ಸುಮ್ಮನೆ ಒಂದಿಷ್ಟು

ಅಮ್ಮ ಬಂದಿದ್ದಾಳೆ…ಉತ್ಸಾಹ ತಂದಿದ್ದಾಳೆ !

ಸುಮಾರು ಮೂರು ತಿಂಗಳ ಕಾಲ ಬೆಂಗಳೂರಿನ ನನ್ನಣ್ಣನ ಮನೆಯಲ್ಲಿದ್ದು ಈಗ ಮತ್ತೆ ಪುತ್ತೂರಿಗೆ ವಾಪಸಾಗಿದ್ದಾಳೆ ನನ್ನ ಅಮ್ಮ. ಬರುವಾಗ ಸುಮ್ಮನೆ ಬಂದಿಲ್ಲ, ಒಂದಿಷ್ಟು ಉತ್ಸಾಹವನ್ನೂ ತಂದಿದ್ದಾಳೆ. ಅವಳೀಗ ಮತ್ತೊಂದು ಸಂಭ್ರಮದಲ್ಲಿದ್ದಾಳೆ…ಅವಳ ಮಡಿಲಿಗೆ ಮತ್ತೊಬ್ಬಳು ಮೊಮ್ಮಗಳು ಬಂದಿದ್ದಾಳೆ. ನನ್ನ ತಮ್ಮ ರಾಘವೇಂದ್ರ-ಮಂಜುಳಾ ದಂಪತಿಗೆ ಹೆಣ್ಣು ಮಗುವಾಗಿದೆ. ನಾಳೆ ಹನ್ನೊಂದನೇ ದಿನದಂದು ನಾಮಕರಣ. ಅದಕ್ಕೆ ಹೋಗುವ ಆತುರ ನನ್ನಮ್ಮನಿಗೆ, ಸಾಥ್ ನೀಡಲು ನನ್ನ ಪತ್ನಿ ಸುಧಾ, ಅಕ್ಕ ಗಾಯತ್ರಿ ಎಲ್ಲರೂ ಜತೆಗೂಡುತ್ತಿದ್ದಾರೆ. ಅಮ್ಮ ಸೋತಿದ್ದಿಲ್ಲ. ಅತ್ಯಂತ ಕಷ್ಟ ಕಾಲದಲ್ಲೂ ಅಂಗಡಿ … ಓದನ್ನು ಮುಂದುವರೆಸಿ

ಸುಮ್ಮನೆ ಒಂದಿಷ್ಟು

ಬದುಕು ಬಣ್ಣ ಕಟ್ಟಿಕೊಳ್ಳುತ್ತಿದೆ !

ನನ್ನ ಮಗನಿಗೆ ಆರು ವರ್ಷ ತುಂಬಿತು. ದೂರದೂರಿನಲ್ಲಿ ಓದುತ್ತಿರುವ ಅವನ ನೆನಪಿನಲ್ಲಿ ಏನೇನೋ ಹಾದು ಹೋಯಿತು. ಅದನ್ನೆಲ್ಲಾ ಇಲ್ಲಿ ಬರೆದಿದ್ದೇನೆ. ಇದು ತೀರಾ ವೈಯಕ್ತಿಕ ನೆಲೆಯದ್ದು. ಬದುಕೇ ಎಷ್ಟೊಂದು ಅಚ್ಚರಿ. ಪುಟ್ಟ ನವಿಲುಗರಿಯನ್ನು ಎಲ್ಲೆಲ್ಲಿಂದಲೋ ಪಡೆದು ಪುಸ್ತಕದ ಪುಟಗಳ ಮಧ್ಯೆ ಇಟ್ಟುಕೊಳ್ಳುತ್ತಿದ್ದ ಸಂಭ್ರಮ ನಮ್ಮೊಳಗೆ ತುಂಬಿ ಗರಿಯಾಗಿ ಬಿಚ್ಚಿಕೊಳ್ಳುವ ನಾನಾ ಸಂಗತಿ…ಎಲ್ಲ ಮೆಟ್ಟಿಲೇರಿ ನಿಂತಾಗ ಕೆಳಗಿದ್ದವರೆಲ್ಲಾ ಪುಟ್ಟದ್ದಾಗಿಯೇ ಕಾಣುತ್ತಾರೆ. ಅದು ಒಂದು ಬಗೆಯ ಖುಷಿಯೂ ಹೌದು, ದೊಡ್ಡವರಾಗಿದ್ದೇವೆಂಬ ಗಂಭೀರ ಮೊಹರನ್ನು ಒತ್ತಿಕೊಂಡ ಮುಖದಲ್ಲಿ ಕಾಣುವ ಸುಕ್ಕುಗಳೇ ನಮ್ಮನ್ನು … ಓದನ್ನು ಮುಂದುವರೆಸಿ

ಸುಮ್ಮನೆ ಒಂದಿಷ್ಟು

ಹೊಸ ಅನೌನ್ಸ್ ಮೆಂಟ್-ವಾರಕ್ಕೊಂದು ಪ್ರಬಂಧ !

ಇಂತದೊಂದು ಪ್ರಕಟಣೆ ಹಳೆಯದ್ದು ಅಂದುಕೊಳ್ಳಬೇಡಿ. ನನ್ನ ಬ್ಲಾಗ್ ಗೆ ಲೇಖನ ಹಾಕದೇ ಬಹಳಷ್ಟು ದಿನಗಳಾಗಿವೆ. ಏನೇನೋ ಹಾಕಲು ಇಷ್ಟವಿಲ್ಲ. ಅದಕ್ಕಾಗಿಯೇ ಒಂದು ನಿರ್ಧಾರ ಮಾಡಿದ್ದೇನೆ. ನನ್ನ ಇಷ್ಟದ ಪ್ರಕಾರ ಲಲಿತಪ್ರಬಂಧ. ಒಂದಿಷ್ಟು ಪ್ರಬಂಧಗಳು ಬರೆದದ್ದು ಇವೆ. ಅವುಗಳನ್ನು ಒಂದಿಷ್ಟು ಫೈನ್ ಟ್ಯೂನ್ ಮಾಡಬೇಕೆಂದು ಅಂದುಕೊಂಡೇ ವರ್ಷವಾಗಿದೆ. ಹೊಸ ಪ್ರಬಂಧಗಳನ್ನೂ ಬರೆದಿರಲಿಲ್ಲ. ಇನ್ನು ಮುಂದೆ ಪ್ರಬಂಧಗಳ ಕೃಷಿಯತ್ತ ಗಮನಹರಿಸೋಣ ಎಂದೆನಿಸಿದೆ. ವಾರಕ್ಕೊಂದು ಪ್ರಬಂಧ, ಲಹರಿಗಳನ್ನು ಇಲ್ಲಿ ಬರೆಯಲಿದ್ದೇನೆ. ಬ್ರಹ್ಮಚಾರಿಗಳ ಪುಟಗಳು ಧಾರಾವಾಹಿ ನಿಂತಂತಾಗಿದೆ. ಅದಕ್ಕೆ ನನ್ನೊಂದಿಗಿನ ಬ್ರಹ್ಮಚಾರಿಗಳು ಕೆಲವು … ಓದನ್ನು ಮುಂದುವರೆಸಿ

ಸುಮ್ಮನೆ ಒಂದಿಷ್ಟು

ನೀವೂ ಕಳಿಸಿ…ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಹೇಳಿ

ಇದು ನಮ್ಮ ಹೊಸ ಪ್ರಯತ್ನ. ಅದುವೇಪತ್ರಿಕೋದ್ಯಮದ ಶಿಕ್ಷಣ ಕುರಿತಾದ ಬ್ಲಾಗ್. ನಾವೇ ಪತ್ರಿಕೋದ್ಯಮದ ಗೆಳೆಯರು (ನಾನು ಮತ್ತು ವಿನಾಯಕ) ಕೂಡಿಕೊಂಡು ಆರಂಭಿಸಿರುವ ಗ್ರೂಪ್ ಬ್ಲಾಗ್. ಇಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆದ್ಯತೆ. ಜತೆಗೆ ಒಂದಿಷ್ಟು ಅಂಕಣಗಳಿರುತ್ತವೆ ಪತ್ರಕರ್ತರದ್ದು, ವಿದ್ಯಾರ್ಥಿಗಳದ್ದೂ ಸಹ. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿ ಚರ್ಚಿಸಬೇಕೆಂಬುದು ನಮ್ಮ ಆಶಯವೂ ಸಹ. ಈ ಸಮೂಹ ಬ್ಲಾಗಿನ ಪ್ರಮುಖ ಉದ್ದೇಶವೆಂದರೆ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಒಂದು ಪ್ರಾಯೋಗಿಕ ಜ್ಞಾನ ಕಲ್ಪಿಸುವ ನೆಲೆಯಾಗಬೇಕೆಂಬುದಷ್ಟೇ. ಹಾಗಾಗಿ ವಿದ್ಯಾರ್ಥಿಗಳ ಬರಹಗಳಿಗೆ ಸದಾ ಸ್ವಾಗತ. ನಾವು … ಓದನ್ನು ಮುಂದುವರೆಸಿ

ಸುಮ್ಮನೆ ಒಂದಿಷ್ಟು

ಸಾಂಗತ್ಯದಲ್ಲಿ ಸಿನಿಮಾ ಅಧ್ಯಯನ

‘ಸಾಂಗತ್ಯ’ ಬ್ಲಾಗ್, ಸಿನಿಮಾ ಅಭಿರುಚಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದೆ. ಆ ನಿಟ್ಟಿನಲ್ಲಿ ಹೊಸ ಹೊಸತನ್ನು ಕೈಗೊಳ್ಳುತ್ತಿರುವ ಅದು, ತನ್ನ ಗರಿಗೆ ಮತ್ತೊಂದು ಹೊಸತನ್ನು ಸೇರಿಸಿಕೊಂಡಿದೆ. ಅದು ಸಿನಿಮಾ “ಸ್ಕೋಪ್”. ಒಂದು ಸಿನಿಮಾದ ಕುರಿತ ಕೂಲಂಕಷ ಅಧ್ಯಯನದ ದೃಷ್ಟಿಯಿಂದ ಆರಂಭಿಸಿರುವ ಲೇಖನಮಾಲೆ ಇದು. ಪರಮೇಶ್ ಗುರುಸ್ವಾಮಿ ಸೇರಿದಂತೆ ಹಲವು ಮಂದಿ ಒಂದು ಚಿತ್ರವನ್ನು ವಿವಿಧ ಕೋನಗಳಲ್ಲಿ ಅಧ್ಯಯನ ಮಾಡುವರು. ಸಿನಿಮಾ ಕುರಿತು ತಿಳಿಯಲು ಬಯಸುವ ಮಂದಿಗೆ ಇದೊಂದು ಉತ್ತಮ ಅಂಕಣ. ಸಿನಿಮಾವನ್ನು ನೋಡುವ ನೆಲೆಗಳು ಅರ್ಥವಾಗುವಂತೆ ಅಕಾಡೆಮಿಕ್ ರೀತಿಯಲ್ಲಿ ನೀಡಿರುವುದು … ಓದನ್ನು ಮುಂದುವರೆಸಿ

ಸುಮ್ಮನೆ ಒಂದಿಷ್ಟು

ಶೂನ್ಯ ನಾವೆಯ ಕಥೆ

ಒಂದು ಪುಟ್ಟ ಕಥೆ. ಯಾಕೋ ಓಶೋ ರಜನೀಶರು ನೆನಪಾದರು. ಅವರ ಹಲವು ಪುಸ್ತಕಗಳನ್ನು ಓದಿದ ನನಗೆ, ಅವರ ಹೇಳುವ ಪರಿ ಬಹಳ ಇಷ್ಟ. ವಿಷಯಕ್ಕೊಂದು ಚಿಕ್ಕದೊಂದು ಉದಾಹರಣೆ ಕೊಟ್ಟು ವಿವರಿಸುವುದು ಖುಷಿ. ಜೆ.ಕೆ ಕಷ್ಟ ಎನಿಸಿದರೆ, ರಜನೀಶ ಹಾಗೆ ಅನಿಸಿಲ್ಲ. ಹೀಗೇ ಇಂದು ಯಾಕೋ ಹಲವು ಅನಪೇಕ್ಷಿತ ಪ್ರಸಂಗಗಳು ನಡೆದವು. ಅದಕ್ಕೆ ಒಂದಕ್ಕೊಂದು ಕಲ್ಪಿಸಿಕೊಳ್ಲುತ್ತಾ ಹೋದೆ. ರಜನೀಶರು ನೆನಪಿಗೆ ಬಂದರು.  ಶಿವರಾಂ ಪೇಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ ಸಾಹಸಿಯೊಬ್ಬ ನುಗ್ಗಿ ಬಂದ.  ಅವನ ಮಧ್ಯೆ ಮತ್ತೊಬ್ಬ ಆಟೋದವ … ಓದನ್ನು ಮುಂದುವರೆಸಿ