ಸುಲಲಿತ

ಒಂದು ಮುಂಜಾನೆ…ಒಂದು ಕುನ್ನಕುಡಿ…

ಒಂದು ಮುಂಜಾನೆ, ಒಂದು ಕುನ್ನಕುಡಿ, ಒಂದು ಗಂಟೆಯ ಆಟ ಹಾಗೂ…. ಆರು ತಿಂಗಳಿಂದ ನನಗೆ ಭಾನುವಾರದ ಬೆಳಗ್ಗೆಯಾಗುವುದು ಸಂಪಾಜೆ ದಾಟಿದ ಮೇಲೋ, ಸಕಲೇಶಪುರ ದಾಟಿ ಚಾರ್ಮಾಡಿ ಮುಟ್ಟಿದಾಗಲೋ. ಸಾಮಾನ್ಯವಾಗಿ ಪ್ರತಿ ಶನಿವಾರ ರಾತ್ರಿ ಊರಿಗೆ ಹೊರಡುತ್ತೇನೆ. ಅಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳು ಹಾಗೂ ಅಮ್ಮ. ರಾತ್ರಿ ಹನ್ನೊಂದುವರೆ ಬಸ್ಸಿಗೆ ಹತ್ತಿದರೆ ಬೆಳಗ್ಗೆ ಆರರ ಹೊತ್ತಿಗೆ, ಕಂಡಕ್ಟರ್ “ಸಾರ್, ಮಾಣಿ ಬಂತು’ ಎನ್ನುತ್ತಾರೆ. ಇಳಿದು, 6.15 ಬಸ್ಸಿಗೆ ಕಾಯಬೇಕು, ಎಲ್ಲ ಮುಗಿದು ಮನೆಗೆ ಮುಟ್ಟುವಾಗ 7.30. ಮಗಳು … ಓದನ್ನು ಮುಂದುವರೆಸಿ

ಸುಲಲಿತ

ಕೊಳಲಗೀತ

ಯಾಕೋ ಕೃಷ್ಣ ಇದ್ದಕ್ಕಿದ್ದಂತೆ ನೆನಪಾದ. ಹಂಗಾಮದಲ್ಲಿ ಹೀಗೇ ಬರೆದ ಒಂದು “ಲಲಿತ” ಸಿಕ್ಕಿತು. ಅದನ್ನು ಇಲ್ಲಿ ಹಾಕಿದ್ದೇನೆ. ಓದಿ ಹೇಳಿ. ನನ್ನನ್ನು ಯಾವಾಗಲೂ ಕಾಡುವುದು ಕೊಳಲು. ಅದಕ್ಕಿರುವ ಭವ್ಯತೆ ಹಾಗೂ ಭಾವ ತೀವ್ರತೆ ಯಾವುದಕ್ಕೂ ಇಲ್ಲವೆ೦ದೇ ತೋರುತ್ತದೆ. ಅದರ ನಾದವೇ ಅದ್ಭುತ. ಮನಸ್ಸನ್ನೇ ಸೆಳೆದುಕೊಳ್ಳಬಲ್ಲ ಶಕ್ತಿ ಸ೦ಗೀತಕ್ಕಿದೆ ಎ೦ಬುದು ನಿಜ. ಅದಕ್ಕಿ೦ತಲೂ ಕೊಳಲಿನಲ್ಲಿ ಮತ್ತೇನೋ ಮಾರ್ದವತೆ ಇದೆ ಎನಿಸುತ್ತದೆ. ನಾನು ಪ್ರತಿ ಬಾರಿ ಕೊಳಲು ಗಾನವನ್ನು ಕೇಳಿದಾಗ ಆರ್ದ್ರಗೊ೦ಡಿದ್ದೇನೆ. ಮನಸ್ಸು ತೇವಗೊ೦ಡಿದೆ ಎನಿಸುತ್ತದೆ. ರಸ್ತೆಯ ಮೇಲೆ ಕೊಳಲು … ಓದನ್ನು ಮುಂದುವರೆಸಿ

ಸುಲಲಿತ

ಅವನು ಮಗುವಾಗಿಯೇ ಇದ್ದ, ನಾನು ದೊಡ್ಡವನಾಗಿದ್ದೆ !

ಹೌದು, ನೀವು ಹೇಳಿದಂತೆಯೇ ಆಯಿತು. ಕಣ್ಣು ತುಂಬಿ ಬಂದಿತು. ಹೃದಯ ಭಾರವಾಯಿತು. ಆದರೂ ಹೊರಟು ಬಂದೆ. ನನ್ನ ಮಗ ಋತುಪರ್ಣ ಶಾಲೆಗೆ ಹೋದನೆಂಬ ಸಂಭ್ರಮದ ಹೆಗ್ಗಳಿಕೆಯೆಲ್ಲಾ ಈ ಮಧ್ಯೆ ಮಸುಕು ಮಸುಕಾಗಿ ತೋರಿತು. ಮಕ್ಕಳನ್ನು ಅನಿವಾರ್ಯವಾಗಿ ಶಾಲೆಗೆ ಕಳುಹಿಸಬೇಕಾದ ಸಂಕಷ್ಟ ಸಹಿಸಿಕೊಳ್ಳುವುದೇ ದೊಡ್ಡ ಕಷ್ಟವೆನಿಸಿದ್ದು ಆಗಲೇ. ಜೂ. ೧೧ ರಂದು ನನ್ನ ಮಗ ಮೊದಲ ದಿನ ಶಾಲೆಗೆ ಹೋದ. ಅವನ ಹಿಂದೆಯೇ ನಾನೂ ಮತ್ತು ನನ್ನ ಮಾವ ಅವನ ಶಾಲೆಯನ್ನು ನೋಡಿ ಬಂದೆವು. ಬಹಳ ಚೆನ್ನಾಗಿದೆ ಶಾಲೆ. … ಓದನ್ನು ಮುಂದುವರೆಸಿ

ಸುಲಲಿತ

ಕಣ್ಣ ಹನಿಗಳೊಂದಿಗೆ ಬರುತ್ತೇನೆ…!

ಮನಸ್ಸಿನೊಳಗೆ ಖುಷಿ ಕುಣಿದಾಡುತ್ತಿದೆ ; ಹಾಗೇ ಸುಮ್ಮನೆ ಬೀಸಿ ಬರುವ ಗಾಳಿಗೆ ಸಂಪಿಗೆ ಎಸಳುಗಳು ತೂಗಾಡಿದ ಹಾಗೆ.ಜೂ. ೧೧ ರಂದು ನನ್ನ ಮಗ ಶಾಲೆಗೆ ಹೋಗುತ್ತಿದ್ದಾನೆ. ಪಾಠಶಾಲೆಯ ಮೊದಲ ದಿನವದು. ನನ್ನೊಳಗೆ ಸಂಭ್ರಮದ ಹಕ್ಕಿಯ ರೆಕ್ಕೆ ಹಾರಿಸುತ್ತಿರುವ ಸದ್ದು ವರ್ಣಿಸಲಾಗದು. ಬ್ರಹ್ಮಾವರ ಬಳಿಯ ಸಾಲಿಕೇರಿಯ ಶಾಲೆಯೊಂದಕ್ಕೆ ಅವನ ಪ್ರವೇಶ. ನನ್ನ ಅಮ್ಮ, ಅಪ್ಪ ಇಂಥದೊಂದು ಸಂಭ್ರಮವನ್ನು ಕಂಡಿದ್ದರೋ, ಉಂಡಿದ್ದರೋ ತಿಳಿದಿಲ್ಲ. ನನಗೊಂದು ಅಂಥ ಅವಕಾಶ ಬಂದಿದೆ. ಸಾಲಿಗ್ರಾಮದಲ್ಲಿ ಅವನ ಅಜ್ಜನ ಮನೆಯಲ್ಲಿದ್ದು, ಓದುತ್ತಾನೆ ನನ್ನ ಮಗ. ಒಂದು … ಓದನ್ನು ಮುಂದುವರೆಸಿ

ಸುಲಲಿತ

ಸುವರ್ಣ ರಥ : ಒಂದು ಅನುಭವ

ತಮಾಷೆಯ ಸಂಗತಿ ಹೀಗೆ ಆರಂಭವಾಗುತ್ತದೆ, ನೋಡಿ. ಹಲವು ವರ್ಷಗಳ ಆಲೋಚನೆ ಜಾರಿಯಾದದ್ದು  ಮೊನ್ನೆ (ಫೆ.2). ರಾಷ್ಟ್ರಪತಿಯವರಾದ ಪ್ರತಿಭಾ ಪಾಟೀಲ್ ಬೆಂಗಳೂರಿನಲ್ಲಿ ಈ ರಥಕ್ಕೆ (ಲಕ್ಸುರಿ ಟ್ರೈನ್) ಚಾಲನೆ ನೀಡಿದರು. ಅಲ್ಲಿಂದ ಮಧ್ಯಾಹ್ನ 1. 40 ರ ಸುಮಾರಿಗೆ ಹೊರಟ ರಥ (ರೈಲು) ಬಂದು ಮೈಸೂರಿಗೆ ತಲುಪಿದ್ದು ಸಂಜೆ 4. 4೦ ಕ್ಕೆ. ಸಹಜವಾಗಿಯೇ ಸುದ್ದಿ ಮಾಡಲೆಂದು ಸುವರ್ಣ ರಥದ ನಿರೀಕ್ಷೆಯಲ್ಲಿದ್ದೆ ರೈಲ್ವೆ ಸ್ಟೇಷನ್‌ನಲ್ಲಿ. ತಿಳಿ ನೇರಳೆ ಬಣ್ಣಕ್ಕಿಂತ ಸ್ವಲ್ಪ ಕಡುವಾದ ಹಾಗೆಂದು ಕಡು ನೇರಳೆ ಬಣ್ಣ ಎಂದು … ಓದನ್ನು ಮುಂದುವರೆಸಿ

ಸುಲಲಿತ

ಕನಸು ಕರಗಿದ ಇಬ್ಬನಿ ?

ಆಕೆ, ಆತ, ಅವಳು, ಇವನು..ಹೀಗೆ ಎಷ್ಟೊಂದು ಮಂದಿ ವರ್ತಮಾನದ ವರ್ತುಲಕ್ಕೆ ಸಿಕ್ಕು ಕನಸು ಕಟ್ಟುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಕನಸು ಕಟ್ಟಲು ಅವರ ಮನಸ್ಸು ಸುತರಾಂ ಒಪ್ಪಲಾರದು. ಕನಸು ಕಾಣಲು ಏನುಂಟು ಅವರಲ್ಲಿ ? ಕಣ್ಣಿದ್ದರೇನಂತೆ. ಕಣ್ಣು ಮುಚ್ಚಿ ಕಲ್ಪಿಸಿಕೊಳ್ಳಲು ಅವರದ್ದೇ ಕ್ಷಣಗಳಿರಬೇಕಲ್ಲ. ಕಣ್ಣು ಮುಚ್ಚದೇ ಕನಸು ಹೇಗೆ ಹುಟ್ಟಿಯಾವು ? ಏನಿದ್ದರೂ “ಇಂದಿನ’ ಭರಾಟೆಯಲ್ಲೇ ಬದುಕು-ಬದುಕಬೇಕು. ನಾಳೆ, ನಾಡಿದ್ದು, ಭವಿಷ್ಯವೆಲ್ಲಾ “ಇಂದಿ’ ನ ಭೂತ ನುಂಗಿ ಹಾಕುತ್ತಿದೆ. ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಮೊಗ್ಗು ನೋಡಲಿಕ್ಕೆ ಚೆನ್ನ. ಹೂವಾಗಿ … ಓದನ್ನು ಮುಂದುವರೆಸಿ

ಸುಲಲಿತ

ಸೂಜಿಗಳದ್ದೇ ಬದುಕು !

ನೋಡಿದರೆ ನಿಮಗೇ ಆಶ್ಚರ್ಯ ! ಆ ಕಿಶೋರಿ ಕಂಗಳಲ್ಲಿ ಉತ್ಸಾಹದ ದೀಪ ಕುಣಿಯುತ್ತಿದೆ. ಪುಟ್ಟನ ನಗು ನಿಮ್ಮನ್ನೂ ಮಣಿಸಿ ಬಿಡುತ್ತದೆ. ಮತ್ತೊಬ್ಬ ಪುಟ್ಟಿಯ ಗಲ್ಲದ ಮೂಲೆಯಲ್ಲಿ ಬೀಳುವ ಗುಳಿ, ಒಮ್ಮಲೆ ೨೦ ವರ್ಷ ಚಿಕ್ಕವರನ್ನಾಗಿಸಬಹುದು. ಕಿಶೋರನ ಪ್ರತಿ ಮಾತಿಗೂ ಬಿದ್ದು ಬಿದ್ದು ನಗಬೇಕು, ನಕ್ಕಷ್ಟು ಆಯಸ್ಸು ಹೆಚ್ಚಂತೆ. ಜಗತ್ತು ತೆರೆದುಕೊಂಡ ಬಗೆಯೇ ಇವರಿಗೆ ತಿಳಿದಿಲ್ಲ. ಮುಗ್ಧತೆಯ ಮುಂದೆ ಒಳ್ಳೆಯದು, ಕೆಟ್ಟದು, ಸಿಹಿ-ಕಹಿಯ ಪುರಾಣ ಹೇಳಿದರೆ ಹೇಗೆ ? ಮಗುವಿಗೆ ಏನೂ ತಿಳಿಯದು. ಪುಟ್ಟನಿಗೆ ಚಾಕಲೇಟು ನೀಡಲು ಹೋದರೆ, … ಓದನ್ನು ಮುಂದುವರೆಸಿ