ಪುಟ್ಟ ಪುಟ್ಟ ಕಥೆಗಳು

ಮತ್ತೊಂದು ಪುಟ್ಟ ಕಥೆ

ಒಂದು ಪುಟ್ಟ ಕಥೆ. ಒಂದು ಗುಬ್ಬಚ್ಚಿ ಒಂದು ಗೂಡು ಕಟ್ಟಿಕೊಂಡು ಬದುಕುತ್ತಿತ್ತಂತೆ. ಒಮ್ಮೇ ಹೀಗೇ ಹಾರಿ ಹೋಗುವಾಗ ಹದ್ದೊಂದು ಎದುರಾಯಿತಂತೆ. ಅದು ಗುಬ್ಬಚ್ಚಿಯನ್ನು ತಡೆದು ನಿಲ್ಲಿಸಿ, “ನೀನು ಹೀಗೆ ಪುಟ್ಟಗೆ, ಗರ್ಜಿಸದೇ ಇದ್ದರೆ ಯಾರೂ ಗಮನಿಸುವುದಿಲ್ಲ. ಎಲ್ಲರೂ ನಿನ್ನ ಮೇಲೆ ಸವಾರಿ ಮಾಡುತ್ತಾರೆ. ಅದಕ್ಕೇ ನನ್ನ ಹಾಗೆ ಇರಬೇಕು, ನೋಡು ನನಗೀಗ ಯಾರೂ ಏನೂ ಮಾಡುವುದಿಲ್ಲ. ನಾನೆಂದರೆ ದಾರಿ ಬಿಡುತ್ತಾರೆ’ ಎಂದಿತಂತೆ. ಮೊದಲು ಗುಬ್ಬಚ್ಚಿಗೆ ಸರಿ ಎನಿಸಲಿಲ್ಲ. “ಇಲ್ಲ, ನಾನಿರುವುದೇ ಹೀಗೆ, ಹೀಗಿದ್ದರೇ ನನ್ನನ್ನು ಗುರುತಿಸುತ್ತಾರೆ, ಗೌರವಿಸುತ್ತಾರೆ’ … ಓದನ್ನು ಮುಂದುವರೆಸಿ

ಪುಟ್ಟ ಪುಟ್ಟ ಕಥೆಗಳು

ಪುಟ್ಟ ಕಥೆ

ಇದು ನನ್ನ ಮತ್ತೊಂದು ಪುಟ್ಟ ಕಥೆ ಒಂದು ಚೆಂದದ ಗೊಂಬೆಯನ್ನು ತಂದಿದ್ದ. ಬಹಳ ಚೆನ್ನಾಗಿತ್ತು, ನೋಡಿ ನೋಡಿ ಮೈ ಮರೆತ. ಯಾಕೋ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆನಿಸಿತು. ಕನ್ನಡಿ ಎದುರಿಗೆ ನಿಂತ. ಗೊಂಬೆಗಿಂತ ತಾನೇ ಕುರೂಪ ಎನಿಸಿತು. ಸಿಟ್ಟು ಬಂತು. ಗೊಂಬೆಯ ಒಂದೊಂದೇ ಅವಯವಗಳನ್ನು ಬಿಡಿಸುತ್ತಾ ಹೊರಟ. ಸ್ವಲ್ಪ ಶ್ರಮವೆನಿಸಿತು. ಆದರೂ ಕೊನೆಗೆ ಅವನೇ ಗೆದ್ದ. ಎಲ್ಲವೂ ಈಗ ಕಣ್ಣೆದುರು ಬಿದ್ದಿದೆ. ಈಗ ಮತ್ತೆ ಕನ್ನಡಿ ಎದುರು ನಿಂತ. ಈಗ ಯಾಕೋ ಮತ್ತಷ್ಟು ಕುರೂಪ ಎನಿಸತೊಡಗಿತು. ಬೇಸರದಿಂದ ಅವನ್ನೆಲ್ಲಾ … ಓದನ್ನು ಮುಂದುವರೆಸಿ

ಪುಟ್ಟ ಪುಟ್ಟ ಕಥೆಗಳು

ಪುಟ್ಟ ಪುಟ್ಟ ಕಥೆ

ಚೆಂದದ ಗೊಂಬೆಗೆ ಹೆಸರಿಡಲು ಊರೆಲ್ಲಾ ಹುಡುಕಿದರು. ಎಲ್ಲೂ ಚೆಂದದ ಹೆಸರು ಸಿಗಲಿಲ್ಲ. ಸಿಕ್ಕ ಹೆಸರುಗಳೆಲ್ಲಾ ಎಲ್ಲೋ ಕೇಳಿದಂತಿದ್ದವು. ಇನ್ನು ಸಿಕ್ಕ ಕೆಲವು ಹೆಸರುಗಳೂ ಪಂಚಾಂಗ, ನಕ್ಷತ್ರ ಏನೇನೋ ಕಾರಣಗಳಿಂದ ಇಡಲು ಯಾಕೋ ಇಷ್ಟವಾಗುತ್ತಿರಲಿಲ್ಲ. ಬೆಳಗ್ಗೆ ಅಂಗಳದಲ್ಲಿ ಮಗು ಚಾಪೆಯಲ್ಲಿ ಹರಡಿಕೊಂಡಿದ್ದಾಗ ರಸ್ತೆಯಲ್ಲಿ ಹೋಗುತ್ತಿದ್ದ ಹುಚ್ಚಿಯೊಬ್ಬಳು ಮಗುವನ್ನು ಕಂಡು “ಬಚ್ಚಿ” ಎಂದು ಕರೆದಳು. ಕೋಣೆಯಲ್ಲಿ ಕಚೇರಿಗೆ ತೆರಳಲು ಸಿದ್ಧಗೊಳ್ಳುತ್ತಿದ್ದ ಗಂಡ, ತನ್ನ ಹೆಂಡತಿಗೆ ಕೂಗಿ ಹೇಳಿದ…”ಅದೇ ಹೆಸರಿಟ್ಟು ಬಿಡು…!’ ನನ್ನ ಮತ್ತಷ್ಟು ಚಿತ್ರಗಳನ್ನು ಕಾಣಲು ಫೋಟೋ ಬ್ಲಾಗ್ ಗೆ … ಓದನ್ನು ಮುಂದುವರೆಸಿ