ಲೇಖನ ಮಾಲಿಕೆ

ಚಲನಚಿತ್ರ ಅಕಾಡೆಮಿಗೆ ಹೊಸಬರು ಬೇಕಾಗಿದ್ದಾರೆ

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೊಸ ಮುಖ ಬೇಕಾಗಿದೆ. ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಗುಪ್ತಗಾಮಿನಿಯಂತೆ ಇದ್ದ ಸಿನಿಮಾ ಚಳವಳಿಗೆ ಒಂದು ವೇಗ ಕೊಡಲು ರಾಜ್ಯ ಸರಕಾರ ಅಕಾಡೆಮಿಯನ್ನು ರಚಿಸಿತು. ಮೊದಲ ಅವಧಿಗೆ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದರ ಚುಕ್ಕಾಣಿ ಹಿಡಿದರು. ಈಗ ಅವರ ಅವಧಿ ಮುಗಿದಿದೆ. ಅಕಾಡೆಮಿಯ ಮೊದಲ ಅವಧಿಯ ಸಾಧನೆಯನ್ನು ತುಲನೆ ಮಾಡಿದರೆ ಬಹಳಷ್ಟು ನಿರೀಕ್ಷೆ ಈಡೇರದಿದ್ದರೂ, ನಿರಾಶೆ ಮೂಡದು. ಸಾಮಾನ್ಯವಾಗಿ ಒಂದು ಸಂಸ್ಥೆಯ ಮೊದಲ ಒಂದೆರಡು ವರ್ಷ ಕಂಡ ಕನಸಿಗೆ ಮೂರ್ತ … ಓದನ್ನು ಮುಂದುವರೆಸಿ

ಲೇಖನ ಮಾಲಿಕೆ

ಅವರು ಕಾಯುತ್ತಿದ್ದಾರೆ ನಮ್ಮ ಚಟುವಟಿಕೆಯನ್ನೂ !

ಹೀಗೆ ಎಲ್ಲದಕ್ಕೂ ಪುಟ್ಟ ಪುಟ್ಟ ಇತಿಹಾಸ ಹೊಂದಿರುವ ಸಂಸತ್ತು ಒಂದು ನೆಲೆಯಲ್ಲಿ ಬರಿಯ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಪರಮೋಚ್ಛ ಕಾರ್ಯ ಸಾಧನೆಯ ನೆಲವಾಗಿಯಷ್ಟೆ ಅಲ್ಲ, ನಮ್ಮ ಸಂಸ್ಕೃತಿ, ನಮ್ಮ ಮಾದರಿಗಳ ಷೋಕೇಸ್ ಸಹಿತ ಹೌದು. ಸಂಸತ್ತಿನ ಪ್ರಾಕಾರದಲ್ಲಿ ಅಥವಾ ಆವರಣದ ಸುತ್ತ ಮುತ್ತಲೆಲ್ಲಾ ನಾವು ಮಾದರಿ ಎಂದುಕೊಂಡವರೆಲ್ಲಾ ತಣ್ಣಗೆ ವಿರಾಜಮಾನವಾಗಿದ್ದಾರೆ. ಒಂದರ್ಥದಲ್ಲಿ ಇದು ಬಯಲು ಮ್ಯೂಸಿಯಂ. ಸಂಸತ್ತಿನ ಐದನೇ ಗೇಟ್‌ನ ಎದುರು ಚಂದ್ರಗುಪ್ತ ಮೌರ್ಯನ ಪುತ್ಥಳಿಯಿದೆ. 0.74 ಮೀಟರ್ ಉದ್ದದ ಕಂಚಿನ ಪುತ್ಥಳಿಯನ್ನು ರಚಿಸಿದವರು ಹಿದಾ ಸೆಲ್ಗಮಾನ್. … ಓದನ್ನು ಮುಂದುವರೆಸಿ

ಲೇಖನ ಮಾಲಿಕೆ

ಸಂಸತ್ತಿನ ಕಲಾಪದ ಪ್ರಸಾರದ ಇತಿಹಾಸ

ಸಂಸದೀಯ ಜ್ಞಾನಪೀಠದ ಪಥ ತಿಳಿದ ಮೇಲೆ ಸ್ವಲ್ಪ ಸಂಸತ್ತಿನೊಳಗಿನ ಪದ್ಧತಿ ಕುರಿತು ಕಣ್ಣು ಹಾಯಿಸುವಂತದ್ದಿದೆ. ಇಡೀ ಜಗತ್ತು ತಂತ್ರಜ್ಞಾನದೊಂದಿಗೆ ಬೆಸೆದುಕೊಳ್ಳುತ್ತಿರುವಾಗ ಸಂಸತ್ತೂ ಸುಮ್ಮನಿರಲಿಲ್ಲ. ಅದರೊಳಗಿನ ವ್ಯವಸ್ಥೆಯೆಲ್ಲಾ ತಾಂತ್ರಿಕ ರೂಪ ಪಡೆದುಕೊಂಡಿತು. ಇದರ ಮಹತ್ವದ ಘಟ್ಟವೆಂದರೆ ಸಂಸತ್ತಿನ ಕಲಾಪಗಳೆಲ್ಲಾ ಸಾರ್ವಜನಿಕವಾಗಿ ಪ್ರಸಾರವಾಗತೊಡಗಿದ್ದು. 1989 ರವರೆಗೆ ಸಂಸತ್ತಿನಲ್ಲಿ ನಡೆವ ಕಲಾಪಗಳನ್ನು ನೋಡುವ ಭಾಗ್ಯ ಇರಲಿಲ್ಲ. ಆ ಕಲಾಪಗಳ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಓದಿದರೆ ಮುಗಿದಂತೆ. ನಮ್ಮ ಸಂಸದರು ಅಲ್ಲಿ ಎಷ್ಟು ಹೊತ್ತು ಮಾತನಾಡಿದರು ? ಏನೆಲ್ಲಾ ಮಾತನಾಡಿದರು? ಯಾವುದೂ ತಿಳಿಯುತ್ತಿರಲಿಲ್ಲ. … ಓದನ್ನು ಮುಂದುವರೆಸಿ

ಲೇಖನ ಮಾಲಿಕೆ

ನಮ್ಮ ಸಂಸದರೂ ಅಧ್ಯಯನಶೀಲರು !

ಈ ವಿಷಯ ಕೇಳಿ ಕೊಂಚ ಖುಷಿಪಡಬಹುದು. ನಮ್ಮ ಸಂಸದರು ಓದುವುದಿಲ್ಲ, ಅಧ್ಯಯನಶೀಲರಲ್ಲ…ಎನ್ನುವ ಕೂಗಿರುವ ಸಂದರ್ಭದಲ್ಲಿ ಚಿಕ್ಕ ನೀರಿನ ಬುಗ್ಗೆ ಮರಳುಗಾಡಿನಲ್ಲಿ ತೋರಿದಂತೆ ಅನಿಸುತ್ತಿದೆ. ಸಂಸತ್ತಿನ ಗ್ರಂಥಾಲಯದ ಮಾಹಿತಿ ಪ್ರಕಾರ ಮಾಹಿತಿ ಕೋರಿ ಸಲ್ಲಿಸುವ ಮನವಿಗಳು ಹೆಚ್ಚಿವೆಯಂತೆ. ನಮ್ಮ ಸಂಸದರು ಕೈ ಉದ್ದ ಮಾಡಿದರೆ ಮಾಹಿತಿ ಎಂಬುದು ರಾಶಿ ಬಂದು ಬೀಳುತ್ತದೆ. ಅಂಥ ವ್ಯವಸ್ಥೆ ಇರುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ತಾವು ಮಾತನಾಡುವ ಕುರಿತ ವಿಷಯವನ್ನು ಅವರೇನೂ ಅಗೆದು ಸಂಶೋಧಿಸಬೇಕಾಗಿಲ್ಲ. ಸಂಸದೀಯ ಜ್ಞಾನಪೀಠ (ಗ್ರಂಥಾಲಯ) ದ ಅಧಿಕಾರಿಗಳಿಗೆ ಹೇಳಿದರೆ, … ಓದನ್ನು ಮುಂದುವರೆಸಿ

ಲೇಖನ ಮಾಲಿಕೆ

ಸಂಸತ್ತಿನ ಗ್ರಂಥಾಲಯ ಕಂಡರೆ ಬೆಚ್ಚಿ ಬೀಳುತ್ತೀರಿ…

ಸಂಸತ್ತಿನ ಗ್ರಂಥಾಲಯ, ನಮ್ಮ ಜನ ಪ್ರತಿನಿಧಿಗಳಿಗೆ ಅಧ್ಯಯನಕ್ಕಾಗಿ ಒದಗಿಸುವ ವ್ಯವಸ್ಥೆ ಎಲ್ಲವನ್ನೂ ಕಂಡರೆ ಬೆಚ್ಚಿ ಬೀಳದೇ ವಿಧಿಯಿಲ್ಲ. ಆ ಪೈಕಿ ಇದರ ಸದುಪಯೋಗ ಎಷ್ಟಾಗುತ್ತಿದೆ ಎಂದು ಕೇಳಬೇಡಿ. ಒಂದಂತೂ ನಿಜ. ನಮ್ಮ ಸಂಸದರು ಓದದಿದ್ದರೂ ಅವರ ಆಪ್ತ ಸಹಾಯಕರು, ಅಧಿಕಾರಿಗಳು ಓದುತ್ತಿರಬಹುದು. ಅಷ್ಟಕ್ಕೇ ಸಮಾಧಾನ ಪಡಬೇಕು ! ಒಂದು ಕಾಲದಲ್ಲಿ ಎಲ್ಲೆಲ್ಲೂ ಅಧ್ಯಯನ ಶೀಲರಿದ್ದರು. ಈ ಮಾತಿಗೆ ಸಂಸತ್ತೂ ಅಪವಾದವಾಗಿರಲಿಲ್ಲ. ಅದರಲ್ಲೂ ಭಾರತ ಜ್ಞಾನ ಸಂಪನ್ನರ ದೇಶ. ಅವರನ್ನು ಪ್ರತಿನಿಧಿಸುವವರೆಲ್ಲಾ ಜ್ಞಾನ ಸಂಪನ್ನರೇ ಎನ್ನುವಂತಿತ್ತು. ಒಂದು ವಿಷಯ … ಓದನ್ನು ಮುಂದುವರೆಸಿ

ಲೇಖನ ಮಾಲಿಕೆ

ವರ್ತುಲಾಕಾರದ ಸೆಂಟ್ರಲ್ ಹಾಲ್

ಸೆಂಟ್ರಲ್ ಹಾಲ್, ವರ್ತುಲಾಕಾರದಲ್ಲಿರುವಂಥದ್ದು. ಅದರ ಗೋಲ 98 ಅಡಿ ವ್ಯಾಸವುಳ್ಳದ್ದು. ಅಷ್ಟೇ ಅಲ್ಲ ; ಈ ಗೋಲ ಇಡೀ ಜಗತ್ತಿನಲ್ಲೇ ಬಹಳ ವಿಶಿಷ್ಟವಾದ ವಿನ್ಯಾಸದ್ದು. ಇಡೀ ಕಟ್ಟಡಕ್ಕೆ ಹೊರಗಿನಿಂದ ಮತ್ತು ಒಳಗಿನಿಂದ ಹೊಸ ಚೆಂದವನ್ನು ಕೊಟ್ಟಿರುವುದೇ ಈ ಗೋಲ ಮತ್ತು ಹಾಲ್ (ಪಡಸಾಲೆ). ಈ ಪಡಸಾಲೆ ಅಥವಾ ಹಾಲ್, ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಬಹಳ ಮುಖ್ಯವಾಗಿ ನಮಗೆಲ್ಲಾ ಸ್ವಾತಂತ್ರ್ಯದ ಗರಿ ಕಟ್ಟಿಕೊಟ್ಟಿದ್ದು ಇದೇ ಹಾಲ್ ಅಂದರೆ ಇಲ್ಲಿಯೇ. ಬ್ರಿಟಿಷ್ ಗವರ್ನರ್ ಜನರಲ್ ಮೌಂಟ್ ಬ್ಯಾಟನ್, … ಓದನ್ನು ಮುಂದುವರೆಸಿ

ಲೇಖನ ಮಾಲಿಕೆ

ಸಂಸತ್ ಕಟ್ಟಡಕ್ಕೆ ಪ್ರೇರಣೆ ಶಿವನ ದೇವಸ್ಥಾನ !

ಸಂಸದ ಭವನ ಸಂಕೀರ್ಣ ಇರುವುದು ದಿಲ್ಲಿಯ ಸಂಸತ್ ಮಾರ್ಗದಲ್ಲಿ. ಈ ಸಂಕೀರ್ಣ ಇರುವ ಪ್ರದೇಶದ ವ್ಯಾಪ್ತಿ ಎಷ್ಟು ಗೊತ್ತೇ ? ಬರೋಬ್ಬರಿ 6 ಎಕರೆ ಪ್ರದೇಶ. ಸುಮಾರು 560 ಅಡಿ ವ್ಯಾಸವುಳ್ಳ ವೃತ್ತದಂತಿದೆ ಈ ಪ್ರದೇಶ. ಈ ಸಂಕೀರ್ಣದಲ್ಲಿ ಸಂಸತ್ ಭವನ, ಸ್ವಾಗತಕಾರ ಕಟ್ಟಡ, ಸಂಸದೀಯ ಭವನ, ಸಂಸದರ ಗ್ರಂಥಾಲಯ ಕಟ್ಟಡ, ಉದ್ಯಾನ (ಲಾನ್), ಸಮೃದ್ಧಕೊಳಗಳಲ್ಲಿ ಕಾರಂಜಿಯ ಸೊಬಗು. ಸಂಸತ್ತು ಕಲಾಪ ನಡೆಯುವ ಸಂದರ್ಭದಲ್ಲಿ ಇಡೀ ಕಟ್ಟಡದ ಕೆಲ ಭಾಗಗಳಲ್ಲಿ ಹೂಗಳಿಂದ ಸಿಂಗರಿಸಲಾಗುತ್ತದೆ. ಕಣ್ಣಿಗೆ ಸೊಬಗು ತರಲೆಂದು. … ಓದನ್ನು ಮುಂದುವರೆಸಿ