ಭಾವ-ಅನುವಾದ

ಝೆನ್ ಕಥೆಗಳು

ನಿಜವಾದ ಸ್ನೇಹಿತರು ಬಹಳ ವರ್ಷಗಳ ಹಿಂದೆ ಚೀನಾದಲ್ಲಿ ಇಬ್ಬರು ಪರಮಾಪ್ತ ಗೆಳೆಯರಿದ್ದರು. ನಮ್ಮ ಜಿಗ್ರಿ ದೋಸ್ತ್‌ಗಳಿದ್ದ ಹಾಗೆ. ಒಮ್ಮ ಅತ್ಯಂತ ಸುಂದರವಾಗಿ, ಮಧುರವಾಗಿ ತಂತಿವಾದ್ಯವನ್ನು ನುಡಿಸುತ್ತಿದ್ದ. ಮತ್ತೊಬ್ಬ ಅಷ್ಟೇ ಸಹೃದಯತೆಯಿಂದ ಕೇಳುತ್ತಿದ್ದ. ಒಬ್ಬ ಪರ್ವತದ ಬಗ್ಗೆ ನುಡಿಸಿ ಹಾಡಿದಾಗ, ಮತ್ತ್ತೊಬ್ಬ “ನಿಜವಾಗಲೂ ಪರ್ವತದ ಸೌಂದರ್ಯವನ್ನೇ ಅನುಭವಿಸುವಂತಿದೆ’ ಎಂದ. ಹಾಗೆಯೇ ಮತ್ತೊಬ್ಬ ಜಲಧಾರೆ ಬಗ್ಗೆ ನುಡಿಸಿದ. ಅದನ್ನು ಕೇಳಿದ ಮೊದಲಿಗ “ಇಲ್ಲೇ ಜಲಪಾತ ಹರಿದಂತಾಗಿದೆ’ ಎಂದು ನುಡಿದ. ಸಹೃದಯಿ ಕೇಳುಗ (ಗೆಳೆಯ) ಕಾಯಿಲೆ ಬಂದು ಸತ್ತು ಹೋದ. ಇದು … ಓದನ್ನು ಮುಂದುವರೆಸಿ

ಭಾವ-ಅನುವಾದ

ಅವರವರ ಜೀವನ, ಅವರವರ ಸಂತೋಷ !

ರೈತನೊಬ್ಬ ಹಾಲು ಕರೆಯುತ್ತಿದ್ದ. ಅದೇ ಹೊತ್ತಿಗೆ ಹಲ್ಲಿಯೊಂದು ಬಂದು ಅದನ್ನೇ ನೋಡತೊಡಗಿತು. ಹಾಲು ಕುಡಿಯಬೇಕೆಂದೆನಿಸಿ,”ಕೊಂಚ ಹಾಲು ಕೊಡುತ್ತೀಯಾ ಕುಡಿಯಲಿಕ್ಕೆ?’ ಎಂದು ರೈತನನ್ನು ಕೇಳಿತು. ಸರಿ, ಎಂದ ರೈತ ನೇರವಾಗಿ ಹಸುವಿನ ಕೆಚ್ಚಲಿನಿಂದಲೇ ಅದಕ್ಕೆ ಹಾಲು ಹರಿಸಿದ. “ಹಾಲು ಬಹಳ ರುಚಿಯಾಗಿದೆ’ ಎಂದು ಹೇಳಿದ ಹಲ್ಲಿ, ಪಕ್ಕದಲ್ಲಿದ್ದ ಕರುವನ್ನು ನೋಡಿತು. “ಎಂಥಾ ಅದೃಷ್ಟ ಅದಕ್ಕೆ ? ದಿನವೂ ಇಂಥ ಹಾಲು ಕುಡಿಯೋ ಅದೇ ಪರಮ ಸುಖಿ. ಮುಂದಿನ ಜನ್ಮದಲ್ಲಿ ಕರುವಾದರೆ ಚೆನ್ನ’ ಎಂದುಕೊಂಡಿತು. ಅದರಂತೆ ಕರುವಾಗಿ ಹುಟ್ಟಿತು. ಇನ್ನು … ಓದನ್ನು ಮುಂದುವರೆಸಿ

ಭಾವ-ಅನುವಾದ

ಬೇಷರತ್ ಪ್ರೀತಿ

ವಿಯೆಟ್ನಾಂ ಯುದ್ಧದಲ್ಲಿ ಶತ್ರುಗಳೊಂದಿಗೆ ಧೀರತೆಯಿಂದ ಹೋರಾಡಿದ ಸೈನಿಕನೊಬ್ಬ ಸ್ಯಾನ್ ಫ್ರಾನಿಸ್ಕೋದಿಂದ ತನ್ನ ತಂದೆ ತಾಯಿಗೆ ಫೋನ್ ಮಾಡಿದ. “ಅಮ್ಮ ಮತ್ತು ಅಪ್ಪ, ನಾನು ಮನೆಗೆ ವಾಪಸ್ಸಾಗುತ್ತಿದ್ದೇನೆ. ಆದರೆ ನನಗೆ ನಿಮ್ಮಿಂದ ಒಂದು ನೆರವು ಆಗಬೇಕಿದೆ. ನನ್ನೊಂದಿಗೆ ಒಬ್ಬ ಗೆಳೆಯನಿದ್ದಾನೆ. ಅವನನ್ನೂ ಜತೆಗೆ ಕರೆ ತರಬೇಕೆಂದಿದ್ದೇನೆ’. “ಕರೆದು ತಾ, ಅದಕ್ಕೇಕೆ ಮೀನಮೇಷ. ನಮಗೂ ಅವನನ್ನು ಕಾಣಬೇಕೆಂದಿದೆ’ ಎಂದನು ಅಪ್ಪ. “ಆದರೆ ಅವನ ಬಗ್ಗೆ ನಿಮಗೆ ಏನನ್ನೋ ತಿಳಿಸಬೇಕಿದೆ’ ಎಂದ ಮಗ. “ಹ್ಞಾಂ…ಹೇಳು’. “ಯುದ್ಧದಲ್ಲಿ ಅವನು ಬಹಳ ಪೆಟ್ಟು ತಿಂದಿದ್ದಾನೆ. … ಓದನ್ನು ಮುಂದುವರೆಸಿ

ಭಾವ-ಅನುವಾದ / ಸುಲಲಿತ

ಪರ್ವತದ ಕಥೆ

ತಂದೆ ಮತ್ತು ಮಗ ಪರ್ವತದ ತಪ್ಪಲಲ್ಲಿ ನಡೆದು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಮಗ ಎಡವಿ ಬಿದ್ದ. ನೋವಾಗಿ ಜೋರಾಗಿ ಅರಚಿದ “ಆ…ಆ…ಆ’. ಆಶ್ಚರ್ಯವೆಂದರೆ ಪರ್ವತದ ಯಾವುದೋ ಭಾಗದಿಂದ “ಆ….ಆ….ಆ’ ಧ್ವನಿ ಕೇಳಿ ಬಂತು. ಕುತೂಹಲದಿಂದ ಮಗ “ಯಾರು ನೀನು’ ಎಂದು ಪ್ರಶ್ನಿಸಿದ. ವಿಚಿತ್ರವೆಂಬಂತೆ ಅದೂ “ನೀನು ಯಾರು” ಎಂದು ಕೇಳಿತು. ಪುನಃ ಈತ ಪರ್ವತದ ಕಡೆಗೆ ದಿಟ್ಟಿಸುತ್ತಾ “ನಿನ್ನನ್ನು ಪ್ರೀತಿಸುತ್ತೇನೆ ಎಂದ’. “ನಾನೂ ಅಷ್ಟೇ’ ಎಂದಿತು ಪರ್ವತ. ಸಿಟ್ಟು ಬಂತು ಮಗನಿಗೆ. “ನೀನೊಬ್ಬ ಹೆದರುಪುಕ್ಕಲ’ ಎಂದು ಬೈದ. ಪ್ರತಿಯಾಗಿ … ಓದನ್ನು ಮುಂದುವರೆಸಿ

ಭಾವ-ಅನುವಾದ / ಸುಲಲಿತ

ಮರಳು ಮತ್ತು ಕಲ್ಲು

ಬಿಸಿ ಬಿಸಿ ಮರಳಿನ ಮರಳುಗಾಡಿನಲ್ಲಿ ಇಬ್ಬರು ಗೆಳೆಯರು ನಡೆದು ಹೋಗುತ್ತಿದ್ದರು. ಬಹಳ ಆತ್ಮೀಯ ಗೆಳೆಯರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ. ಹೀಗೆ ಸಾಗುತ್ತಿದ್ದಾಗ ಯಾವುದೋ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ಶುರುವಾಯಿತು. ಒಬ್ಬ ಮತ್ತೊಬ್ಬನ ಕೆನ್ನೆಗೆ ಫಟಾರನೆ ಬಾರಿಸಿದ. ಇದರಿಂದ ಬಹಳ ದುಃಖಕ್ಕೊಳಗಾದವ ಏನೂ ಹೇಳಲಿಲ್ಲ. ಬಹಳ ಬೇಸರದಿಂದ ಸ್ವಲ್ಪ ದೂರ ನಡೆದು ಮರಳಿನಲ್ಲಿ ಹೀಗೆ ಬರೆದ “ಇಂದು ನನ್ನ ಆತ್ಮೀಯ ಸ್ನೇಹಿತ ಕೆನ್ನೆಗೆ ಹೊಡೆದ’. ಪ್ರಯಾಣ ಮುಂದುವರಿಯಿತು. ಎಲ್ಲಿಯವರೆಗೆ ಎಂದರೆ ಓಯಸಿಸ್ ಸಿಗುವವರೆಗೆ. ಅಲ್ಲಿ … ಓದನ್ನು ಮುಂದುವರೆಸಿ

ಭಾವ-ಅನುವಾದ / ಸುಲಲಿತ

ಸುತ್ತಿಗೆ ಪೆಟ್ಟು

ಮನೆ ಮುಂದೆ ಹೊಸ ಟ್ರಕ್ ನಿಂತಿತ್ತು. ತನ್ನ ಹೊಸ ಟ್ರಕ್‌ನ ಸೊಬಗು ನೋಡಲು ಹೊರಗೆ ಬಂದ ಆತ ತಬ್ಬಿಬ್ಬಾದ. ಮೂರು ವರ್ಷದ ಅವನ ಮಗ ಖುಷಿಯಿಂದ ಸುತ್ತಿಗೆ ಹಿಡಿದು ಟ್ರಕ್‌ನ ಮೇಲೆ ಸವಾರಿ ನಡೆಸಿದ್ದ. ಅವನ ಕೈಯಲ್ಲಿದ್ದ ಮೊಳೆಗಳೆಲ್ಲಾ ಟ್ರಕ್‌ಗೆ ಅಲಂಕಾರಗೊಳ್ಳುತ್ತಿದ್ದವು. ಕ್ರೋಧಕ್ಕೊಳಗಾದ ಆತ ಮಗನನ್ನು ದೂರಕ್ಕೆಳೆದ. ಸಿಟ್ಟು ತಡೆಯಲಾಗಲಿಲ್ಲ. ಅದೇ ಸುತ್ತಿಗೆಯಿಂದ ಎರಡೂ ಕೈಗಳನ್ನು ಕುಟ್ಟಿ ಬಿಟ್ಟ. ಅಪ್ಪ ಸಹಜ ಸ್ಥಿತಿಗೆ ಮರಳಿದಾಗ ತಪ್ಪಿನ ಅರಿವಾಯಿತು. ರಕ್ತ ಸೋರುತ್ತಿದ್ದ ಮಗನ ಕೈ ಕಂಡು ಕಂಗಾಲಾದ. ಕೂಡಲೇ … ಓದನ್ನು ಮುಂದುವರೆಸಿ