ಪ್ರಚಲಿತ

‘ಯಾನ’ ದ ಕುರಿತು ಭೈರಪ್ಪ ನವರ ಸಂದರ್ಶನ

“ಯಾನ” ಹೊಸ ಕೃತಿಯ ಕುರಿತು ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಕ್ಲುಪ್ತ ಸಂದರ್ಶನವಿದು. ನಿಮ್ಮ ಹೊಸ ಕಾದಂಬರಿ ’ಯಾನ’ ಸಿದ್ಧವಾಗಿದೆ. ಮುಂದಿನ ವಾರದಲ್ಲಿ ಓದುಗರ ಕೈಗೆ ಸಿಗಲಿದೆ. ಈ ಹೊತ್ತಿನಲ್ಲಿ ಹೊಸ ಕಾದಂಬರಿ ಬಗ್ಗೆ ಹೇಳ್ತೀರಾ? ಹೇಳುವುದೇನೂ ಇಲ್ಲ. ಹೇಳಬೇಕಾದದ್ದನ್ನು ಕೃತಿಯಲ್ಲಿ ಬರೆದಿದ್ದೇನೆ. ಒಂದಂತೂ ನಿಜ. ಈ ಕಾದಂಬರಿ ನನಗೂ ಹೊಸ ಲೋಕವನ್ನು ಪರಿಚಯಿಸಿದ್ದು ನಿಜ. ಇದೂ ಒಂದು ಪಯಣವೇ. ನನ್ನ ಕಾದಂಬರಿ ಯಾನ ವೂ ಸಹ ಒಂದು ಪಯಣದ ಕುರಿತಾದದ್ದೇ. ಯಾನ ಅಂದರೂ ಪಯಣವೆಂದೇ ಅರ್ಥ. … ಓದನ್ನು ಮುಂದುವರೆಸಿ

ಪ್ರಚಲಿತ

ಎಜುಕೇಟೆಡ್ ಸರಕಾರ ?

ನಾವು ಎಂತಹ ಹೇಸಿಗೆ ವ್ಯವಸ್ಥೆಯಲ್ಲಿದ್ದೇವೆ ಎಂದೆನಿಸುತ್ತದೆ. ಲೋಕಾಯುಕ್ತರ ಗಣಿ ಕುರಿತ ವರದಿಯನ್ನು ಸೋರಿಕೆ ಮಾಡಿದ ಸರಕಾರದ ಭಾಗಿದಾರರು ಬಹಳ ಹರ್ಷ ವ್ಯಕ್ತಪಡುತ್ತಿರಬಹುದು. ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಆ ಗ್ಯಾಂಗ್ ಗೆ ಒಂದು ಒಳ್ಳೆಯ ಭಕ್ಷೀಸನ್ನೇ ಕೊಡಬಹುದು. ಗುಮ್ಮನ ಗುಸಕ್ಕನ ತರಹ ಮಾರಿಷಸ್ ನಲ್ಲಿ ಕುಳಿತಿರುವ ಸಿಎಂ ಮಹಾಶಯರಿಗೆ ಇದು ಒಳ್ಳೆಯ ಬೆಳವಣಿಗೆಯಾಗಿರಬಹುದು. ಅದಕ್ಕಿಂತಲೂ ಮತ್ತೊಂದು ಅಗ್ನಿಪರೀಕ್ಷೆಯಲ್ಲಿ ಪಾಸಾಗಿದ್ದೇನೆ ಎಂದುಕೊಂಡು ಬೀಗುತ್ತಿರಬಹುದು. ಆದರೆ, ಇಡೀ ವ್ಯವಸ್ಥೆಯ ಬಗ್ಗೆಯೇ ಬೇಸರ ಮೂಡುತ್ತದೆ. ಇದು ಸುಧಾರಿಸುವ ನೆಲೆಯಲ್ಲಿ ಇಲ್ಲವೆಂಬ ಹತಾಶೆಯೂ ಮೂಡುತ್ತದೆ. … ಓದನ್ನು ಮುಂದುವರೆಸಿ

ಪ್ರಚಲಿತ

ನೈತಿಕ ಎಚ್ಚರ ಪ್ರಶಸ್ತಿ ನೀಡುವವರಿಗೂ ಇರಬೇಕು !

ಇದು ಸಂಪೂರ್ಣ ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ನಿಲುವು. ಇದನ್ನು ಸಾಂಸ್ಥಿಕ ನೆಲೆಯಲ್ಲಿ ನೋಡಬೇಕಿಲ್ಲ ಮತ್ತು ಅರ್ಥೈಸಬೇಕೂ ಇಲ್ಲ. ಹಿಂದೆಲ್ಲಾ ಗೌರವ, ಪ್ರಶಸ್ತಿ ಹೇಗೆ ಬರುತ್ತೆ ಎಂಬುದು ಮುಖ್ಯವಾಗಿತ್ತು. ಅದೇ ದೊಡ್ಡ ಸಂಗತಿಯೂ ಆಗಿತ್ತು. ಈಗೆಲ್ಲಾ ಗೌರವ, ಪ್ರಶಸ್ತಿ ಯಾರು ಕೊಡುತ್ತಾರೆ ಎನ್ನುವುದಕ್ಕಿಂತಲೂ ಯಾರೊಂದಿಗೆ ನಾವು ಪಡೆಯುತ್ತೇವೆ ಎನ್ನವುದೂ ಬಹಳ ಮುಖ್ಯವಾಗಿದೆ. ಕನ್ನಡ ಸಾಹಿತ್ಯದಲ್ಲೋ, ಸಂಗೀತದಲ್ಲೋ, ಸಂಸ್ಕೃತಿ ಕ್ಷೇತ್ರದಲ್ಲೋ, ವಿಜ್ಞಾನದಲ್ಲೋ, ತಂತ್ರಜ್ಞಾನದಲ್ಲೋ ಸಾಕಷ್ಟು ಕೆಲಸ ಮಾಡಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಮಂದಿಯ ಸಾಧನೆಯನ್ನೂ, ಒಂದಿಷ್ಟು ವಾಹಿನಿಗಳಲ್ಲಿ … ಓದನ್ನು ಮುಂದುವರೆಸಿ

ಪ್ರಚಲಿತ

ಹೀಗೆ ಪ್ರಶಸ್ತಿಗೂ ಕೋಟಾ ಫಿಕ್ಸ್ ಆದರೆ ‘ಗೋವಿಂದ’ನೆ ಗತಿ !

ಸಂಸ್ಕೃತಿ ಇಲಾಖೆಯ ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಅವಾಂತರವಿದು. ಇದುವರೆಗೂ ಇಂಥವರಿಗೆ ಇಷ್ಟೆಂದು ಕೋಟಾ ಫಿಕ್ಸ್ ಆಗಿರಲಿಲ್ಲ. ಈ ಸರಕಾರ ಅದನ್ನೂ ಮಾಡಿಬಿಟ್ಟಿದೆ. ‘ಮಾನ್ಯ’ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ ಅವರಿಗೆ ತಲಾ 15, ಬೆಂಗಳೂರು ಉಸ್ತುವಾರಿ ಸಚಿವ ಆರ್. ಅಶೋಕ್ ರಿಗೆ 10, ಉಳಿದ ಸಚಿವರಿಗೆಲ್ಲಾ 2 ರಿಂದ 5 ಅಂತೆ, ಇದರ ಮಧ್ಯೆ ಎಂಟು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಿಗೆ 2 (ಇದರಲ್ಲೂ ತಮ್ಮ ಪಟ್ಟಿ ನಡುವೆ ನುಸಳಲು ಸಾಧ್ಯವಾದರೆ ಮಾತ್ರ … ಓದನ್ನು ಮುಂದುವರೆಸಿ

ಪ್ರಚಲಿತ

ಸಂಸ್ಕೃತಿ ಇಲಾಖೆಯ ಅಂಗಡಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇಲ್ !

ರಾಜ್ಯೋತ್ಸವ ಪ್ರಶಸ್ತಿ ಈ ಬಾರಿಯೂ ಸೇಲ್ ! ಈ ಮಾತು ಸುಳ್ಳಲ್ಲ. ರಾಜ್ಯ ಸರಕಾರ ಅನಧಿಕೃತವಾಗಿ ಹರಾಜು ಹಾಕಿದೆ ಪ್ರಶಸ್ತಿಗಳನ್ನು. ಎಷ್ಟೋ ಬಾರಿ ಪ್ರಶಸ್ತಿಗೆ ಗೌರವ ತಂದುಕೊಡುವವರು ಯಾರು ಮತ್ತು ಯಾವುದು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ನನ್ನ ಪ್ರಕಾರ ವ್ಯಕ್ತಿಯೊಬ್ಬ ಅದನ್ನು ಅಲಂಕರಿಸಿ ಪ್ರಶಸ್ತಿಗೆ ಗೌರವ ತಂದುಕೊಡುತ್ತಾನೆ. ಆ ಕೆಲಸ ಈಗ ಆಗುತ್ತಿದೆಯೇ ಎಂದು ಕೇಳಿದರೆ ಉತ್ತರವಿಲ್ಲ. ಪಿ. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರೆದು, ಕರೆದು ಸಿಕ್ಕ ಸಿಕ್ಕವರಿಗೆಲ್ಲಾ ಪ್ರಶಸ್ತಿಯನ್ನು ಪ್ರಕಟಿಸಿದಾಗ … ಓದನ್ನು ಮುಂದುವರೆಸಿ

ಪ್ರಚಲಿತ

ಇದು ಮಾನ್ಯ ಯಡಿಯೂರಪ್ಪನವರು ಕೊಡುತ್ತಿರುವ ಶಿಕ್ಷೆ

ಎರಡು ವರ್ಷದ ಸಾಧನೆಯ ಸಂಭ್ರಮದಲ್ಲಿದ್ದ ಬಿಜೆಪಿಯ ರಾಜ್ಯ ಸರಕಾರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕೊಟ್ಟದ್ದು ಬರಿದೇ ಶಾಕ್ ಅಲ್ಲ, ವಾಸ್ತವವಾಗಿ ಆ ನಡೆಗೆ ಕೊಟ್ಟ ‘ಚೆಕ್’. ಈಗ ರಾಜ್ಯ ಸರಕಾರದ ಮುಂದಿನ ನಡೆಯೇನು ಎಂಬ ಕುತೂಹಲವಿದ್ದದ್ದು ನಿಜ. ಆದರೆ, ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಒಬ್ಬ ಅಪ್ರಬುದ್ಧ ಆಟಗಾರನಂತೆ ಸೋಲು ಒಪ್ಪಿಕೊಂಡಿದ್ದಾರೆ. ಚೆಕ್ ಕೊಡುವುದಿರಲಿ, ಪಂದ್ಯವನ್ನೇ ಆಡುವುದಿಲ್ಲ ಎಂದು ಘೋಷಿಸಿದರು. ಇದು ಅವರ ರಾಜಕೀಯ ದಡ್ಡತನವನ್ನೂ, ಅಪ್ರಬುದ್ಧತೆಯನ್ನೂ ಸಾಬೀತುಪಡಿಸಿದೆ. ಆ ಲೆಕ್ಕದಲ್ಲಿ ಹೇಳುವುದಾದರೆ ಇನ್ನೂ ನಮ್ಮ … ಓದನ್ನು ಮುಂದುವರೆಸಿ

ಪ್ರಚಲಿತ

ಪ್ರಜಾತಂತ್ರದ ದೊಡ್ದ ತಮಾಷೆ !

ಪ್ರಜಾತಂತ್ರದ ತಮಾಷೆ ನೋಡುತ್ತಿದ್ದೀರಿ. ಅನುಕೂಲಸಿಂಧು ರಾಜಕಾರಣದ ಪರಾಕಾಷ್ಠೆಯೂ ಹೌದು. ಪ್ರತಿ ಪಕ್ಷಗಳಿಗೂ ಗೆಲ್ಲುವ ಅಭ್ಯರ್ಥಿಗಳೇ ಬೇಕು. ಅಂದರೆ ಗೆಲ್ಲುವ ಕುದುರೆಯ ಬಾಲಕ್ಕೆ ಹಣ ಕಟ್ಟುವವರೇ ಆಗಿದ್ದಾರೆ. ಇಷ್ಟೇ ಆಗಿದ್ದರೆ ತಮಾಷೆಯಲ್ಲ. ಜಾತ್ಯತೀತತೆ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವವರೆಲ್ಲಾ ಜಾತಿ, ಒಳಜಾತಿಯನ್ನು ಹುಡುಕಿಕೊಂಡು ಆ-ಈ ಜನಾಂಗಗಳ ಪಟ್ಟಿ ಹಿಡಿದುಕೊಂಡು ಟಿಕೆಟ್ ಹಂಚುತ್ತಿದ್ದಾರೆ. ಈ ಮಾತು ಆ ಪಕ್ಷ-ಈ ಪಕ್ಷಕ್ಕೆ ಅನ್ವಯಿಸುವುದಿಲ್ಲ . ಎಲ್ಲವುಗಳ ಕಥೆಯೂ ಅದೇ. ಹೀಗೆ ಆಯ್ಕೆಯಾಗಿ ಸೀಟು ಪಡೆದು ಗೆದ್ದ ನಮ್ಮ ಜನ ಪ್ರತಿನಿಧಿಗಳಲ್ಲಿ ‘ಎಲ್ಲರನ್ನೂ … ಓದನ್ನು ಮುಂದುವರೆಸಿ