ಸಂ-ವಾದ

ಊರಿಲ್ಲದವರಾಗುತ್ತಿದ್ದೇವೆ…!

ನಾವೆಲ್ಲರೂ ಊರಿಲ್ಲದವರಾಗುತ್ತಿದ್ದೇವೆ…! ಇತ್ತೀಚೆಗೆ ಹೀಗೇ ಅನಿಸುತ್ತಿದೆ. ನಾವೆಲ್ಲ ಊರಿಲ್ಲದವರಾಗುತ್ತಿರುವ ಘಳಿಗೆಯಿದು. ಇದ್ದದ್ದನ್ನೆಲ್ಲಾ ಮಾರಿ ಎಲ್ಲರೂ ಅಂದುಕೊಂಡ ಊರಿಗೇ ಸ್ಥಳಾಂತರ ಹೊಂದಿ, ನಮ್ಮೂರಿನ ಇರವನ್ನೇ ಮರೆಯುತ್ತಿದ್ದೇವೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಇಂಥದೊಂದು ಘಳಿಗೆ ನನ್ನ ಎದುರಾಗಿತ್ತು. ಆಗ ನನಗೂ ಬುದ್ಧಿ ಇರಲಿಲ್ಲ. ಚಿಕ್ಕ ಮಗು. ನನ್ನಮ್ಮ ಅಪ್ಪ ತೋರಿಸಿದ ಹಾದಿಯಲ್ಲಿ ತಲೆ ತಗ್ಗಿಸಿಕೊಂಡು ಬಗಲಲ್ಲಿ ನನ್ನನ್ನು ಎತ್ತಿಕೊಂಡು ಹೊರಟು ಬಂದಳು. ಅವಳ ಹಿಂದೆ ನನ್ನಣ್ಣಂದಿರು, ಅಕ್ಕಂದಿರು ಹಿಂಬಾಲಿಸಿದರು. ಎಲ್ಲರೂ ಸೇರಿ ನನ್ನ ಊರಲ್ಲದ ಊರಿನಲ್ಲಿ ತಳವೂರಿ ಬೆಳೆದೆವು. … ಓದನ್ನು ಮುಂದುವರೆಸಿ

ಸಂ-ವಾದ

ಸಂವಾದ 2-ಪತ್ರಕರ್ತನಿಗೆ ಸಾಮಾನ್ಯಜ್ಞಾನ ಅವಶ್ಯ

ಸಂವಾದ-೨ ಗಣೇಶ್ . ಕೆ. , ವಿನಾಯಕ ಮತ್ತು ಸಿರಿ ಪ್ರಶ್ನೆಗಳನ್ನು ಕೇಳಿ ಹಲವು ದಿನಗಳಾಗಿತ್ತು. ಆದರೆ ಚುನಾವಣೆಯಲ್ಲಿ ಮುಳುಗಿದ್ದರಿಂದ ಮೇಲಕ್ಕೆ ಬರಲು ಇಷ್ಟು ದಿನಗಳಾದವು. ತಡವಾಗಿದ್ದಕ್ಕೆ ವಿಷಾದವಿದೆ. ಗಣೇಶ್ ಅವರು ಸಂಪಾದಕ, ಸುದ್ದಿ ಸಂಪಾದಕ, ಉಪ ಸಂಪಾದಕರ ಕೆಲಸದ ಬಗ್ಗೆ ಕೇಳಿದ್ದಾರೆ. ಉ : ಪತ್ರಿಕೆ ಒಬ್ಬನೇ ಸಂಪಾದಕ ಮತ್ತು ಸುದ್ದಿ ಸಂಪಾದಕ, ಉಪ ಸಂಪಾದಕರು ಹಲವರು. ಹೀಗೊಂದು ಮಾತಿದೆ. ಯಾವಾಗಲೂ ಪತ್ರಿಕೆಗೆ ಒಬ್ಬ ಸಂಪಾದಕರಿರುತ್ತಾರೆ. ಅವರು ಪತ್ರಿಕೆಯ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಪತ್ರಿಕೆಯ … ಓದನ್ನು ಮುಂದುವರೆಸಿ

ಸಂ-ವಾದ

ಪತ್ರಿಕೆಯ ಸುದ್ದಿ ಮೂಲಗಳು- ಸಂವಾದ 1

ಭಾಗ ೧ ಸಂವಾದ ಆರಂಭವಾಗಿದೆ. ನಮ್ಮ ಭಾಗದಲ್ಲಿ ಮೊದಲ ಹಂತದ ಚುನಾವಣೆ ಇದ್ದದ್ದರಿಂದ ಹಲವರ ಪ್ರಶ್ನೆಗಳಿಗೆ ಉತ್ತರಿಸಲು ತಡವಾಯಿತು. ಇನ್ನು ತಡವಾಗುವುದಿಲ್ಲ. ಶೆಟ್ಟರ ಮೊದಲ ಪ್ರಶ್ನೆ ಸುದ್ದಿ ಮೂಲ ಹೇಗೆ ಹುಡುಕುತ್ತೀರಿ ? ಮತ್ತು ಅದರ ಸತ್ಯಾಸತ್ಯತೆಗಳನ್ನು ಹೇಗೆ ಶೋಧಿಸುತ್ತೀರಿ ? ಉತ್ತರ : ಪ್ರತಿ ವರದಿಗಾರನಿಗೂ ಬೀಟ್ ಎಂದು ಇರುವುದು ಸಾಮಾನ್ಯ ; ಪೊಲೀಸರಿಗೆ ಇದ್ದ ಹಾಗೆಯೇ. ದಿನ ಪತ್ರಿಕೆಯ ಕೆಲಸಕ್ಕೂ, ವಾರಪತ್ರಿಕೆ ಇತ್ಯಾದಿಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸುದ್ದಿ ಪೈಪೋಟಿಯ ಹಿನ್ನೆಲೆಯಲ್ಲಿ … ಓದನ್ನು ಮುಂದುವರೆಸಿ

ಸಂ-ವಾದ

ಸಂ-ವಾದ ಆರಂಭ

ಗೆಳೆಯರೇ, ಪತ್ರಿಕೋದ್ಯಮ ನಮ್ಮ (ಮನುಷ್ಯನ) ಆವಿಷ್ಕಾರಗಳಲ್ಲಿ ಮಹತ್ವದ್ದು. ತನ್ನ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯೇ ನಮ್ಮ ಚಲನಶೀಲತೆಯನ್ನು ಪ್ರತಿನಿಧಿಸಬಲ್ಲದು. ಅಂಥದೊಂದು ಅಗತ್ಯತೆಯನ್ನು ಕಂಡುಕೊಂಡು ಆ ನೆಲೆಯಲ್ಲಿ ನಾವು ಹತ್ತು ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದೇವೆ. ಇಂದು ಮಾಧ್ಯಮ ಹತ್ತಾರು ದೃಷ್ಟಿಕೋನಗಳಲ್ಲಿ ರೂಪುಗೊಳ್ಳುತ್ತಾ ಬೆಳೆಯುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳೆಲ್ಲಾ ಇದರ ಮೇಲೂ ಪರಿಣಾಮ ಬೀರಿದೆ. ಅದನ್ನೆಲ್ಲಾ ನೀಗಿಸಿಕೊಂಡು ಬಹಳ ವಿಸ್ತೃತವಾಗಿ ಮಾಧ್ಯಮ ಬೆಳೆಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ-ಸುಧಾರಣೆ ಅತೀವವಾದದ್ದು. ಹತ್ತು ವರ್ಷಗಳ … ಓದನ್ನು ಮುಂದುವರೆಸಿ

ಸಂ-ವಾದ

ಸಂ-ವಾದ : ಪ್ರತಿಕ್ರಿಯಿಸಿ

ಗೆಳೆಯರೇ, ‘ಸುಪ್ತದೀಪ್ತಿ’ ಯವರಿಂದ ಪ್ರೇರಿತಗೊಂಡು ನಾನೂ ಹೊಸ ಪ್ರಯತ್ನ ಆರಂಭಿಸೋಣ ಎಂದಿದ್ದೇನೆ. ಒಂದು ಬಗೆಯ ಸಂವಾದವೂ ಹೌದು. ಅದಕ್ಕೇ ‘ಸಂವಾದ’ ವೆಂದೇ ಕರೆಯೋಣ. ಈ ಮೊದಲೇ ತಿಳಿಸಿದಂತೆ ನಾನು ಕಾರ್‍ಯ ನಿರ್ವಹಿಸುತ್ತಿರುವುದು ಪತ್ರಿಕೋದ್ಯಮ ಕ್ಷೇತ್ರದಲ್ಲಿ. ಇಲ್ಲಿನ ಅನುಭವವನ್ನು ಹಂಚಿಕೊಳ್ಳಬೇಕೆಂಬ ಮನಸ್ಸೂ ನನ್ನದು. ಆದ ಕಾರಣ ಈ ಕಾಲಮ್ಮಿನ ಜನನ. ಮಾಧ್ಯಮ ಕ್ಷೇತ್ರದ ಬೆಳವಣಿಗೆ, ವ್ಯಾಪ್ತಿ, ವಿಸ್ತಾರ, ಕಾರ್‍ಯ ನಿರ್ವಹಣೆಯ ಬಗೆ ಇತ್ಯಾದಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರೆ ಉತ್ತರಿ ಸಲು ಪ್ರಯತ್ನಿಸುವೆ. ಆದರೆ ಇಂಥದೊಂದು ಕಾಲಮ್ಮು ಅಗತ್ಯವಿದೆಯೇ ? … ಓದನ್ನು ಮುಂದುವರೆಸಿ