೋ ಬೇಸರ ಹೋಗಲಿಲ್ಲ. ರಾಜ್ಯ ವಿಸ್ತರಣೆ ಮಾಡಬೇಕೆಂದು ತೀರ್ಮಾನಿಸಿ ದಿಗ್ವಿಜಯಕ್ಕೆ ಹೊರಟ. ಅಶ್ವಮೇಧ ಕುದುರೆಯನ್ನು ಬಿಟ್ಟು ವ್ಯವಹಾರ ಮುಗಿಸೋಣವೆಂದರೆ ಕುದುರೆಗಳಿಲ್ಲದ ಕಾಲವದು. … ಓದನ್ನು ಮುಂದುವರೆಸಿ

ಚಿತ್ರಿಕೆ

ಅದಕ್ಕೆ ಬೇರೆ ಉತ್ತರವಿಲ್ಲ !

ಧಾರಾಳಿ ಮಹಾ ಎನ್ನುವಷ್ಟು. ಕೇಳಿದವರಿಗೆಲ್ಲಾ ಹಂಚುತ್ತಲೇ ಇರುವಾತ. ಲೆಕ್ಕವೇನನ್ನೂ ಕೇಳುವುದಿಲ್ಲ. ಹಾಗೆಂದು ಲೆಕ್ಕವಿಟ್ಟುಕೊಳ್ಳುವುದಿಲ್ಲ ಎನ್ನುವಂತಿಲ್ಲ. ಅದಕ್ಕೆ ಬೇರೊಬ್ಬನಿದ್ದಾನೆ. ಅವನು ಮಹಾ ಜಿಪುಣ. ಪಕ್ಕದಮನೆಯಿಂದ ಒಗ್ಗರಣೆಗೆಂದು ತಂದ ಎರಡು ಸಾಸಿವೆ ಕಾಳನ್ನೂ ಬರೆದಿಟ್ಟುಕೊಳ್ಳುತ್ತಾನೆ. ಮೊನ್ನೆ ಹೀಗೇ..ಇದ್ದಕ್ಕಿದ್ದಂತೆ ಭರ್ರನೆ ಮಳೆ ಸುರಿದಂತೆ ಗಿರಾಕಿಗಳು ಬಂದು ತುಂಬಿಕೊಂಡರು. ಎಲ್ಲಿದ್ದರೋ, ಎಲ್ಲರ ಮುಖದಲ್ಲೂ ಹಸಿವೆಯ ಕಳೆಯಂತೂ ಕುಣಿಯುತ್ತಿತ್ತು. ಇದ್ದದ್ದು ಹತ್ತೇ ಟೇಬಲ್ಲುಗಳು. ಅವುಗಳಲ್ಲಿ ಈ ಮೊದಲೇ ಬಂದವರೆಲ್ಲಾ ತುಂಬಿದ್ದರು. ಇನ್ನು ಇವರಿಗೆಲ್ಲಿ ಜಾಗ ? ಹಸಿವೆಗೆ ಹೇಳಲು ಬೇರೆ ಉತ್ತರವಿರಲಿಲ್ಲ, ಅದಕ್ಕಾಗೇ ಕಾದರು … ಓದನ್ನು ಮುಂದುವರೆಸಿ

ಪುಟ್ಟ ಪುಟ್ಟ ಕಥೆಗಳು

ಪುಟ್ಟ ಕಥೆ

ಇದು ನನ್ನ ಮತ್ತೊಂದು ಪುಟ್ಟ ಕಥೆ ಒಂದು ಚೆಂದದ ಗೊಂಬೆಯನ್ನು ತಂದಿದ್ದ. ಬಹಳ ಚೆನ್ನಾಗಿತ್ತು, ನೋಡಿ ನೋಡಿ ಮೈ ಮರೆತ. ಯಾಕೋ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆನಿಸಿತು. ಕನ್ನಡಿ ಎದುರಿಗೆ ನಿಂತ. ಗೊಂಬೆಗಿಂತ ತಾನೇ ಕುರೂಪ ಎನಿಸಿತು. ಸಿಟ್ಟು ಬಂತು. ಗೊಂಬೆಯ ಒಂದೊಂದೇ ಅವಯವಗಳನ್ನು ಬಿಡಿಸುತ್ತಾ ಹೊರಟ. ಸ್ವಲ್ಪ ಶ್ರಮವೆನಿಸಿತು. ಆದರೂ ಕೊನೆಗೆ ಅವನೇ ಗೆದ್ದ. ಎಲ್ಲವೂ ಈಗ ಕಣ್ಣೆದುರು ಬಿದ್ದಿದೆ. ಈಗ ಮತ್ತೆ ಕನ್ನಡಿ ಎದುರು ನಿಂತ. ಈಗ ಯಾಕೋ ಮತ್ತಷ್ಟು ಕುರೂಪ ಎನಿಸತೊಡಗಿತು. ಬೇಸರದಿಂದ ಅವನ್ನೆಲ್ಲಾ … ಓದನ್ನು ಮುಂದುವರೆಸಿ