ಲೇಖನ

ಹೊಸ ಲೋಕಾಯುಕ್ತರಿಗೆ ನಮ್ಮ ಬೆಂಬಲವಿರಲಿ

ರಾಜಕಾರಣಿಗಳನ್ನು ಹತಾಶ ಸ್ಥಿತಿಗೆ ತಲುಪಿಸಿ ಖೆಡ್ಡಾಕ್ಕೆ ಬೀಳಿಸಬೇಕು. ಲೋಕಾಯುಕ್ತರು ಖೆಡ್ಡಾವನ್ನು ತೋಡಬಹುದು, ಆದರೆ “ಆನೆ”ಯನ್ನು ಓಡಿಸಿಕೊಂಡು ಬಂದು ಗುಂಡಿಗೆ ಬೀಳಿಸಲು ನಾವೇ ಅಂದರೆ ಜನರೇ ಸಿದ್ಧರಾಗಬೇಕು. ಹೊಸ ಲೋಕಾಯುಕ್ತರು ಬಂದಿದ್ದಾರೆ…ಮೊದಲಿಗೇ “ನಾನು ಬಿಜೆಪಿ ಲೋಕಾಯುಕ್ತ ಅಲ್ಲ, ಕರ್ನಾಟಕದ ಲೋಕಾಯುಕ್ತ” ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಲೆಕ್ಕಾಚಾರದಲ್ಲಿ ಅಂತಹದೊಂದು ಉನ್ನತ ಹುದ್ದೆಯಲ್ಲಿರುವವರಿಗೆ ಹೀಗೆ “ಸ್ಪಷ್ಟೀಕರಣ” ಕೊಡುವಂತಹ ಪರಿಸ್ಥಿತಿ ಬರಬಾರದು. ಆದರೆ ಏನೂ ಮಾಡುವಂತಿಲ್ಲ, ಸನ್ನಿವೇಶ ಮತ್ತು ಸಂದರ್ಭಗಳು ಆ ಪರಿಸ್ಥಿತಿಯನ್ನೂ ಸೃಷ್ಟಿಸುತ್ತವೆ. ಮಾನ್ಯ ಶಿವರಾಜ್ ಪಾಟೀಲರಿಗೂ ಆದದ್ದು ಅದೇ. ಯಡಿಯೂರಪ್ಪನವರು … ಓದನ್ನು ಮುಂದುವರೆಸಿ

ಲೇಖನ

ಲೋಕಾಯುಕ್ತರಿಗೆ ಧನ್ಯವಾದಗಳು

ಪ್ರಜಾತಂತ್ರ ಪ್ರೀತಿಸುವ ಪ್ರತಿಯೊಬ್ಬರೂ ಲೋಕಾಯುಕ್ತರಾಗಿ ಮೊನ್ನೆಯಷ್ಟೇ ನಿವೃತ್ತರಾದ ಎನ್. ಸಂತೋಷ್ ಹೆಗ್ಡೆಯವರಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಕಾನೂನಿಗೆ ಇರಬಹುದಾದ ಸಾಧ್ಯತೆಯನ್ನು ತೋರಿಸುತ್ತಲೇ, ಕಾನೂನನ್ನು ನಮ್ಮನ್ನಾಳುವ ಮಂದಿ ಹೇಗೆ ದುರುಪಯೋಗ ಪಡಿಸಿಕೊಳ್ಳಬಲ್ಲರು ಹಾಗೂ ಊನಗೊಳಿಸಬಲ್ಲರೆಂಬುದನ್ನು ತೋರಿಸಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರ ಪರ್ವ ಮುಗಿದಿದೆ. ಐದು ವರ್ಷಗಳ ಹಿಂದೆ ಹುದ್ದೆಗೇರಿದಾಗ ಸದ್ದು ಮಾಡಿರಲಿಲ್ಲ. ತಣ್ಣಗೆ ಬಂದು ಕುಳಿತಿದ್ದರು. ಆದರೆ, ಅವಧಿ ಪೂರೈಸಿ ಹೊರಡುವಾಗ ಬಹಳಷ್ಟು ಮಂದಿಯ ಬುಡಕ್ಕೆ ಬಿಸಿನೀರು ಸುರಿದು ಹೊರಟಿದ್ದಾರೆ. ಅದರಲ್ಲೂ ನಮ್ಮನ್ನಾಳುವ ಮಂದಿಗೆ ಪಾಠ … ಓದನ್ನು ಮುಂದುವರೆಸಿ

ಲೇಖನ

ವಿಶ್ವ ಕನ್ನಡ ಸಮ್ಮೇಳನ-ಹೊಸ ವ್ಯಾಖ್ಯೆ

ಐದು ವರ್ಷದಿಂದ ನಿರೀಕ್ಷಿಸುತ್ತಿದ್ದ ಘಳಿಗೆ ಇತಿಹಾಸದ ಅಧ್ಯಾಯಕ್ಕೆ ಸೇರಿದೆ. ನಾಡಿನ ಜನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿದ್ದಾರೆ. ಬಿಜೆಪಿ ನೇತೃತ್ವದ ಸರಕಾರ ಹೊಸ ಸಾಹಸ ಪೂರ್ತಿಗೊಳಿಸಿದ ಕೀರ್ತಿಗೆ ‘ಜನವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ‘ಕನ್ನಡದ ಗಂಗೆಯಲ್ಲಿ ತಮ್ಮ ಸರ್ವ ಪಾಪವನ್ನೂ ತೊಳೆದುಕೊಂಡು ಪಾವನರಾಗಿದ್ದಾರೆ’. ಮೂರು ದಿನಗಳ ಕಾಲ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನ ಕನ್ನಡಿಗರ ಬಲ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ನಿಜ. ಸುಮಾರು ೨ ರಿಂದ ೩ ಲಕ್ಷ ಮಂದಿ ಸೇರಿ ಹಬ್ಬಕ್ಕೆ ಕಳೆಗಟ್ಟಿಸಿದ್ದೂ ಇತ್ತೀಚಿನ ವರ್ಷಗಳಲ್ಲಿ ಹೊಸತು. … ಓದನ್ನು ಮುಂದುವರೆಸಿ

ಲೇಖನ

ಹಲವು ಅಪಸವ್ಯಗಳ ಮಧ್ಯೆಯೂ ಸಮ್ಮೇಳನ ಯಶಸ್ವಿಯಾಗಲಿ

ವಿಶ್ವಕನ್ನಡ ಸಮ್ಮೇಳನಕ್ಕೆ ಮೂರು ದಿನ ಇರುವಾಗ ಆ ವ್ಯವಸ್ಥೆಯೊಳಗಿನ ಅಪಸವ್ಯಗಳನ್ನು ಪಟ್ಟಿ ಮಾಡುತ್ತಲೇ ಯಾವ ಕಾರಣಕ್ಕೆ ಸಮ್ಮೇಳನ ಯಶಸ್ವಿಯಾಗಬೇಕೆಂಬುದನ್ನು ಇಲ್ಲಿ ವಿವರಿಸಿದ್ದೇನೆ. ಓದಿ, ಅಭಿಪ್ರಾಯಿಸಿ. ವಿಶ್ವಕನ್ನಡ ಸಮ್ಮೇಳನಕ್ಕಿರುವುದು ಇನ್ನು ಮೂರೇ ದಿನ. ಮಾರ್ಚ್ ೧೧ ರಂದು ಬೆಳಗಾವಿಯಲ್ಲಿ ಕನ್ನಡದ ಧ್ವಜ ಅರಳಬೇಕು. ಮೂರು ದಿನದ ಸಮ್ಮೇಳನದಲ್ಲಿ ಲಕ್ಷಾಂತರ ಮಂದಿ ಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆ ಸರಕಾರದ್ದು. ಆದರೆ ಅಂಥ ಸಂಭ್ರಮವೇನೂ ಎಲ್ಲೂ ತೋರಿ ಬರುತ್ತಿಲ್ಲವೆನ್ನುವುದು ವಿಷಾದನೀಯ. ೭೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದದ್ದು, … ಓದನ್ನು ಮುಂದುವರೆಸಿ

ಲೇಖನ

ಕನ್ನಡ ಜಾತ್ರೆಗೆ ಬನ್ನಿ…ಮರೆಯಬೇಡಿ

ಬೆಂಗಳೂರಿನಲ್ಲಿ ಫೆ. 4 ರಿಂದ 6 ರವರೆಗೆ ನುಡಿಜಾತ್ರೆ. 40 ವರ್ಷಗಳ ನಂತರ ಬೆಂಗಳೂರಿಗೆ ಬಂದಿದೆ ನುಡಿತೇರು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ತೇರನೆಳೆಯಲು ಸರ್ವ ಸಿದ್ಧತೆಯೂ ನಡೆದಿದೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಮತ್ತು ಪದಾಧಿಕಾರಿಗಳ ತಂಡ ಸಿದ್ಧತೆಯ ಬೆನ್ನಿಗಿದೆ ಎಂದರೆ ಮಾತು ಮುಗಿಯುವುದಿಲ್ಲ. ಸಂಪ್ರದಾಯದಂತೆ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು…ಹೀಗೆ ಅಸಂಖ್ಯಾತ ಅಧಿಕಾರಿಗಳ ತಂಡವೂ ಊರನ್ನು ಸಜ್ಜಾಗಿಸಲು ತೊಡಗಿದೆ. ಇವರ … ಓದನ್ನು ಮುಂದುವರೆಸಿ

ಲೇಖನ

ಗುಲ್ವಾಡಿಯವರ ನೆನಪಿನಲ್ಲಿ ಎರಡೇ ಮಾತು…

ಗುಲ್ವಾಡಿಯವರು ನಿಧನರಾಗಿದ್ದಾರೆ. ಕನ್ನಡ ಪತ್ರಿಕೋದ್ಯಮ ಗುಲ್ವಾಡಿಯವರನ್ನು ನೆನಪಿಸಿಕೊಳ್ಳಲು ಹಲವು ಕಾರಣಗಳಿವೆ. ಹತ್ತು ಹಲವು ಹೊಸ ನೆಲೆಗಳನ್ನು ಶೋಧಿಸಿದ ಅವರಿಗೆ ಹೊಸತನದ ಬಗೆಗಿದ್ದ ಆಪ್ತತೆಯೇ ಅವರನ್ನು ಪತ್ರಿಕೋದ್ಯಮದಲ್ಲಿದ್ದಷ್ಟೂ ಕಾಲ ಹಸಿರಾಗಿರಿಸಿತ್ತು. ನನಗೂ ತರಂಗ ಆಪ್ತವಾಗುವುದಕ್ಕೆ ಬಹಳಮುಖ್ಯವಾದ ಕಾರಣವೆಂದರೆ, ಅವರ ಅಂತರಂಗ-ಬಹಿರಂಗ. ಸಂಪಾದಕೀಯ ಬರಹಗಳು ಹೊಸ ಬಗೆಯಲ್ಲಿ ಆಲೋಚಿಸುವಂತೆಯೂ ಮಾಡಿದ್ದವು. ಅಷ್ಟೇ ಅಲ್ಲದೇ, ನಮ್ಮ ಕ್ರಿಯಾಶೀಲತೆಯ ಕೊರತೆಯನ್ನು ಎತ್ತಿ ಹೇಳುತ್ತಿದ್ದವು. ನನ್ನ ಅರಿವಿಗೆ ಬಂದಂತೆ (ನನ್ನ ವಿದ್ಯಾರ್ಥಿಯ ದೆಸೆಯಲ್ಲಿದ್ದಾಗ) ಗುಲ್ವಾಡಿಯವರೊಬ್ಬರೇ ವಾರಪತ್ರಿಕೆಯಂಥ ಕಡೆಯೂ ತೀಕ್ಷ್ಣವಾಗಿ ಸಮಕಾಲೀನ ಬೆಳವಣಿಗೆಗಳಿಗೆ ಸ್ಪಂದಿಸುತ್ತಿದ್ದುದು ಅನಿಸುತ್ತದೆ. … ಓದನ್ನು ಮುಂದುವರೆಸಿ

ಲೇಖನ

‘ನನಗೇನೂ ನಾಚಿಕೆಯಿಲ್ಲ, ನನಗೂ ಮಂತ್ರಿ ಸ್ಥಾನ ಬೇಕು !’

ಇದು ನನ್ನ ತಲೆಮಾರಿನ ದುರ್ದೈವ. ಚುನಾವಣೆಯಿಂದ ಚುನಾವಣೆಗೆ ನಮ್ಮನ್ನು ಆಳುವ ನಾಯಕರ ಬೌದ್ಧಿಕ ಹಾಗೂ ನೈತಿಕ ದಾರ್ರಿದ್ರ್ಯವನ್ನು ಕಂಡು ನಿಜಕ್ಕೂ ಖೇದ ಎನಿಸುತ್ತದೆ. ನಾವು ಇವರ ಆಡಳಿತದ ಅವಧಿಯಲ್ಲಿ ಬದುಕಿದ್ದೇವೆ ಎಂಬುದೂ ಒಂದು ನಾಚಿಕೆಗೇಡಿತನದ ಸಂಗತಿಯಾಗಿ ಪರಿಣಮಿಸುತ್ತಿದೆ. ಈ ಮಾತನ್ನು ಸುಮ್ಮನೆ ಟೀಕೆಗೆಂದು ಹೇಳುತ್ತಿಲ್ಲ. ಮೂರು ದಿನಗಳಿಂದ ನಾವು ಸಮೂಹ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಮಂತ್ರಿ ಸ್ಥಾನಕ್ಕೆ ನಾಚಿಕೆ ಬಿಟ್ಟು ಪಡುತ್ತಿರುವ ಪಡಿಪಾಟಲು ಕಂಡರೆ ಬೇಸರವಷ್ಟೇ ಆಗದು ; ಹೇಸಿಗೆ ಹುಟ್ಟುತ್ತದೆ. ಜನಸೇವೆ ಮಾಡಲು ಶಾಸಕರಾದರಷ್ಟೇ ಸಾಕು … ಓದನ್ನು ಮುಂದುವರೆಸಿ