ಲಹರಿ

ನನ್ನ ಕಾಡುವ ಹಾಡು ಮತ್ತು ಯುಗಾದಿ

ನನ್ನ ನಲಿವಿನ ಮರದಲ್ಲಿ ಮತ್ತೊಂದು ಚಿಗುರು. ಅದರ ಹೆಸರು ಯುಗಾದಿ… ಮತ್ತೆ ಯುಗಾದಿ ಬಂದಿದೆ, ತನ್ನ ಬೊಗಸೆಯಲ್ಲಿ ಒಂದಿಷ್ಟು ಹೊಸತನ್ನು ತಂದಿದೆ. ಹೋದ ವರ್ಷದ ಬ್ಯುಸಿ ಈ ವರ್ಷವೂ ಇದ್ದದ್ದೇ. ಆದರೂ ತುಸು ವಿರಾಮ ಮಾಡಿಕೊಂಡು ಆ ಬೊಗಸೆಯಲ್ಲಿನ ಹೊಸತನ್ನು ಹಂಚಿಕೊಳ್ಳೋಣ.  ನನಗೆ ಸದಾ ಹೊಸ ವರ್ಷ ಎಂದ ಕೂಡಲೇ ನೆನಪಿಗೆ ಬರುವಂಥದ್ದು, ಕಾಡುವಂಥದ್ದು ಒಂದು ಹಾಡು. ಪಿ. ಕಾಳಿಂಗರಾಯರು ‘ರಾಜಹಂಸ’ ಧ್ವನಿಸುರುಳಿಯಲ್ಲಿ ಈ ಹಾಡು ಕೇಳಿರುತ್ತೀರಿ. ಆದರೂ ಕೇಳದಿದ್ದರೆ ಒಮ್ಮೆ ಕೇಳಿ. ದೂರದಲ್ಲೆಲ್ಲೋ ಕೇಳಿಬರುವಂತೆ ಅನುಭವ … ಓದನ್ನು ಮುಂದುವರೆಸಿ

ಲಹರಿ

ಈ ದಿನಕ್ಕೆ ಒಂದು ಪದ್ಯ, ಒಂದಿಷ್ಟು ಸಾಲುಗಳು…

“ಹಾಗೇ ಸುಮ್ಮನೆ” ಬರೆದ ಸಾಲುಗಳು. ಮೊದಲಿನದು ಪದ್ಯ ಎನ್ನಬಹುದೋ, ಇಲ್ಲವೋ ಗೊತ್ತಿಲ್ಲ. ಉಳಿದವು ಒಟ್ಟೊಟ್ಟಿಗೆ ಹಿಡಿದಿಟ್ಟ ಬಿಕ್ಕಿದ ಸಾಲುಗಳು. ಇವು ಬರೆದು ಎಷ್ಟೋ ದಿನಗಳಾಗಿದ್ದವು. ಇವು ಬಿಕ್ಕಿದ ಸಾಲುಗಳ ಗದ್ಯ. ನಿಮ್ಮ ಅಭಿಪ್ರಾಯವನ್ನು ಪ್ರೀತಿಯಿಂದ ಹೇಳಿ. ಓದನ್ನು ಮುಂದುವರೆಸಿ

ಲಹರಿ

ಬೆಳಕು ಎಲ್ಲರ ಬೆಳಗಲಿ

ಬೆಳಕು… ಬೆರಗು… ! ಮೆರುಗು… ! ಬೆಳಕೆಂಬ ಬೆರಗಿನ ಬಗ್ಗೆ ಕಾವ್ಯ ಬರೆಯಲು ಹೊರಟರೇ ಹೀಗೆ ಪದಗಳು ಸಾಲು ದೀಪಾವಳಿ ಸಂಭ್ರಮ ತುಂಬಿಕೊಂಡ ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳಂತೆ ಮೆರವಣಿಗೆ ಹೊರಡುತ್ತವೆ. ಬೆಳಕಿಗೆ ಆ ಮೆರವಣಿಗೆಯ ವೈಭವವಿದೆ. ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗಿನ ಕತ್ತಲೆಗೆ ಹಣತೆ ಹಚ್ಚಿಟ್ಟಂತೆಯೇ. ಬೆಳಕೆಂದರೆ ಸಂಭ್ರಮ. ನಮ್ಮೊಳಗು-ಹೊರಗನ್ನು ಆವರಿಸಿಕೊಳ್ಳುವಂಥದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳುವುದಿಲ್ಲ. ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ … ಓದನ್ನು ಮುಂದುವರೆಸಿ

ಲಹರಿ

ಜಂಬೂ ಸವಾರಿ ಎಂದ್ರೆ ನಮ್ಮೂರ ತೇರು !

ದಸರೆಯ ಸಂಭ್ರಮ ಮುಗಿಯಿತು. ಸುಮಾರು ಹದಿನೈದು ದಿನಗಳಿಂದ ಬ್ಲಾಗಿನತ್ತ ತಲೆಯೇ ಹಾಕಿರಲಿಲ್ಲ. ನಮ್ಮೂರಿನಲ್ಲಿ ದಸರೆಯ ಸಂಭ್ರಮ ಎಲ್ಲರನ್ನೂ-ಎಲ್ಲವನ್ನೂ ಆವರಿಸಿತ್ತು. ಅದರಲ್ಲೂ ಸುದ್ದಿಜೀವಿಯಾದ ನನಗೆ ಹಾಗೆ ಆವರಿಸಿಕೊಂಡ ಸಂಭ್ರಮವನ್ನು ಮೊಗೆ ಮೊಗೆದು ಎಲ್ಲರಿಗೂ ನೀಡಬೇಕಾದ ಹೊಣೆಗಾರಿಕೆಯಿತ್ತು. ನನ್ನ ಸಹೋದ್ಯೋಗಿಗಳು ಅಂಥದೊಂದು ಕಾರ್‍ಯವನ್ನು ಅತ್ಯಂತ ಉಲ್ಲಸಿತವಾಗಿ ಮಾಡಿದರು. ಬಹಳ ವಿಭಿನ್ನವಾಗಿ ದಸರೆಯ ಸಂಭ್ರಮವನ್ನು ನಮ್ಮ ಬೊಗಸೆಯಲ್ಲಿ ಹಿಡಿದು ಕೊಟ್ಟೆವು ಎನ್ನಲಡ್ಡಿಯಿಲ್ಲ. ಇದು ನನಗೆ ಎರಡನೇ ದಸರೆ. ಕಳೆದ ದಸರೆಯಷ್ಟೊತ್ತಿಗೆ  ಇದೇ ಜಂಬೂಸವಾರಿಯ ಊರಿನಲ್ಲಿದ್ದೆ. ದಸರೆಯನ್ನು ಬಹಳ ವಿಶಿಷ್ಟವಾಗಿ ನೋಡುವ ಪ್ರಯತ್ನ  … ಓದನ್ನು ಮುಂದುವರೆಸಿ

ಲಹರಿ

ಕುನ್ನಕುಡಿ ಪಿಟೀಲೆಂಬ ಹರಿವ ನಾದದ ನದಿ

ಉತ್ತರ ಭಾಗದಲ್ಲಿ ‘ಫರಮಾಯಿಶ್’ ಎಂಬ ಪದವಿದೆ. ನಮಗೆ ಇಷ್ಟವಾದದ್ದು ಎಂಬುದು ಅದರರ್ಥ. ಕುನ್ನಕುಡಿ ಪ್ರತಿಯೊಬ್ಬರ ಇಷ್ಟವನ್ನೂ ಪೂರೈಸಲೆಂದೇ ವೇದಿಕೆ ಏರುತ್ತಿದ್ದರು. ಅದಾಗದೇ ಕೆಳಗಿಳಿಯುತ್ತಿರಲಿಲ್ಲ. ಹೀಗೆ ಶಾಸ್ತ್ರೀಯದ ಮಧ್ಯೆ ಸಿನಿಮಾ ನುಸು ಳುವುದು ಸಂಪ್ರದಾಯಸ್ಥರಿಗೆ ರುಚಿಸುವುದಿಲ್ಲ. ಅದರಲ್ಲೂ ಚೆನ್ನೈನಲ್ಲಂತೂ ಇಂಥವರು ತುಸು ಹೆಚ್ಚು. ಟೀಕೆ ಬಂದದ್ದು ಸಹಜವೇ.  ಕುನ್ನಕುಡಿ ಎಂದರೆ ಸಂಭ್ರಮದ ಮೆರವಣಿಗೆ. ಮೆರವಣಿಗೆ ಎಂದರೆ ಕುಣಿಯುವ ಹುಮ್ಮಸ್ಸು ತರುವಂಥದ್ದು. ಅಂಥ ಮೆರವಣಿಗೆಯೂ ಕುಣಿಯುತ್ತಾ ಹೋದಂತೆ ಕುನ್ನಕುಡಿ ಆರ್. ವೈದ್ಯನಾಥನ್ ಅವರ ಪಿಟೀಲು ವಾದನ. ಅವರ ಸಂಗೀತ ಕೇಳಿದಾಗಲೆಲ್ಲಾ ಅಂಥದೊಂದು … ಓದನ್ನು ಮುಂದುವರೆಸಿ

ಲಹರಿ

ನನ್ನೊಳಗೆ ಕುಣಿಯುವ ಮೆರವಣಿಗೆ …

ಹಿಂದೊಮ್ಮೆ ಹೇಳಿದ ನೆನಪು. ನನಗೆ ಮೆರವಣಿಗೆ ಎಂದರೆ ಎಂಥದೋ ಖುಷಿ. ಮೆರವಣಿಗೆ ಇಂಥದ್ದೇ ಇರಬೇಕೆಂದೇನೂ ಇಲ್ಲ. ಚಿಕ್ಕವನಿದ್ದಾಗಲಂತೂ ಹೊರಗೆ ಬಾಜಾಭಜಂತ್ರಿ ಸದ್ದು ಕೇಳಿದರೆ ಥಟ್ಟನೆ ರಸ್ತೆಗೆ ಹಾಜರು. ಹೊರಗೆ ಪಡಸಾಲೆಯಲ್ಲಿ ಅಪ್ಪ ಕುಳಿತಿದ್ದರೆ ಸ್ವಲ್ಪ ಮೆಲ್ಲಗೆ ಸದ್ದಾಗದಂತೆ ನಡೆಯಲು ಹೋಗಿ, ಸಿಕ್ಕಿಬಿದ್ದು ಬೈಸಿಕೊಂಡ ದಿನಗಳು ಇದ್ದೇ ಇವೆ ; ಎಲ್ಲರಲ್ಲೂ ಇರುವಂತೆ ನನ್ನಲ್ಲೂ. ಹೊರಗೆ ಡೋಲಿನ ಶಬ್ದ ಕೇಳಿದರೆ ಮಗನೊಂದಿಗೆ ಓಡುತ್ತೇನೆ. ಏನೇ ಹೇಳಿ, ಮೆರವಣಿಗೆಯಲ್ಲಿ ಒಂದು ಸಂಭ್ರಮವಿದೆ. ನಮ್ಮಪ್ಪನಿಗೆ ಕೆಟ್ಟ ಕೋಪ ಇತ್ತು. ಇದೂ ಸಹ … ಓದನ್ನು ಮುಂದುವರೆಸಿ

ಅನಿಸಿದ್ದು / ಲಹರಿ

ಸಂಪಿಗೆ ಸಂಸಾರ

ಹೆಸರು ನಂಜಮ್ಮ. ಸುಮಾರು ಎಂಬತ್ತರ ಪ್ರಾಯ. ಸುಕ್ಕು ಗಟ್ಟಿದ ಮುಖ. ಒಳಗೆ ಹೆಪ್ಪುಗಟ್ಟಿದ ದುಃಖ. ಅದರ ಮಧ್ಯೆಯೂ ತೆಳ್ಳಗೆ ಬೆಳ್ಳಿಗೆರೆಯ ಹಾಗೆ ತೇಲಿ ಬರುವ ಪುಟ್ಟದೊಂದು ನಗೆ. ಅದು ಮುಖದ ಅಂದವನ್ನೇ ಬದಲಿಸುವಷ್ಟು ಸಾಮರ್ಥ್ಯವುಳ್ಳದ್ದು. ಕೆ.ಆರ್. ಮಾರುಕಟ್ಟೆಯ ಒಳಗೆ ಪ್ರವೇಶಿಸುವಾಗಲೇ ಅವಳು ಎಲ್ಲರನ್ನೂ ಎದುರುಗೊಳ್ಳುತ್ತಾಳೆ. ತನ್ನೆದುರಿಗಿದ್ದ ಸಂಪಿಗೆ ರಾಶಿಯನ್ನು ಕಾಣುತ್ತಲೇ ಜೀವನ ಸವೆಸುತ್ತಾಳೆ. ಕೆಂಡಸಂಪಿಗೆಯಂತೆ ಎದುರಿಗೆ ಬಂದ ಗಿರಾಕಿಯ ಕಂಡು ನಗುತ್ತಾಳೆ. ಐದು ರೂ. ಗೆ ಏಳರಿಂದ ಎಂಟು, ಹತ್ತು ರೂ. ಗೆ ಈ ಲೆಕ್ಕಕ್ಕಿಂತ ಇನ್ನೂ … ಓದನ್ನು ಮುಂದುವರೆಸಿ