ನಗರೀಕರಣವೆಂಬ ಡೆಡ್ಎಂಡ್ ಇಲ್ಲದ ರಸ್ತೆ
ನಗರಮುಖಿ

ನಗರೀಕರಣವೆಂಬ ಡೆಡ್ಎಂಡ್ ಇಲ್ಲದ ರಸ್ತೆ

ಒಂದು ಮಾಯೆ ನಮ್ಮನ್ನು ಆವರಿಸಿಕೊಂಡಾಗ ನಮ್ಮದು ಅನಿವಾರ್ಯ ಸ್ಥಿತಿ. ಯೋಚಿಸುವ ಕೆಲಸಕ್ಕೆವಿರಾಮ ಹೇಳಿರುತ್ತೇವೆ. ಅದು ಮಾಡಿಸುತ್ತಿರುತ್ತದೆ. ನಾವು ಮಾಡುತ್ತಿರುತ್ತೇವೆ. ಇಲ್ಲಿ ಮಾಯೆಯೆಂಬುದು ಸಂದರ್ಭವಷ್ಟೇ. ಅದು ನಿರ್ಗುಣಿ. ಗುಣಾವಗುಣ ಆರೋಪವಿದ್ದರೂ ಅದನ್ನು ಎದುರಿಸುವವನದ್ದು. ನಗರವೆಂಬುದೇ ಮಾಯೆ. ಅದರ ಒಳಗೂ-ಹೊರಗೂ ನಾವಿದ್ದೇವಷ್ಟೇ. ಒಂದು ಮಸಾಲೆ ದೋಸೆ ನಮ್ಮೊಳಗೆ ಹೇಗೆ ನಗರ ಸಂವೇದನೆಯ ಬೀಜವನ್ನು ಬಿತ್ತಿದೆ ಎಂದು ಊಹಿಸಿಕೊಂಡರೆ, ನಿಜದಿ ನಾವೇನಾಗಿ ಉಳಿದಿದ್ದೇವೆ ಎನ್ನುವುದೇ ಸೋಜಿಗ. ಇದೊಂದು ಮಾಯೆ ಎನಿಸುವುದಿಲ್ಲವೇ? ಯಾಕೆಂದರೆ, ಮುಂಬು ಮಳೆಗೆ ಮುಳುಗಿತ್ತು, ಚೆನ್ನೈಯೂ ಮುಳುಗಿತ್ತು. ಈಗ ದಿಲ್ಲಿಯೇ … ಓದನ್ನು ಮುಂದುವರೆಸಿ

ಮಸಾಲೆ ದೋಸೆ ಮತ್ತು ನಗರ ಸಂವೇದನೆ
ನಗರಮುಖಿ

ಮಸಾಲೆ ದೋಸೆ ಮತ್ತು ನಗರ ಸಂವೇದನೆ

ಈ ಹೊತ್ತೇ ನಗರೀಕರಣದ್ದು. ಎಲ್ಲ ಹಳ್ಳಿಗಳೂ ನಗರಗಳಾಗುತ್ತಾ ಹೊರಟಿವೆ. ಎಲ್ಲರ ಕಣ್ಣಲ್ಲೂ ಒಂದಿಷ್ಟು ಬಣ್ಣಬಣ್ಣದ ಕನಸುಗಳಿವೆ.

ಕಳೆದ ಐದು ವಾರದಿಂದ ಪ್ರತಿ ಶನಿವಾರ ಉದಯವಾಣಿಯ ‘ನಗರಮುಖಿ’ ಅಂಕಣದಲ್ಲಿ ನಾನು ಬರೆಯುತ್ತಿದ್ದೇನೆ. ಅಲ್ಲಿಯ ಲೇಖನಗಳಿವು. ದಯವಿಟ್ಟು ಓದಿ ನಿಮ್ಮ ಅಭಿಪ್ರಾಯ-ಸಲಹೆಯನ್ನು ತಿಳಿಸಿ. ಓದನ್ನು ಮುಂದುವರೆಸಿ