ಪ್ರಬಂಧಗಳು

ಬಸ್ಸು-ಹೀಗೊಂದು ಲಲಿತ ಪ್ರಬಂಧ

ಈ ಹಿಂದಿನ ಪೋಸ್ಟ್ ನಲ್ಲಿ ಆಗಾಗ್ಗೆ ಲಲಿತಪ್ರಬಂಧಗಳನ್ನು ಪೋಸ್ಟ್ ಮಾಡುವುದಾಗಿ ತಿಳಿಸಿದ್ದೆ. ಅದಕ್ಕೂ ತಡವಾಯಿತು. ಇನ್ನು ಮುಂದೆ ನಿರಂತರತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇದು ನನ್ನ ಹೊಸ ವರ್ಷದ ಪ್ರತಿಜ್ಞೆ ಬಸ್ಸಿಗೂ ನನಗೂ ಸುಮಾರು ವರ್ಷಗಳ ಸಂಬಂಧ. ಸುಮಾರು ವರ್ಷಗಳೆಂದರೆ ಅದಕ್ಕೂ ಅಖಚಿತ ಲೆಕ್ಕವಿದೆ. ಸರಕಾರಿ ಬಸ್ಸನ್ನು ಅವಲಂಬಿಸಿ; ಅನುಭವಿಸಿ 20 ವರ್ಷಗಳು ಕಳೆದಿರಬಹುದು. ಬಸ್ಸಿಗೂ ನನಗೂ ಅನ್ಯೋನ್ಯತೆ ಬೆಳೆದದ್ದು ಅನಿವಾರ್ಯತೆಯಿಂದ, ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಬಸ್ಸನ್ನೇರಿಯೇ ಹೋಗಬೇಕಿತ್ತು. ನಡೆಯಲು ಸಾಧ್ಯವಿರಲಿಲ್ಲ ಎಂದಲ್ಲ, ಮನಸ್ಸಿರಲಿಲ್ಲ. ನಮಗೆ ಆಗಲೇ ನಾಗರಿಕತೆಯ ಝಲಕ್ … ಓದನ್ನು ಮುಂದುವರೆಸಿ