ಪದ್ಯ

ನನ್ನ ಹೊಸ ಬಿಕ್ಕಿದ ಸಾಲುಗಳು

ನನ್ನ ಹೊಸ ಬಿಕ್ಕಿದ ಸಾಲುಗಳಿವು. ಕೆಲಸದ ಒತ್ತಡದಿಂದ ಬ್ಲಾಗ್ ನ್ನು ಸಕಾಲದಲ್ಲಿ ಹೊಸ ಪೋಸ್ಟ್ ಗಳನ್ನು ಹಾಕಲು ಆಗಲಿಲ್ಲ. ಈ ಹೊಸ ಪೋಸ್ಟ್ ಓದಿ ಅಭಿಪ್ರಾಯ ವ್ಯಕ್ತಪಡಿಸಿ. ಬೆಳಕಿನ ಜಾತ್ರೆಯಲ್ಲಿ ಕತ್ತಲೆ ಒಬ್ಬಂಟಿ ** ತಾವರೆ ಅರಳುವ ಮುನ್ನ ಸೂರ್ಯನಿಗೆ ಹೇಳಿತಂತೆ ನೀನಿರುವಷ್ಟು ಹೊತ್ತು ನಾನು ಸೂರ್ಯ ಮುಳುಗುವಾಗ ಹೇಳಿದನಂತೆ ನೀನಿರುವಷ್ಟೇ ಹೊತ್ತು ನಾನೂ ಸಹ **** ಈ ಬೇಸಗೆ ಮತ್ತಷ್ಟು ಸೆಕೆ ಅವಳಿಲ್ಲ ಅವನೂ ಇಲ್ಲ ಅವಳೂ ಇಲ್ಲ *** ಬಯಲಲ್ಲಿ ಇದ್ದೂ ಇದ್ದೂ ಸಾಕಾಗಿದೆ … ಓದನ್ನು ಮುಂದುವರೆಸಿ

ಪದ್ಯ

ಮತ್ತೆ ಸಿಕ್ಕ ಸಾಲುಗಳು

ನೀನು ಬಿಟ್ಟು ಹೋದ ನೆನಪಿಗೆ ಎಂಥಾ ಶಕ್ತಿ ಹೇಳು ನನ್ನ ಕಾಯುತ್ತಿದೆ ಇಂದಿಗೂ ಹಗಲೂ ಇರುಳು ! *** ಆ ದಾರಿಯಲಿ ನೀನು ಬರಬೇಡ ನನಗೀಗ ಆ ಹಾದಿ ನೆನಪಿಲ್ಲ *** ಆ ನೆನಪಿರದ ಹಾದಿಯಲಿ ಎಷ್ಟು ಬಾರಿ ಬಂದರೂ ನೀನು ಮರೆತು ಹೋಗುತಿ *** ಬೆಳಕು ಮುಗಿವ ಮುನ್ನ ನನ್ನೊಳಗೆ ಬಂದು ಬಿಡು ಹೊತ್ತಿಕೊಳ್ಳಲಿ ದೀಪ ಆ ಮೂಲೆಯೊಳಗೆ ನೀನಿರಲು ಹೊರಗೇಕೆ ಬೇಕು ಮತ್ತೆ ಆ ಕಣ್ಣುಕುಕ್ಕುವ ಬೆಳಕು *** ಕತ್ತಲೆಯ ಕಂಡವರು ಬೆಳಕನ ಹುಡುಕುವರು … ಓದನ್ನು ಮುಂದುವರೆಸಿ

ಪದ್ಯ

ಇದು ಹಾಯ್ಕುಗಳೋ…ನೀವೇ ಹೇಳಿ !

ಹೀಗೆ ಹೊಳೆದ ಸಾಲುಗಳನ್ನು ಬರೆದೆ. ಬಿಕ್ಕಿದ ಸಾಲುಗಳು ಎನ್ನುವುದಕ್ಕೆ ಕಷ್ಟವಾಯಿತು. ಹಾಯ್ಕುಗಳೋ ಅರ್ಥವಾಗಲಿಲ್ಲ. ಹೆಣೆದ ಸರವನ್ನು ಇಲ್ಲಿ ತೂಗು ಹಾಕಿದ್ದೇನೆ, ಬೀರುವ ಸೌಂದರ್ಯ ಕಂಡು ನೀವೇ ಹೇಳಿ.  * ಸುರಗಿಗೆ  ಯಾಕೋ  ಬೇಸರ ಯಾರ ಮುಡಿಗೂ ಏರಲು ಸಿದ್ಧವಿಲ್ಲ * ಕೈಯಲ್ಲಿ ಹಿಡಿದ  ಕೋಲು ಅವನ  ಕೇಳಿತು ಯಾರು ಅತಂತ್ರ ? * ನಗು ವಂಚಿಸಿತು ಹಾಗೆಂದು  ಅಳೂ ಸಹ ಸತ್ಯ ಹೇಳಲಿಲ್ಲ *  ನಾನೀಗ ಮೌನಿಯಾಗಬೇಕು ಕಣ್ಣುಮುಚ್ಚಿ  ಕುಳಿತುಕೊಳ್ಳುತ್ತೇನೆ ಬಾಯಿಯನ್ನಲ್ಲ  * ಓದನ್ನು ಮುಂದುವರೆಸಿ

ಪದ್ಯ

ಬಹಳ ದಿನಗಳ ನಂತರದ ಬಿಕ್ಕಿದ ಸಾಲುಗಳು

ಬಹಳ ದಿನಗಳ ನಂತರ ಒಂದಿಷ್ಟು ಬಿಕ್ಕಿದ ಸಾಲುಗಳನ್ನು ಬರೆದಿದ್ದೇನೆ. ಇದು ನನಗೆ ಖುಷಿ ಕೊಡುವ ಸಾಲುಗಳು.  ನಿಮಗೂ ಇಷ್ಟವಾದರೆ ಹೇಳಿ. ನಕ್ಕ ನಕ್ಷತ್ರದ ಮೊಗದಲಿ ಬಿದ್ದ ಗುಳಿ ತೋರಲೇ ಇಲ್ಲ * ಬೆಳಕು ಕತ್ತಲೆಯ ಹೊದ್ದು ಮಲಗಿತು ಕತ್ತಲೆಗಂದು ಜಾಗರಣೆ * ಕಪ್ಪು ಮದುವೆಯಾಗಲು ಬಯಸಿತು ಬಿಳಿ ಒಪ್ಪಿಕೊಳ್ಳಲಿಲ್ಲ ಕೆಂಪನ್ನು ಕಪ್ಪು ಒಪ್ಪಲಿಲ್ಲ ಹಸಿರು, ಹಳದಿ… ಯಾರೂ ಇಷ್ಟವಾಗಲಿಲ್ಲ ಕಪ್ಪು ಇಂದಿಗೂ ಬ್ರಹ್ಮಚಾರಿ * ಅಂಗಳದಲಿ ಬಿದ್ದ ಬೆಳಕಿನಲ್ಲಿ ಆತ ಅವಳನ್ನು ಹುಡುಕುತ್ತಿದ್ದ * ವರ್ಷಗಟ್ಟಲೆ ಅವನಿಗಾಗಿ … ಓದನ್ನು ಮುಂದುವರೆಸಿ

ಪದ್ಯ

ಎಲ್ಲವೂ ಮುಗಿದಿದೆ…

ಅವನ ಬಳಿ ಹೇಳುವುದೇನಿಲ್ಲ ಎಲ್ಲವೂ ಮುಗಿದಿದೆ ನನ್ನದೆಲ್ಲವನ್ನೂ ಕಳೆದುಕೊಂಡು ಅವನಿಂದ ಪಡೆದದ್ದನ್ನೇ ನನ್ನದೆಂದುಕೊಂತಿಡ ಕ್ಷಣದಿಂದ ಹೀಗನಿಸಿದ್ದು ನಿಜ ನಾನು ಅವನಿಗೆ ಅರ್ಥವಾಗಿದ್ದೇನೆ ! ಅವನೂ ಹಾಗೇ ಅಂದುಕೊಂಡನೇನೋ? ನನಗೆ ಗೊತ್ತಿಲ್ಲ ಅಂದಿನಿಂದ ನನ್ನ ಹೆಜ್ಜೆಯ ನೆರಳನ್ನೂ ನೋಡಲು ಹೋಗಲಿಲ್ಲ ಆತನ ನೆರಳು ನನ್ನ ಹೆಜ್ಜೆಯೊಂದಿಗೆ ಕೂಡಿ ನಡೆಯುತ್ತಿರಬಹುದೆಂದುಕೊಂಡೆ ಪ್ರತಿ ಮಾತಿನ ಮಧ್ಯೆ ಉದ್ಭವವಾಗುತ್ತಿದ್ದ ಪುಟ್ಟ ಮೌನಕ್ಕೆ ದೊಡ್ಡ ಅರ್ಥ ಕಲ್ಪಿಸಲಿಲ್ಲ ಮೌನದ ನಾದವನ್ನು ಸವಿದೆ ಅರ್ಥವಾಗದ್ದೂ ಅರ್ಥವಾಯಿತೆಂಬ ಭಾವ ನನಗೆ ಕಲಿಸಿದ್ದು ಅದೇ ಇರಬೇಕು ಎಂಬುದೀಗ ಅರ್ಥವಾಗಿದೆ … ಓದನ್ನು ಮುಂದುವರೆಸಿ

ಪದ್ಯ

ಆಕೆ ಯಾರಿಗೆ ರೂಪಕ !

ಆಕೆ…ಆಕೆ ಯಾರಿಗೆ ರೂಪಕ ? ಅವನಿಗೋ ? ಪ್ರೀತಿಗೋ? ಅಂಗಳದಿ ಅರಳಿದ ಹೂವ ಕಂಡು ಸೊಗಸ ಕಣ್ಣ ತುಂಬಿಕೊಂಡಳಲ್ಲ, ಬರಿದೇ ಇರಲಿಲ್ಲ ಮನದೊಳಗೂ ತುಂಬಿಹೋದದ್ದು ಅರಿವೇ ಬರಲಿಲ್ಲ ಕಣಿವೇಲಿ ನಡೆಯುವಾಗ ಆದ ಹೆಜ್ಜೆಯ ಸದ್ದ ಆಲಿಸಿದ್ದಷ್ಟೇ, ಕಣ್ಣನೆತ್ತಿಯೂ ನೋಡಲಿಲ್ಲ, ಅದೆಂಥದೋ ಭಾವ ಅವಳ ಬಿಡಲಿಲ್ಲ ತಣ್ಣನೆ ಹರಿಯುವ ಝರಿ, ಸುಮ್ಮನೆ ಬೀಸುವ ಗಾಳಿ, ಮಧ್ಯೆ ತೇಲಿ ಬರುವ ಕೊಳಲ ಉಸಿರಿನೋನ್ಮಾದ ಮೋಹಗೊಳ್ಳಲಿಲ್ಲ ಆಕೆ, ಕರಗಿ ಹೋದಳು ಅವನ ಪಡೆಯಲಿಲ್ಲ ಆಕೆ, ಅದನೂ ಬಯಸಿದವಳಲ್ಲ ಹೂವ ಮುಡಿದು ಚೆಲುವೆಯಾಗ … ಓದನ್ನು ಮುಂದುವರೆಸಿ

ಪದ್ಯ

ಬಿಕ್ಕಿದ ಸಾಲುಗಳು ಹೊಸತು

ನಡೆದ ಪಾದಗಳು ಸವೆದಿವೆ ಒಂದೆರಡೂ ಗೆರೆಗಳು ಉಳಿದಿಲ್ಲ ನನ್ನದೆಂದು ಹೇಳಲಿಕ್ಕೆ *** ಮೌನದೊಳಗೆ ಹೊಕ್ಕು ಒಂದಾಗಿ ಬಿಡಲು ಮಾತು ಬಿಡುತ್ತಿಲ್ಲ *** ಅವಳ ಮುಂದೆ ಎಲ್ಲವನ್ನೂ ತೆರೆದಿಡಲು ಹೋದೆ ಯಾಕೋ ಮನಸ್ಸಾಗಲಿಲ್ಲ ನನ್ನೊಳಗೇ ಅವಿತುಕೊಂಡ ನನಗೆ ಅವಳೂ ಕಾಣದಾದಳು ! ಓದನ್ನು ಮುಂದುವರೆಸಿ