ಹಲವು

ನನ್ನ ಚಿತ್ರಗಳ ಬ್ಲಾಗ್

ಹೌದು, ಬಹಳ ದಿನಗಳ ಕನಸು. ಫೋಟೋಗ್ರಫಿ ನನ್ನ ಆಸಕ್ತಿಯ ಕ್ಷೇತ್ರ. ಈಗ ತಾನೇ ಕಲಿಯಲು ಶುರು ಮಾಡಿದ್ದೇನೆ. ಹೀಗೆ ಸಿಕ್ಕ ಚಿತ್ರಗಳನ್ನು ಕ್ಲಿಕ್ಕಿಸಿ, ಒಂದೆಡೆಗೆ ರಾಶಿ ಹಾಕಬೇಕೆಂದೆನಿಸಿತ್ತು.ಅದೇ ಪ್ರಯತ್ನ ಸಾಗಿದೆ. ಮೊನ್ನೆ ತಾನೇ ಮುಗಿದ ಕುದ್ರೋಳಿ ದಸರಾದ ಒಂದಿಷ್ಟು ಫೋಟೋಗಳನ್ನು ಹಾಕಿದ್ದೇನೆ. ಈ ಚಿತ್ರಗಳಿಗಾಗಿ ಚಿತ್ರಸಾಲು ಬ್ಲಾಗ್ ಮಾಡಿದ್ದೇನೆ. ಅಲ್ಲಿಗೆ ಹೋಗಿ ನೋಡಿ, ಅಭಿಪ್ರಾಯಿಸಿ. Advertisements ಓದನ್ನು ಮುಂದುವರೆಸಿ

ಹಲವು

ಭ್ರಷ್ಟಾಚಾರ ವಿರುದ್ಧ ಭಾರತ- ಬನ್ನಿ, ಕೈ ಜೋಡಿಸೋಣ

ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವ ಕಾಲವಿದು. ಅಣ್ಣಾ ಹಜಾರೆಯವರು ಜನಲೋಕಪಾಲ್ ಕಾಯಿದೆಗೆ ಒತ್ತಾಯಿಸಿ, ಭ್ರಷ್ಟಾಚಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದರೆ ಕೇಂದ್ರ ಸರಕಾರದವರು ಬಂಧಿಸುತ್ತದೆ. ಇದು ಎಂತಹ ಹೇಯವಾದುದು ಎಂದರೆ, ಪ್ರತಿಭಟಿಸಲೂ ಸ್ವಾತಂತ್ರ್ಯವಿಲ್ಲವೆಂದಾದರೆ 65 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಯೂ ಏನು ಪ್ರಯೋಜನ ? ಇಂದಿನಿಂದ ಆರಂಭವಾದ (ಆ.16) ಸತ್ಯಾಗ್ರಹವನ್ನು ಪ್ರಾರಂಭದಲ್ಲೇ ಹತ್ತಿಕ್ಕಲು ಪ್ರಯತ್ನಿಸಿದ ಕೇಂದ್ರ ಸರಕಾರ ಅಣ್ಣಾ ಹಜಾರೆ ಮತ್ತು ಬೆಂಬಲಿಗರನ್ನು ಬಂಧಿಸಿದ್ದಾರೆ. ಕಾರಣವನ್ನೇ ನೀಡದೇ ಬಂಧಿಸುವುದು ಎಷ್ಟೊಂದು ಅಸಾಂವಿಧಾನಿಕವೆಂಬುದು ನಮ್ಮ ಅತ್ಯಂತ ಪರಿಣಿತ ಹಾಗೂ ವಿದ್ಯಾವಂತ … ಓದನ್ನು ಮುಂದುವರೆಸಿ

ಹಲವು

ಎಲ್ಲರಿಗೂ ಧನ್ಯವಾದಗಳು

ಆಕಾಶದ ಮತ್ತೊಂದು ತುದಿಯನ್ನು ಕಾಣುವ ಹಂಬಲ ಸದ್ಯಕ್ಕೀಗ. ನನ್ನ ಕಾರ್ಯಕ್ಷೇತ್ರ ಬದಲಾಗಿದೆ. ಮಂಗಳೂರಿನ ವಿಜಯ ಕರ್ನಾಟಕದ ಬಳಗಕ್ಕೆ ಸದಸ್ಯನಾಗುತ್ತಿದ್ದೇನೆ. ಆ ಬಳಗದೊಂದಿಗೆ ಒಂದಾಗುವುದು ನನ್ನ ಮುಂದಿನ ನಡೆ. ನನ್ನೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂದಿದ್ದಾಗ ಉಡುಪಿಯ ಕೋಡಿ, ಕೊಡಪಾಡಿ. ಈಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಎಂದು ಹೇಳಬೇಕು. ಆದರೆ ಬೆಳೆದದ್ದು ಬೇರೆ ಬೇರೆ ಕಡೆ. ಶಿವಮೊಗ್ಗದಿಂದ ಹಿಡಿದು ಮೈಸೂರುವರೆಗೆ. ಪತ್ರಿಕೋದ್ಯಮ ಜೀವನದಲ್ಲಿ ಮಂಗಳೂರು ವಿಭಾಗದಲ್ಲಿ ಕೆಲಸ ಮಾಡಿಲ್ಲ. ಆ ಭಾಗದಲ್ಲೂ ಕೆಲಸಮಾಡಬೇಕೆಂಬ ತೀವ್ರತೆ ಇದ್ದದ್ದು … ಓದನ್ನು ಮುಂದುವರೆಸಿ

ಹಲವು

ಗುಲ್ವಾಡಿಯವರು ಇನ್ನಿಲ್ಲ

ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಇನ್ನಿಲ್ಲ. 72 ವರ್ಷ ವಯಸ್ಸಿನವರಾದ ಅವರು, ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಗುಲ್ವಾಡಿಯವರು, ಒಂದು ತಲೆಮಾರಿನ ಪತ್ರಿಕೋದ್ಯಮವನ್ನು ಬೆಳೆಸಿದವರು. ಅದರಲ್ಲೂ ವಾರಪತ್ರಿಕೆಯ ಟ್ರೆಂಡ್ ನ್ನು ಭಿನ್ನ ನೆಲೆಯಲ್ಲಿ ಸಾಗುವಂತೆ ಮಾಡಿದವರೂ ಅವರೇ. “ತರಂಗ” ವಾರಪತ್ರಿಕೆಯ ಸಂಪಾದಕರಾಗಿ ಹೊಸ ಹೊಸ ಪ್ರಯೋಗಗಳತ್ತ ಮುಖ ಮಾಡಿದವರು. ನಂತರ ಸಾಕಷ್ಟು ವರ್ಷ ಆ ಪತ್ರಿಕೆಯಲ್ಲಿ ದುಡಿದ ಅವರು, ಹತ್ತು ವರ್ಷದ ಹಿಂದೆ ವಿಜಯ ಸಂಕೇಶ್ವರರು ಆರಂಭಿಸಿದ ‘ನೂತನ’ ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಮುಂಬಯಿನಲ್ಲೂ … ಓದನ್ನು ಮುಂದುವರೆಸಿ

ಚಿತ್ರಿಕೆ / ಹಲವು

ಬದಲಾಗುತ್ತಿದ್ದೇವೆ…ಪತ್ರಿಕೋದ್ಯಮ ಶಿಕ್ಷಣಕ್ಕೆ ಹೊಸ ಬ್ಲಾಗ್ !

ಬಹಳ ದಿನಗಳಾಯ್ತು ಬ್ಲಾಗಿನ ಕಡೆ ಮುಖ ಹಾಕಿರಲಿಲ್ಲ. ಬದಲಾಗುವ ಸನ್ನಿವೇಶದಲ್ಲಿ ಹೊಸದೊಂದು ರೀತಿಯಲ್ಲಿ ಏನಾದರೂ ಕೈಗೊಳ್ಳಬೇಕೆಂದು ಯೋಚಿಸುತ್ತಿದ್ದೆ. ಆ ದಿಕ್ಕಿನಲ್ಲಿ ಕಾರ್ಯ ಮಗ್ನನಾಗಿದ್ದೆ. ಬ್ಲಾಗ್ ಹೊರತಾದ ಒಂದೆರಡು ಅಸೈನ್ ಮೆಂಟಗಳಿದ್ದವು. ಅದರಲ್ಲಿ ತೊಡಗಿಕೊಂಡಿದ್ದೆ. ಅದೂ ಮುಕ್ಕಾಲುವಾಸಿ ಮುಗಿದಿದೆ. ಬ್ಲಾಗ್ ಅನ್ನು ಒಂದು ಸದ್ದುದ್ದೇಶಕ್ಕೂ ಈಡೇರಬೇಕು ಎಂದು ವಾದಿಸುತ್ತಾ ಬಂದವನಲ್ಲಿ ನಾನೂ ಒಬ್ಬ. ಈ ಹಿನ್ನೆಲೆಯಲ್ಲಿ ಹೊಸ ಹೆಜ್ಜೆಗೆ ಅಡಿಯಿಡುತ್ತಿದ್ದೇನೆ. ಇದು ನನ್ನ ಹಲವು ದಿನಗಳ ಕನಸೂ ಸಹ. ನನ್ನ ಕ್ಷೇತ್ರ ಪತ್ರಿಕೋದ್ಯಮ. ಈ ಕ್ಷೇತ್ರದತ್ತ ಒಲವಿಟ್ಟು ಬರುವವರ … ಓದನ್ನು ಮುಂದುವರೆಸಿ

ಹಲವು

ನಾವು ಬದಲಾಗುತ್ತಿದ್ದೇವೆ !

ಎಲ್ಲರೂ ಬದಲಾಗುತ್ತಿದ್ದಾರೆ. ಜಗತ್ತೂ ಸಹ. ಏನೇನೋ ಕಾರಣ ನೀಡಿ ಜಗತ್ತಿನಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಎಲ್ಲದಕ್ಕೂ ಸ್ಪಷ್ಟ ಕಾರಣಗಳಿಲ್ಲ. ನಮಗೆ ಸ್ಪಷ್ಟ ಕಾರಣಗಳಿವೆ. ಸದ್ಯವೇ ಬದಲಾಗುತ್ತಿದ್ದೇವೆ. ಈ ಬದಲಾವಣೆ ನನ್ನ ಎರಡೂ ಬ್ಲಾಗುಗಳಲ್ಲಿ ಶೀಘ್ರವೇ ಕಾಣಲಿವೆ. ಜಂಬೂ ಸವಾರಿ ಮೆರವಣಿಗೆ ಮುಂದೆ ಹೋಗಲಿ…ಹಿಂದೆ ಬದಲಾವಣೆಯೊಂದಿಗೆ ಬರುತ್ತೇವೆ…! ಪರಿವರ್ತನೆ ಜಗದ ನಿಯಮ…! ಓದನ್ನು ಮುಂದುವರೆಸಿ

ಹಲವು

ಬ್ಲಾಗ್ ಸ್ಪಾಟ್ ನ ಚೆಂಡೆಮದ್ದಳೆಗೂ ಭೇಟಿ ಕೊಡಿ…!

ಗೆಳೆಯರೇ, ನಾನು ಮೊದಲು ಚೆಂಡೆಮದ್ದಳೆ ಬ್ಲಾಗ್ ಆರಂಭಿಸಿದ್ದು ಬ್ಲಾಗ್ ಸ್ಪಾಟ್ ನಲ್ಲಿ. ಆದರೆ ಯಾಕೋ ಅದರ ನಿರ್ವಹಣೆ ಬಹಳ ಕಷ್ಟ ಎನಿಸಿತ್ತು. ಹಾಗಾಗಿ ಯಾಕೋ ಬೇಡ ಎನಿಸಿ ಹೀಗೇ ಸಿಕ್ಕಿದ ವರ್ಡ್ ಪ್ರೆಸ್ ಗೆ ಬಂದು ಬ್ಲಾಗ್ ಆರಂಭಿಸಿದೆ. ಈಗಾಗಲೇ ಒಂದು ವರ್ಷದಿಂದ ನಮ್ಮ ಬರಹ ಸಾಗಿದೆ. ಇತ್ತೀಚೆಗೆ ಸುಧನ್ವಾ ಬದಲಿಸಿದ ಟೆಂಪ್ಲೇಟ್ ನೋಡಿ ನನಗೂ ಯಾಕೋ ಖುಷಿಯಾಯ್ತು. ಆ ದಾರಿ ಹುಡುಕಿಕೊಂಡು ಹೋದಾಗ ಹೊಸ ಟೆಂಪ್ಲೇಟ್ ಸಿಕ್ಕಿತು. ಮೊದಲು ಅಪ್ ಲೋಡ್ ಕಷ್ಟ ಎನಿಸಿತು. ಆದರೆ … ಓದನ್ನು ಮುಂದುವರೆಸಿ