ಮಕ್ಕಳೇಕೆ ಸುಳ್ಳು ಹೇಳುವುದಿಲ್ಲ
ಚಿತ್ರಿಕೆ

ಮಕ್ಕಳೇಕೆ ಸುಳ್ಳು ಹೇಳುವುದಿಲ್ಲ

ಮಕ್ಕಳೇಕೆ ಸುಳ್ಳು ಹೇಳುವುದಿಲ್ಲ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಎಲ್ಲ ಮಕ್ಕಳ ಮುಂದೆ ಹೋಗಿ. ಅವರು ನಿಮ್ಮನ್ನು ದಂಗು ಬಡಿಸುವಂತೆ ಸುಳ್ಳು ಹೇಳುತ್ತಾರೆ. ಹಾಗಾದರೆ, ಈ ಮಾತು ಏಕೆ ಹುಟ್ಟಿತು ಎಂಬ ಪ್ರಶ್ನೆಯನ್ನು ಸೃಷ್ಟಿಸಿಕೊಂಡು ನಮ್ಮೊಳಗೆ ನಾವು ಹೊಕ್ಕೋಣ. ಆಗ ಎಲ್ಲವೂ ತಿಳಿದೀತು. ನನ್ನ ಮಗನಿಗೆ ಜೋರು ನಿದ್ದೆ ಮಾಡುವ ಅಭ್ಯಾಸ. ಅಂದೂ ಸಹ ಬೆಳಗ್ಗೆ ಮಳೆ ಬೇರೆ ಬರುತ್ತಿತ್ತು. ರಾಯರು ಏಳುವಾಗ ತಡವಾಯಿತು. ಶಾಲೆ ವ್ಯಾನ್ ಗೆ ಸಿದ್ಧವಾಗಲು ಇರುವುದು ಕೇವಲ ೧೫ ನಿಮಿಷ. ಅಷ್ಟರಲ್ಲಿ ಆತ, … ಓದನ್ನು ಮುಂದುವರೆಸಿ

ಚಿತ್ರಿಕೆ

ಒಂದು ಮೇಘ ಮಲ್ಹಾರದ ಸಾಲು…!

ಬೆಟ್ಟ ಹತ್ತಲು ಹೊರಟವನಿಗೆ ಏಕೋ ಬೇಸರ ಬಂದಿತು. ಇತ್ತ ಮತ್ತಷ್ಟು ಏರಲೂ ಬೇಸರ, ಇಳಿದು ಹೋಗಲೂ ಬೇಸರ. ನಿಂತಲ್ಲೇ ನಿಲ್ಲಲು ಮತ್ತಷ್ಟು ಬೇಸರ. ಏನು ಮಾಡಬೇಕೆಂದು ತೋಚದೇ ಸುಮ್ಮನೆ ಹಾಗೆಯೇ ನಿಂತುಬಿಟ್ಟ ಸ್ವಲ್ಪ ಹೊತ್ತು. ಹಾಗೆಂದು ಜಗತ್ತು ನಿಲ್ಲಲಿಲ್ಲ. ಇವನ ಮುಂದೆ ಇನ್ನೆಷ್ಟೋ ಮಂದಿ ಇಳಿದುಹೋಗುತ್ತಿದ್ದರು. ಮತ್ತೆಷ್ಟೋ ಮಂದಿ ಇವನನ್ನು ದಾಟಿ ಮೇಲೇರುತ್ತಿದ್ದರು. ಒಂದು ಪುಟ್ಟ ಮಗು ಮೆಟ್ಟಿಲಿನ ಅಂಚನ್ನು ಹಿಡಿದುಕೊಂಡು ಮೆಲ್ಲಗೆ ಹತ್ತಿ ಬರುತ್ತಿತ್ತು. ಅದರ ಹಿಂದೆ ಅದರ ಅಮ್ಮ. ಅಪ್ಪ ಯಾವಾಗಲೋ ಮುಂದಕ್ಕೆ ಹೋಗಿರಬೇಕು. … ಓದನ್ನು ಮುಂದುವರೆಸಿ

ಚಿತ್ರಪಟ / ಚಿತ್ರಿಕೆ

ಗೋವಾ ಮುಗೀತು : ಬೆಂಗಳೂರು ಚಿತ್ರೋತ್ಸವದ ಬಗ್ಗೆ ಎರಡು ಮಾತು

ಗೋವಾ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಚಿತ್ರೋತ್ಸವವನ್ನೂ ಗಮನದಲ್ಲಿಟ್ಟುಕೊಂಡು ಬರೆದ ಲೇಖನವಿದು. ನಿಮ್ಮ ಅಭಿಪ್ರಾಯಕ್ಕೆ ಸದಾ ಸ್ವಾಗತ. ಬೆಂಗಳೂರು 5 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿರುವ ಹೊತ್ತಿದು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಎರಡನೇ ಚಿತ್ರೋತ್ಸವ. ಈ ಮೊದಲ ಮೂರು ಚಿತ್ರೋತ್ಸವಗಳು ಸಂಘಟಿತವಾಗಿದ್ದು ಸಿನಿಮಾಸಕ್ತರೇ. ಸುಚಿತ್ರಾ ಫಿಲಂ ಸೊಸೈಟಿಯನ್ನು ಕೇಂದ್ರವಾಗಿಟ್ಟುಕೊಂಡು, ಒಂದಿಷ್ಟು ಚಿತ್ರೋತ್ಸಾಹಿಗಳು ಸೇರಿ ಸಂಘಟಿಸಿದ್ದರು. ವಿವಿಧ ರೀತಿಯ ಹೊಸ ಪ್ರಯತ್ನಗಳಿಂದಹಿಡಿದು, ಬೆಂಗಳೂರಿನಲ್ಲಿ ಚಿತ್ರೋತ್ಸವದ ಸಂಭ್ರಮ ಶುರುವಾಗಿದ್ದೇ ಆಗ. ಈಗ ಐದರ ಸಂಭ್ರಮ. ಚಿತ್ರೋತ್ಸವ ವ್ಯವಸ್ಥೆಗೆ ಈಗ ಸರಕಾರಿ ರಕ್ಷಣೆ … ಓದನ್ನು ಮುಂದುವರೆಸಿ

ಚಿತ್ರಿಕೆ

ದಂಡುಪಾಳ್ಯ : ಸೆನ್ಸಾರ್ ಇಲ್ಲದ ಕ್ರೈಂಡೈರಿ

ಹಿಂಸೆಯನ್ನು ಕಲಾತ್ಮಕವಾಗಿ ತೋರಿಸುವುದು ಹೇಗೆ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟುಕೊಂಡು ಗಮನಿಸಿದರೆ ವಿಚಿತ್ರವಾದ ಅಭಿಪ್ರಾಯ ಮೂಡಬಹುದು. ಹಿಂಸೆಯೆಂಬುದೇ ಮಾನವ ವಿರೋಧಿ. ಅದನ್ನು ಕಲಾತ್ಮಕವಾಗಿ ತೋರಿಸುವುದು ಎಂದರೆ ಹೇಗೆ ಎಂದೂ ಅನಿಸಬಹುದು.  ಹಿಂಸೆ ನಮ್ಮ ಬದುಕಿನ ಭಾಗವೂ ಆಗಿರುವುದರಿಂದ ಭೀಭತ್ಸದ ನೆಲೆಯಲ್ಲಿ ಅದಕ್ಕೊಂದು ಸ್ಥಾನವನ್ನೂ ಕಲ್ಪಿಸಿದ್ದೇವೆ. ಹಾಗೆ ನೋಡುವುದಾದರೆ ಆ ಭೀಭತ್ಸತೆಗೂ ಮಿತಿ ಇದೆಯೇ ಎಂಬುದು ಚರ್ಚೆಗೆ ಯೋಗ್ಯವಾದ ಪ್ರಶ್ನೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡ ನಿರ್ದೇಶಕ ಶ್ರೀನಿವಾಸ್ ಬಾಬು ಅವರ ದಂಡುಪಾಳ್ಯ ಇಂಥದ್ದೇ ಪ್ರಶ್ನೆಯನ್ನು ಚರ್ಚೆಗೆ ಆಗು ಮಾಡುತ್ತದೆ. ಓಂ … ಓದನ್ನು ಮುಂದುವರೆಸಿ

ಚಿತ್ರಿಕೆ

ಅದಕ್ಕೆ ಬೇರೆ ಉತ್ತರವಿಲ್ಲ !

ಧಾರಾಳಿ ಮಹಾ ಎನ್ನುವಷ್ಟು. ಕೇಳಿದವರಿಗೆಲ್ಲಾ ಹಂಚುತ್ತಲೇ ಇರುವಾತ. ಲೆಕ್ಕವೇನನ್ನೂ ಕೇಳುವುದಿಲ್ಲ. ಹಾಗೆಂದು ಲೆಕ್ಕವಿಟ್ಟುಕೊಳ್ಳುವುದಿಲ್ಲ ಎನ್ನುವಂತಿಲ್ಲ. ಅದಕ್ಕೆ ಬೇರೊಬ್ಬನಿದ್ದಾನೆ. ಅವನು ಮಹಾ ಜಿಪುಣ. ಪಕ್ಕದಮನೆಯಿಂದ ಒಗ್ಗರಣೆಗೆಂದು ತಂದ ಎರಡು ಸಾಸಿವೆ ಕಾಳನ್ನೂ ಬರೆದಿಟ್ಟುಕೊಳ್ಳುತ್ತಾನೆ. ಮೊನ್ನೆ ಹೀಗೇ..ಇದ್ದಕ್ಕಿದ್ದಂತೆ ಭರ್ರನೆ ಮಳೆ ಸುರಿದಂತೆ ಗಿರಾಕಿಗಳು ಬಂದು ತುಂಬಿಕೊಂಡರು. ಎಲ್ಲಿದ್ದರೋ, ಎಲ್ಲರ ಮುಖದಲ್ಲೂ ಹಸಿವೆಯ ಕಳೆಯಂತೂ ಕುಣಿಯುತ್ತಿತ್ತು. ಇದ್ದದ್ದು ಹತ್ತೇ ಟೇಬಲ್ಲುಗಳು. ಅವುಗಳಲ್ಲಿ ಈ ಮೊದಲೇ ಬಂದವರೆಲ್ಲಾ ತುಂಬಿದ್ದರು. ಇನ್ನು ಇವರಿಗೆಲ್ಲಿ ಜಾಗ ? ಹಸಿವೆಗೆ ಹೇಳಲು ಬೇರೆ ಉತ್ತರವಿರಲಿಲ್ಲ, ಅದಕ್ಕಾಗೇ ಕಾದರು … ಓದನ್ನು ಮುಂದುವರೆಸಿ

ಚಿತ್ರಿಕೆ

ಹೊಸ ವರ್ಷದ ಸಂಕಲ್ಪ

ಧರ್ಮವೇ ಜಯವೆಂಬ ದಿವ್ಯಮಂತ್ರ || ಪ || ಮರ್ಮವನರಿತು ಮಾಡಲಿಬೇಕು ತಂತ್ರ || ಅ.ಪ || ವಿಷವಿಕ್ಕಿದವನಿಗೆ ಷಡುರಸವನುಣಿಸಲಿಬೇಕು ದ್ವೇಷ ಮಾಡಿದವನ ಪೋಷಿಸಲಿಬೇಕು ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು ಮೋಸ ಮಾಡುವನ ಹೇಸರು ಮಗನಿಗಿಡಬೇಕು || 1 || ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು ಬಂಧನದೊಳಿಟ್ಟವರ ಬೆರೆಯಬೇಕು ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು ಕುಂದೆಣಿಸುವವರ ಗೆಳೆತನ ಮಾಡಬೇಕು || 2 || ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು ಕಂಡು ಸಹಿಸದವರ ಕರೆಯಬೇಕು ಪುಂಡರೀಕಾಕ್ಷ ಶ್ರೀಪುರಂದರವಿಠ್ಠಲನ ಕೊಂಡಾಡಿ ತಾ … ಓದನ್ನು ಮುಂದುವರೆಸಿ

ಚಿತ್ರಿಕೆ / ಹಲವು

ಬದಲಾಗುತ್ತಿದ್ದೇವೆ…ಪತ್ರಿಕೋದ್ಯಮ ಶಿಕ್ಷಣಕ್ಕೆ ಹೊಸ ಬ್ಲಾಗ್ !

ಬಹಳ ದಿನಗಳಾಯ್ತು ಬ್ಲಾಗಿನ ಕಡೆ ಮುಖ ಹಾಕಿರಲಿಲ್ಲ. ಬದಲಾಗುವ ಸನ್ನಿವೇಶದಲ್ಲಿ ಹೊಸದೊಂದು ರೀತಿಯಲ್ಲಿ ಏನಾದರೂ ಕೈಗೊಳ್ಳಬೇಕೆಂದು ಯೋಚಿಸುತ್ತಿದ್ದೆ. ಆ ದಿಕ್ಕಿನಲ್ಲಿ ಕಾರ್ಯ ಮಗ್ನನಾಗಿದ್ದೆ. ಬ್ಲಾಗ್ ಹೊರತಾದ ಒಂದೆರಡು ಅಸೈನ್ ಮೆಂಟಗಳಿದ್ದವು. ಅದರಲ್ಲಿ ತೊಡಗಿಕೊಂಡಿದ್ದೆ. ಅದೂ ಮುಕ್ಕಾಲುವಾಸಿ ಮುಗಿದಿದೆ. ಬ್ಲಾಗ್ ಅನ್ನು ಒಂದು ಸದ್ದುದ್ದೇಶಕ್ಕೂ ಈಡೇರಬೇಕು ಎಂದು ವಾದಿಸುತ್ತಾ ಬಂದವನಲ್ಲಿ ನಾನೂ ಒಬ್ಬ. ಈ ಹಿನ್ನೆಲೆಯಲ್ಲಿ ಹೊಸ ಹೆಜ್ಜೆಗೆ ಅಡಿಯಿಡುತ್ತಿದ್ದೇನೆ. ಇದು ನನ್ನ ಹಲವು ದಿನಗಳ ಕನಸೂ ಸಹ. ನನ್ನ ಕ್ಷೇತ್ರ ಪತ್ರಿಕೋದ್ಯಮ. ಈ ಕ್ಷೇತ್ರದತ್ತ ಒಲವಿಟ್ಟು ಬರುವವರ … ಓದನ್ನು ಮುಂದುವರೆಸಿ