ಧಾರಾವಾಹಿ

ಮನೆ ಕಟ್ಟಿ ನೋಡಿದಾಗ ಅನಿಸಿದ್ದು ಏನು ?

ಇದು ನನ್ನ ಹೊಸ ಧಾರಾವಾಹಿ. ಮನೆ ಕಟ್ಟಿದ ಕುರಿತಾದದ್ದು. ನಮ್ಮದೊಂದು ಕಲ್ಪನೆ ಮೂರ್ತ ಸ್ವರೂಪ ಪಡೆಯುವಾಗ ಅನುಭವಿಸುವ ಸಂಕಟ, ಇದನ್ನೇ ಆಧಾರವಾಗಿಸಿಕೊಂಡು ನಿರ್ಮಾಣಗೊಳ್ಳುವ ಹತ್ತು ಹಲವು ವಲಯಗಳು..ನಿಜ..ಯಶವಂತ ಚಿತ್ತಾಲರ ಶಿಕಾರಿ ನೆನಪಾಗುತ್ತದೆ. ವಾರಕ್ಕೊಂದು ಅಧ್ಯಾಯ ಬರೆಯುವೆ…ಓದಿ ಅಭಿಪ್ರಾಯಿಸಿ..ಆ ಪೈಕಿ ಇದು ಮೊದಲ ಕಂತು. ಬಹಳ ದಿನದಿಂದ ಬ್ಲಾಗಿನಿಂದ ದೂರವಿದ್ದೆ..ಈಗ ಮತ್ತೆ ಅದೇ ಅಂಗಳಕ್ಕೆ.. ಮನೆ ಕಟ್ಟುವುದು ಒಂದು ದೊಡ್ಡ ಕನಸು. ಅದರಲ್ಲೂ ತನ್ನ ಮಧ್ಯ ವಯಸ್ಸಿನಲ್ಲಿ ಸ್ವಂತದ್ದೊಂದು ಸೂರು ಹೊಂದಬೇಕೆಂಬ ಮಹದಾಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅದು … ಓದನ್ನು ಮುಂದುವರೆಸಿ

ಧಾರಾವಾಹಿ

ವಿತಂಡವಾದವನ್ನೂ ಸಹಿಸುವ ತಾಳ್ಮೆ ಕಲಿಸಿದ್ದು ಅದೇ…!

ನಮ್ಮ ಬ್ರಹ್ಮಚಾರಿಗಳ ಪುಟಗಳು ಬಹಳ ದಿನಗಳ ಮೇಲೆ ಮತ್ತೆ ಆರಂಭವಾಗಿದೆ. ಇನ್ನು, ನಿಲ್ಲುವುದಿಲ್ಲ…! ಇಂತಿರ್ಪ ನಮ್ಮ ಬ್ರಹ್ಮಚಾರಿಗಳ ಮನೆಯೊಳಗೆ ಏನೆಲ್ಲಾ ಆಗಬೇಕಿತ್ತೋ ಅದೆಲ್ಲಾ ಆಗಬೇಕಿತ್ತು. ನಮ್ಮ ಮನೆ ಮೀಡಿಯಾ ಸರ್ಕಲ್ ನಲ್ಲಿ ಎಷ್ಟು ಜನಪ್ರಿಯವಾಗಿತ್ತೆಂದರೆ ಹೇಳುವಂತಿಲ್ಲ. ಹೊಸಬರು ನಮ್ಮ ಮನೆಗೆ ಅರ್ಜಿ ಹಾಕಿಕೊಂಡು ಕಾದದ್ದೂ ಇದೆ. ಇದ್ದ ನಾಲ್ಕು ವರ್ಷದಲ್ಲಿ ನಾವೆಲ್ಲರೂ ಹೋಟೆಲ್ಲಿಗೆ ಹೋಗಿದ್ದೇ ಕಡಿಮೆ. ಎಲ್ಲೋ ರಾತ್ರಿ ಎಲ್ಲರೂ ತಡವಾಗಿ ಬಂದು ಬೆಳಗ್ಗೆ ತಿಂಡಿ ಮಾಡದಿದ್ದಾಗ ಬಿಟ್ಟರೆ ಉಳಿದಂತೆ ಮನೆಯೇ. ಒಂದು ವಿಶೇಷವೆಂದರೆ ನಮ್ಮ ಮನೆಯಲ್ಲಿ … ಓದನ್ನು ಮುಂದುವರೆಸಿ

ಧಾರಾವಾಹಿ

ಪ್ರೆಸ್ ಕಾರ್ಡ್ ಏನು ಇನ್ಸುರೆನ್ಸ್ ಕಾರ್ಡಾ ?

ಹರ್ಷನ ಪ್ರಸಂಗ ನೆನಪಿಸುವಾಗ ನನ್ನ ಪ್ರಸಂಗ ನೆನಪಾಯಿತು. ಆದರೆ ನನ್ನ ಪ್ರಸಂಗ ಕಲಿಸಿದ್ದು ಬಹಳ ಇದೆ. ಆ ಪಾಠ ಹೇಳಿದವನನ್ನು ಮಾರನೇ ದಿನ ಹುಡುಕಿಕೊಂಡು ಅದೇ ಸರ್ಕಲ್ಲಿಗೆ ಹೋದೆ. ಸಿಗಲಿಲ್ಲ…ಇಂದಿಗೂ ಸಿಕ್ಕಿಲ್ಲ. ಗಾಂಧಿಗಿರಿ ಪ್ರದರ್ಶಿಸಿದ ಹರ್ಷರ ಕಥೆ ಕೇಳಿದಿರಿ. ಮಾರನೇ ದಿನ ಆ ಪೋಲಿಸ್ ಸ್ಟೇಷನ್ ಅವರಿಗೆ ಇದು ಯಾರ ಸೈಕಲ್ ಅಂತಾ ಗೊತ್ತಾಗಿ, ಫೋನ್ ಮಾಡಿ ತಂದುಕೊಡುವಂಥ ಪರಿಸ್ಥಿತಿ. ಈ ಪ್ರಸಂಗ ನಮಗಂತೂ ಒಂದು ವಾರದ ಹೂರಣವಾಗಿದ್ದು ಸುಳ್ಳಲ್ಲ. ಹರ್ಷ ಹಾಗೆಲ್ಲಾ ಮತ್ತೊಬ್ಬರ ಮನಸ್ಸು ನೋಯಿಸಿದ್ದಿಲ್ಲ, … ಓದನ್ನು ಮುಂದುವರೆಸಿ

ಧಾರಾವಾಹಿ

ಬ್ರಹ್ಮಚಾರಿಯ ಪುಟಗಳಲ್ಲಿ ನಮ್ಮ ಸಾಹೇಬರ ಗಾಂಧಿಗಿರಿ !

ನನ್ನ ಬರವಣಿಗೆಯ ಪಯಣ ಮತ್ತೆ ಬ್ರಹ್ಮಚಾರಿಗಳ ಪುಟಗಳಿಂದಲೇ ಆರಂಭ. ಇದು ಒಂದು ಪ್ರಸಂಗದ ಕಥೆ. ಇದರಲ್ಲಿ ಪತ್ರಕರ್ತ, ಪತ್ರಿಕೋದ್ಯಮ..ಹೀಗೆ ಎಲ್ಲೆಲ್ಲೋ ಹರಿದು ಕೊನೆಗೆ ನಿಂತದ್ದು ನಮ್ಮ ನಮ್ಮ ನೆಲೆಯಲ್ಲಿಯೇ. ಓದಿ ಅಭಿಪ್ರಾಯಿಸಿ. ಪತ್ರಕರ್ತರೆಂದರೆ ನಿಶಾಜೀವಿಗಳು ಎನ್ನುವ ಮಾತಿತ್ತು, ನಾವು ಕೆಲಸ ಮಾಡುವಾಗ. ಅದರಲ್ಲೂ ನಾವು ಕ್ರೈಂ ರಿಪೋರ್ಟರ್ ಗಳು. ಸಾಮಾನ್ಯವಾಗಿ ಎಲ್ಲರ ಕೆಲಸ (ಸರಕಾರಿ ನೌಕರರು, ಖಾಸಗಿ ಕಚೇರಿ ಇತ್ಯಾದಿ) ಸಂಜೆ ಆರಕ್ಕೋ, ಏಳಕ್ಕೋ ಮುಗಿದರೆ ಪತ್ರಕರ್ತರದ್ದು ಶುರುವಾಗುವುದೇ ಆವಾಗ. ಎಲ್ಲರ ಪತ್ರಕರ್ತರ ಕಥೆ ಹೀಗಾದರೆ ಕ್ರೈಂ … ಓದನ್ನು ಮುಂದುವರೆಸಿ

ಧಾರಾವಾಹಿ

ಬ್ರಹ್ಮಚಾರಿಯ ಪುಟಗಳಲ್ಲಿ ಬಹುಮತದ ಪ್ರಜಾಪ್ರಭುತ್ವ

ಗೆಳೆಯರೇ, ಬ್ರಹ್ಮಚಾರಿಗಳ ಪುಟಗಳನ್ನು ಮತ್ತೆ ಮುಂದುವರಿಸಿದ್ದೇನೆ. ಕೆಲ ಕಾರಣಗಳಿಂದ ಮಧ್ಯೆ ನಿಂತು ಹೋಗಿತ್ತು. ಈಗ ಮತ್ತೆ ಆರಂಭಿಸಿದ್ದೇನೆ. ಓದಲು ಮರೆಯಬೇಡಿ. ಅಂದ ಹಾಗೆ, ನಮ್ಮದು ಪ್ರಜಾಪ್ರಭುತ್ವ ! ಪುಟ -13 “ನೋಡಯ್ಯಾ, ನಗರಕ್ಕೆ ಬಂದ ಮೇಲೆ ಏನಾದರೂ ಮಾಡಬೇಕು. ಸುಮ್ನೆ ಇದ್ದರೆ ಊರಲ್ಲೇ ಇರಬಹುದಿತ್ತಲ್ಲಾ?’-ಬೆಳಗ್ಗೆ ಊರಿನಿಂದ ಬೆಂಗಳೂರು ಬಸ್ ಸ್ಟ್ಯಾಂಡ್‌ನಲ್ಲಿ ಬಸ್ಸಿನಿಂದ ಇಳಿದಾಗ ಮೊದಲು ಅನಿಸಿದ್ದು. ಇದು ಬಿಡಿ, ಎಲ್ಲರನ್ನೂ ಕಾಡುತ್ತಲೇ ಇರುತ್ತೆ. ಮೊದಲು, ದೊಡ್ಡದ ನಗರದಲ್ಲಿ ಚಿಕ್ಕದೊಂದು ಬಾಡಿಗೆ ಮನೆ ಹಿಡಿಯಲು ತೊಡಗಿದಾಗಲೇ ಆ ಸರ್ಕಸ್ಸಿನ … ಓದನ್ನು ಮುಂದುವರೆಸಿ

ಧಾರಾವಾಹಿ

ಮುಂದುವರಿದ ಬ್ರಹ್ಮಚಾರಿಗಳ ಪುಟಗಳು

ಅಧ್ಯಾಯ 12 ಅನಂತದಿಂ ದಿಗಂತಂ ಎಂಬ ಹಾಡು ನೆನಪಾಗಿ ಹರ್ಷನಿಗೆ ಫೋನ್ ಹಚ್ಚಿ ಮಾತನಾಡಿದೆ. ಪಕ್ಕದಲ್ಲಿ ಪಿ. ಕಾಳಿಂಗರಾಯರ “ರಾಜಹಂಸ’ ದ ಗೀತೆಗಳು ನನ್ನ ಸಿಸ್ಟಮ್ ನಲ್ಲಿ ಬರ್ತಾ ಇತ್ತು. ಹರ್ಷನ ಡ್ಯಾನ್ಸ್..ಒಮ್ಮೆ ಕುಣಿಯಲು ಹೋದಾಗ ಕಾಲು ಉಳುಕಿ ನೋವಾಗಿದ್ದು…ಎಲ್ಲಾ ನೆನಪಾಯಿತು. ಒಂದು ಹಲಸೂರಿನ ಮನೆ-ಅದರೊಳಗಿನ ಸಂಬಂಧ-ಬಂಧ ಎಲ್ಲವೂ ನಮ್ಮನ್ನು ಎಷ್ಟು ಕ್ರಿಯಾಶೀಲವಾಗಿಸಿಟ್ಟಿತ್ತು ಎಂಬುದು ಜ್ಞಾಪಕಕ್ಕೆ ಬಂದು ಹೀಗಿರುವ ಪರಿಸ್ಥಿತಿಯ ಕಂಡು ಬೇಸರವಾಗಿದ್ದೂ ನಿಜ. ಆಗಕ್ಕೂ ಈಗಕ್ಕೂ ಒಂದೇ ವ್ಯತ್ಯಾಸ. ಆಗ ನಮಗ್ಯಾರಿಗೂ ಮದುವೆಯಾಗಿರಲಿಲ್ಲ ; ಈಗ … ಓದನ್ನು ಮುಂದುವರೆಸಿ

ಧಾರಾವಾಹಿ

ಬ್ರಹ್ಮಚಾರಿಗಳ ಪುಟ ಹೊಸತು-ಹನ್ನೊಂದು

ಪುಟ ಹನ್ನೊಂದು ಹರ್ಷನ ರಸಮಂಜರಿ ಆಗಾಗ್ಗೆ ನಡೆಯುತ್ತಲೇ ಇತ್ತು. ವರದಿಗಾರರಾಗಿದ್ದರಿಂದ ಬೆಳಗ್ಗೆ ೧೧. ೩೦ ವರೆಗೆ ಆರಾಮ್. ಪೊಲೀಸ್ ಕಮೀಷನರ್ ಕಚೇರಿಯ “ಮೀಡಿಯಾ ಸೆಂಟರ್’ನಿಂದಲೇ ನಮ್ಮ ನಿತ್ಯದ ಕೆಲಸ ಆರಂಭ. ಒಂದುವೇಳೆ ಏನಾದರೂ ಬೆಳಗ್ಗೆ ಬೆಳಗ್ಗೆಯೇ ದೊಡ್ಡ ಅಪಘಾತ-ಆಕಸ್ಮಿಕಗಳು ನಡೆದರೆ ಅಲ್ಲಿಗೆ ದೌಡಾಯಿಸಬೇಕು. ಘಟನಾ ಸ್ಥಳಕ್ಕೆ ಭೇಟಿ ನೀಡದೇ ಬರೆಯುವವರು ಇವತ್ತಿಗೂ ನಮ್ಮ ಪತ್ರಿಕೋದ್ಯಮದಲ್ಲಿ ಇದ್ದಾರೆ. ಅವರಂಥವರಲ್ಲಿ ಎರಡು ವಿಧ. ಘಟನಾ ಸ್ಥಳಕ್ಕೆ ಹೋಗದೇ ಅವರಿವರತ್ತಿರ ಕಾಡಿಬೇಡಿ ಪಡೆದು, ಕೊಟ್ಟಷ್ಟೇ ಸಾಕೆಂಬ ಧೋರಣೆಯಲ್ಲಿ ಸುದ್ದಿ ಕೊಟ್ಟು ಕೈ … ಓದನ್ನು ಮುಂದುವರೆಸಿ