ಬಿಕ್ಕಿದ ಸಾಲುಗಳು-ಹೊಸತು
ಬಿಕ್ಕಿದ ಸಾಲು

ಬಿಕ್ಕಿದ ಸಾಲುಗಳು-ಹೊಸತು

ಹೂವು ಅರಳುತ್ತಿರುವಾಗ ಬಣ್ಣ ಕುಣಿಯುತ್ತಿತ್ತು * ರಸ್ತೆ ಮಧ್ಯೆ ಅನಾಥವಾಗಿ ಬಿದ್ದಿದ್ದ ಒಂದೇ ಚಪ್ಪಲಿ ಮತ್ತೊಂದರ ಕುಶಲದ ಬಗ್ಗೆಯೇ ಯೋಚಿಸುತ್ತಿತ್ತು * ಅಂಗಡಿಯ ಎದುರು ನಿಂತ ಆ ಬಾಲಕ ಗೋಡೆಯ ಬಣ್ಣದ ಆಯಸ್ಸನ್ನು ಅಳೆಯುತ್ತಿದ್ದ ದೊಡ್ಡ ಕೆರೆಯಲ್ಲಿ ಅರಳಿ ನಿಂತಿದ್ದ ತಾವರೆಗೆ ಏಕತಾನತೆ ಸಾಕಾಗಿದೆಯಂತೆ * ಅವನ ಕತ್ತಿಗೆ ಸುತ್ತಿಕೊಂಡಿದ್ದ ಟೇಪಿಗೂ ವಯಸ್ಸಾಗಿದೆ * ಚೆಸ್‌ ಬೋರ್ಡ್ ನ ರಾಜನ ದರಬಾರು ಇನ್ನೂ ಮುಗಿದಿಲ್ಲ * ಗೊಂಬೆಯೊಂದು ಸೂತ್ರ ಹರಿದು ಕೆಳಗೆ ಬಿತ್ತು ಜೀವ ಹೋಗಲಿಲ್ಲ ! … ಓದನ್ನು ಮುಂದುವರೆಸಿ

ಬಿಕ್ಕಿದ ಸಾಲು

ಹಾಗಾಗಬಾರದಿತ್ತು

ಅವನು ಹಾಗೆ ಅಂದುಕೊಂಡಿದ್ದರೆ ಏನೂ ಆಗುತ್ತಿರಲಿಲ್ಲ.. ಅವಳೂ ಅಂದೇ ಸಿಗುತ್ತಿದ್ದಳು ಸಂಜೆಯಾಯಿತು ಇವನು ಅಂದುಕೊಳ್ಳುವಷ್ಟರಲ್ಲಿ ಅರಳಿದ ಮಲ್ಲಿಗೆಯೂ ನಿದ್ರೆಗೆ ಜಾರಿತು ಚಂದಿರ ಬರುವುದನ್ನೇ ಕಾಯುತ್ತಿದ್ದಾನೆ ಹೇಗೋ ಅಮಾವಾಸ್ಯೆ ಕಳೆಯಲೇಬೇಕು ಅವಳಿಲ್ಲದೇ ಓದನ್ನು ಮುಂದುವರೆಸಿ

ಬಿಕ್ಕಿದ ಸಾಲು

ಒಂದಿಷ್ಟು ಸಾಲು..ಅನಿಸಿದ್ದು..ಬರೆದದ್ದು

ಬೊಗಸೆ ಹಿಡಿದು ನಿಂತಿದ್ದೆ. ಕೈ ತುಂಬಾ ಬೆಳಕನ್ನು ಸುರಿದುಬಿಟ್ಟ ಆತ. ಈಗ ಚೂರು ಕತ್ತಲೆಯನ್ನು ಹುಡುಕುತ್ತಿದ್ದೇನೆ..ಬೆಳಕಿಗೆ ದೃಷ್ಟಿ ಬೊಟ್ಟು ಇಡಬೇಕು.,,! ** ಒಂದು ಪುಟ್ಟ ಕಥೆ. ಹೇಳುವುದರಲ್ಲೇ ಮುಗಿದು ಹೋಗಿಬಿಡುತ್ತೆ…ಮಗು ಪುಟ್ಟದು, ಓಡುತ್ತಿತ್ತು ಪುಟಪುಟನೆ…ಹೆಜ್ಜೆಯ ಶಬ್ದವೂ ಕೇಳುತ್ತಿರಲಿಲ್ಲ…ಓಡುವಾಗ ಚಪ್ಪಲಿಯನ್ನೂ ಹಾಕಿರಲಿಲ್ಲ. ಹಾಗಾಗಿ ಚಪ್ಪಲಿ ಪೀಪಿಯ ಶಬ್ದವೂ ಇಲ್ಲ..ನಾನೂ ಹಾಗೇ ಓಡತೊಡಗಿದೆ…ಮಗು ಹಿಂತಿರುಗಿ ನೋಡಿ ನಕ್ಕಿತು..ನಾನು ಗಲಿಬಿಲಿಗೊಂಡೆ..ಮಗು ಯಾಕೆ ನಗುತ್ತಿದೆ ಎಂದು. ಅದು ಇನ್ನಷ್ಟು ಪುಟ ಪುಟನೆ ನೆಗೆಯುವಂತೆ ಓಡತೊಡಗಿತು. ನಾನು ಹಿಡಿಯಲು ಹೋದವ ಬಿದ್ದುಬಿಟ್ಟೆ…ಈಗ ಮಗು ನಿಂತು … ಓದನ್ನು ಮುಂದುವರೆಸಿ

ಮತ್ತಷ್ಟು ಸಾಲುಗಳು
ಬಿಕ್ಕಿದ ಸಾಲು

ಮತ್ತಷ್ಟು ಸಾಲುಗಳು

ಒಂದು ಬಿಂದುವಿನಿಂದ ಬದುಕು ಆರಂಭ ಮತ್ತೊಂದು ಬಿಂದಿನಲ್ಲಿ ವಿಲೀನ ನಿಂತ ಭಂಗಿಯಲ್ಲೇ ಹಾದಿ ಸವೆಸಬೇಕು ಹೊಸ ಹಾದಿ ಹುಡುಕಲು ಹೋಗಿ ಕಳೆದುಹೋಗುವುದಕ್ಕಿಂತ * * * ಕತ್ತಲೆಯೇ ಚೆಂದ ಒಳಹೊಕ್ಕರೆ ಯಾರೂ ಸಿಗುವುದಿಲ್ಲ ಒಂಟಿ ಒಂಟೆಯ ಬದುಕು ಬೆಳಕಿಗೆ ಬಂದರೆ ಜಾತ್ರೆಯೇ ಇದ್ದೀತು ಅದಕ್ಕೇ ನಾನೂ ಒಳಹೊಕ್ಕಿದ್ದೇನೆ ಹೊರಬರಲು ಮನಸ್ಸಿಲ್ಲ * * * ನಿಂತ ಕ್ಷಣದ ಎದುರು ಭವಿಷ್ಯದ ಕ್ಷಣ ಕೇಳಿತು ಯಾರ ಬದುಕು ಕ್ಷಣಿಕ? ನಿಂತ ಕ್ಷಣ ಹೇಳಿತು ನನ್ನದು ಹಾಗಲ್ಲ ಇರುವಷ್ಟೂ ಕಾಲ … ಓದನ್ನು ಮುಂದುವರೆಸಿ

ಹಾಗೇ ಸುಮ್ಮನೆ
ಬಿಕ್ಕಿದ ಸಾಲು

ಹಾಗೇ ಸುಮ್ಮನೆ

ಹೀಗೆ ಕಂಸನಂತೆ ಕನಸುಗಳನ್ನು ಕೊಲ್ಲುತ್ತಲೇ ಇದ್ದ ಆತ… ಅವನ ದೃಷ್ಟಿಯಲ್ಲಿ ಅದು ಸ್ವರಕ್ಷಣೆ ಎಲ್ಲಿಯವರೆಗೆ ಕೊಲ್ಲುತ್ತಿದ್ದ ಕನಸಿನ ಟಿಸಿಲೊಡೆದು ಮತ್ತೊಂದು ಕನಸು ಜಿಗಿದೇ ಬಿಟ್ಟಿತು… ಅದು ಹಾರಿ ಹೋದದ್ದಷ್ಟೇ ಈತನಿಗೆ ಕಂಡಿದ್ದು ಚಿಗಿತಿದ್ದೂ ಕಾಣಲಿಲ್ಲ, ಬೆಳೆದಿದ್ದೂ ಸಹ… ಕಾಲ ಅದನ್ನು ಕಾಪಾಡುತ್ತಿದೆ… ಕನಸಿನೊಳಗಣ ಕಣ್ಣು ಒಡೆದು ಹೊರಗಿನದೆಲ್ಲಾ ಸಿರಿ-ಐಸಿರಿ…. *** ಕನಸಿಗೊಂದು ಇಟ್ಟ ಹೆಸರು ಮರೆತು ಹೋಗಿದೆ ಅಯ್ಯೋ ಕನಸೂ ಮಾಸಿ ಹೋಗಿದೆ *** ಹೀಗೇ ಕಣ್ತೆರೆದು ಕುಳಿತಿದ್ದೆ ಕಣ್ಣು ತೆರೆದಂತೆಯೇ ಇತ್ತು ಬೆಳಕೊಂದು ಒಳಗೆ ಹೊತ್ತಿಕೊಂಡಂತೆ … ಓದನ್ನು ಮುಂದುವರೆಸಿ

ಬಿಕ್ಕಿದ ಸಾಲು

ಮತ್ತಷ್ಟು ಸಾಲುಗಳು

ತೇಲಿಬರುತ್ತಿದ್ದ ಅಲೆಯೊಂದು ನಿಲ್ಲಲು ಯತ್ನಿಸಿತು ಹಿಂದಿನವ ಬಿಡಲೇ ಇಲ್ಲ ** ಕೆಂಪುಲಾಬಿಗಿಂತ ಆಚೀಚಿನ ಎಳೆ ಅರೆ ಹಸಿರಿನ ಎಲೆಗಳೇ ಚೆಂದೆನಿಸುತ್ತಿವೆ ** ಮೌನಕ್ಕೆ ಹೆಸರಿಡಬೇಕಿಲ್ಲ ಹೇಗಿದ್ರೂ ಅದನ್ನು ಕರೆಯುವುದೇ ಇಲ್ಲವಲ್ಲ ** ಮಾತನಾಡದಿದ್ದವರ ಬಳಿ ಮೌನದ ಬಗ್ಗೆಯೂ ಹೇಳಿದರೂ ಸಿಟ್ಟು ** ಓದನ್ನು ಮುಂದುವರೆಸಿ

ಬಿಕ್ಕಿದ ಸಾಲು

ಬಿಕ್ಕಿದ ಸಾಲುಗಳು

ಬೆಳೆದು ನಿಂತ ಚಿಗುರಿಗೀಗ ಹರಯ ಸೂರ್ಯನನ್ನೇ ಮಣಿಸುವ ಹುಮ್ಮಸ್ಸು ಅದಕ್ಕೇ ತಲೆ ತಗ್ಗಿಸಿ ತನ್ನ ಪಾದವನ್ನೂ ನೋಡಿಕೊಳ್ಳುವಷ್ಟೂ ಪುರಸೊತ್ತಿಲ್ಲ ! *** ಎಂದೋ ಹೊರಟಿದ್ದ ಸಮುದ್ರದ ಮೊದಲ ಅಲೆ ದಡವನ್ನು ಅಪ್ಪಿದ ಅನುಭವವನ್ನು ಮತ್ತೊಂದು ಅಲೆಯೊಂದಿಗೆ ಹಂಚಿಕೊಂಡಿತು ಅಮ್ಮನನ್ನು ಅಪ್ಪಿಕೊಂಡ ಹಾಗೆ *** ಅಲೆ ಸೂರ್ಯನನ್ನು ಪ್ರೀತಿಸಿತು ಸೂರ್ಯ ಅವಳನ್ನು ವರಿಸಿದ ಅವರ ಮಕ್ಕಳು ಧರೆಗಿಳಿದರು ಮಳೆ ಜೋರಾಯಿತು ! *** ಗೋಡೆಯನ್ನು ಗೀಚುತ್ತಿದ್ದ ಪುಟ್ಟ ಮಗು ದೊಡ್ಡದೊಂದು ಗೋಳ ಹಾಕಿ ಮೂಗು, ಕಣ್ಣು ಬರೆದು ಇವಳು … ಓದನ್ನು ಮುಂದುವರೆಸಿ