ಚಿತ್ರಪಟ

ಸದ್ಯ ಭಾರತೀಯ ಸಿನಿಮಾ : ನನ್ನ ಅನಿಸಿಕೆ

ಭಾರತೀಯ ಸಿನಿಮಾಕ್ಕೆ ಈಗ ನೂರು ವರ್ಷದ ಸಂಭ್ರಮ. ಜಾಗತೀಕರಣ, ಉದಾರೀಕರಣದ ಹೊತ್ತಿನಲ್ಲಿ ಎಲ್ಲ ಬಣ್ಣವನ್ನೂ ಮಸಿ ನುಂಗಿತೆನ್ನುವಂತೆ ಚಿಕ್ಕ ಚಿಕ್ಕ ಭಾಷೆ, ಸಂಸ್ಕೃತಿ, ಸಮುದಾಯವನ್ನು ಆರ್ಥಿಕ ಶಕ್ತಿ ಇರುವ ಭಾಷೆ, ಸಮುದಾಯಗಳು ಆವರಿಸಿಕೊಳ್ಳುತ್ತಿರುವ ಹೊತ್ತಿದು. ಸಣ್ಣ ಸಣ್ಣ ಭಾಷೆ, ಸಮುದಾಯಗಳ ಉದ್ಧಾರದ ನೆಪದಲ್ಲಿ ಅವುಗಳನ್ನು ತಮ್ಮೊಳಗೆ ಸೇರಿಸಿಕೊಳ್ಳುತ್ತಲೇ ಎಲ್ಲವನ್ನೂ ಬದಲಿಸಿ ಏಕರೂಪತೆ ಕೊಡುವ ಹುನ್ನಾರವೂ ಸದ್ದಿಲ್ಲದೇ ನಡೆಯುತ್ತಿದೆ. ಇದೆಲ್ಲವೂ ಒಂದು ಬಗೆಯ ಮತ ರಾಜಕಾರಣದಂತೆಯೇ, ಪಕ್ಷಗಳು ತಮ್ಮ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಬಗೆಯಂತೆಯೇ. ಇವೆರಡರ ಮಧ್ಯೆ ಬಹಳ … ಓದನ್ನು ಮುಂದುವರೆಸಿ

ಚಿತ್ರಪಟ / ಚಿತ್ರಿಕೆ

ಗೋವಾ ಮುಗೀತು : ಬೆಂಗಳೂರು ಚಿತ್ರೋತ್ಸವದ ಬಗ್ಗೆ ಎರಡು ಮಾತು

ಗೋವಾ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಚಿತ್ರೋತ್ಸವವನ್ನೂ ಗಮನದಲ್ಲಿಟ್ಟುಕೊಂಡು ಬರೆದ ಲೇಖನವಿದು. ನಿಮ್ಮ ಅಭಿಪ್ರಾಯಕ್ಕೆ ಸದಾ ಸ್ವಾಗತ. ಬೆಂಗಳೂರು 5 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿರುವ ಹೊತ್ತಿದು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಎರಡನೇ ಚಿತ್ರೋತ್ಸವ. ಈ ಮೊದಲ ಮೂರು ಚಿತ್ರೋತ್ಸವಗಳು ಸಂಘಟಿತವಾಗಿದ್ದು ಸಿನಿಮಾಸಕ್ತರೇ. ಸುಚಿತ್ರಾ ಫಿಲಂ ಸೊಸೈಟಿಯನ್ನು ಕೇಂದ್ರವಾಗಿಟ್ಟುಕೊಂಡು, ಒಂದಿಷ್ಟು ಚಿತ್ರೋತ್ಸಾಹಿಗಳು ಸೇರಿ ಸಂಘಟಿಸಿದ್ದರು. ವಿವಿಧ ರೀತಿಯ ಹೊಸ ಪ್ರಯತ್ನಗಳಿಂದಹಿಡಿದು, ಬೆಂಗಳೂರಿನಲ್ಲಿ ಚಿತ್ರೋತ್ಸವದ ಸಂಭ್ರಮ ಶುರುವಾಗಿದ್ದೇ ಆಗ. ಈಗ ಐದರ ಸಂಭ್ರಮ. ಚಿತ್ರೋತ್ಸವ ವ್ಯವಸ್ಥೆಗೆ ಈಗ ಸರಕಾರಿ ರಕ್ಷಣೆ … ಓದನ್ನು ಮುಂದುವರೆಸಿ

ಚಿತ್ರಪಟ

ಮರೀನಾ-ಒಪ್ಪಬಹುದಾದ ಚಿತ್ರ

ಬಹಳ ತಿಂಗಳ ನಂತರ ಮತ್ತೆ ಬ್ಲಾಗ್ ಗೆ ಹೊಕ್ಕಿದ್ದೇನೆ. ಯಾಕೋ ಬರೆಯುವುದನ್ನೇ ನಿಲ್ಲಿಸಬೇಕೆನಿಸಿತ್ತು, ನಿಲ್ಲಿಸಿದ್ದೆ. ಈ ಮಧ್ಯೆ ಒಂದಿಷ್ಟು ಪುಸ್ತಕ ಓದಿದೆ, ಮತ್ತೊಂದಿಷ್ಟು ಆರ್ಟ್ ಎಕ್ಸಿಬಿಷನ್ ನೋಡಿದೆ, ಅದಕ್ಕಿಂತ ಹೆಚ್ಚು ಎನಿಸುವಷ್ಟು ಸಿನಿಮಾ ನೋಡಿದೆ, ಹಲವಾರು ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾದೆ. ಬದುಕು ಮತ್ತಷ್ಟು ಮಜಾ ಎನಿಸಿದೆ. ಈಗ ಮತ್ತೆ ಒಂದಿಷ್ಟು ಬರೆಯಬೇಕೆಂದೆನಿಸಿದೆ, ಶುರು ಮಾಡಿದ್ದೇನೆ ಈ ಚಿತ್ರದ ಕುರಿತಾದ ಬರಹದ ಮೂಲಕ. ಕನ್ನಡದಲ್ಲಿ 19 ನೇ ದಶಕದಲ್ಲಿ ಸಿನಿಮಾ ಸೇರಿದಂತೆ ಬಹುತೇಕ ಸೃಜನಶೀಲ ನೆಲೆಗಳ ಕಥಾವಸ್ತುವಾಗಿದ್ದ ಮಧ್ಯಮವರ್ಗ … ಓದನ್ನು ಮುಂದುವರೆಸಿ

ಚಿತ್ರಪಟ

ಸಾಂಗತ್ಯಕ್ಕೆ ಭೇಟಿ ಕೊಡಿ

ಸಾಂಗತ್ಯ ಆರಂಭವಾಗಿದೆ. ನಾವೇ ಒಂದಷ್ಟು ಮಂದಿ ಕೂಡಿಕೊಂಡು ಕುಪ್ಪಳ್ಳಿಯಲ್ಲಿ ಎರಡು ದಿನಗಳ ಚಿತ್ರೋತ್ಸವ ನಡೆಸಿದೆವು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಬಂದಿದ್ದ ೪೦ ಮಂದಿ ಸ್ನೇಹಿತರಾದೆವು. ಖುಷಿಯಿಂದ ಕಳೆಯಿತು ಎರಡು ದಿನ. ಸುತ್ತಲೂ ಹಸಿರಿನ ಪರಿಸರ, ಜತೆಗೆ ಕಣ್ಣಿಗೆ ಕಟ್ಟುವ ಎಂಟು ಚಲನಚಿತ್ರಗಳು, ಅದರೊಂದಿಗೆ ಒಂದಿಷ್ಟು ಚರ್ಚೆ- ಎಲ್ಲವೂ ಮುಗಿದು ಮತ್ತೆ ನಾವು ನಾವು ಬದುಕಿರುವ ಊರಿನತ್ತ ಹೊರಟಾಗ ಮನಸ್ಸು ಭಾರವಾಯಿತು. ಬೆಂಗಳೂರಿಗೆ ಪ್ರವೇಶ ದ್ವಾರವೆನ್ನುವಂತಿರುವ ‘ಜಾಲಹಳ್ಳಿ ಕ್ರಾಸ್’ ನತ್ತ ಬರುತ್ತಿದ್ದಂತೆ  ಕಂಡಕ್ಟರ್ ‘ಜಾಲಹಳ್ಳಿ ಕ್ರಾಸ್, … ಓದನ್ನು ಮುಂದುವರೆಸಿ

ಚಿತ್ರಪಟ

ವೇದಿಕೆ ಸಿದ್ಧ ; ಚಿತ್ರ ಮೂಡಬೇಕಷ್ಟೇ…!

ನಿಜಕ್ಕೂ ಖುಷಿಯಾಗುತ್ತಿದೆ. ನಮ್ಮ ಮುಂದಿನ ಸವಾಲು ಮತ್ತಷ್ಟು ಕಠಿಣವಾಗಿದೆ. ಸುಮ್ಮನೆ ಎಂದು ಆರಂಭಿಸಿದ “ಸಾಂಗತ್ಯ’ದ ಪ್ರಯತ್ನಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ.3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ ನಡೆಯುವ “ನಮ್ಮ ಚಿತ್ರೋತ್ಸವ’ ಕ್ಕೆ ಸಿಕ್ಕ ಪ್ರತಿಕ್ರಿಯೆ ಹಾಗೂ ನೋಂದಣಿ ನಿಜಕ್ಕೂ ಹೊಸ ಹುಮ್ಮಸ್ಸು ಮೂಡಿಸಿದೆ. ಈ ಹಿಂದೆ ಮಂಥನದ ಗೆಳೆಯರು ಮತ್ತು ನಾನು ಕೊಡಚಾದ್ರಿಯಲ್ಲಿ ಕುಳಿತು ಯೋಚಿಸುತ್ತಿದ್ದಾಗ ಹೊಳೆದ ಆಲೋಚನೆ ಇದು. ಅದೀಗ “ಸಾಂಗತ್ಯ’ ಎಂಬ ಹೊಸ ರೂಪ ಪಡೆದಿದೆ. ನಾವು ನೋಂದಣಿಗೆ ಕೋರಿದ್ದೆವು. ನಾವು ನಿಗದಿಪಡಿಸಿರುವುದೇ ಮೂವತ್ತೈದು … ಓದನ್ನು ಮುಂದುವರೆಸಿ

ಚಿತ್ರಪಟ

ಚಿತ್ರೋತ್ಸವಕ್ಕೆ ನೋಂದಣಿ ಆರಂಭ

ಗೆಳೆಯರಿಗೆ ನಮಸ್ಕಾರ. ಎಷ್ಟು ಚೆಂದದ ಊರು, ಪರಿಸರ ಎಲ್ಲವೂ. ಅದರಲ್ಲಿ ಕುಳಿತು ತಣ್ಣನೆಗೆ ಫಿಲ್ಮ್ ನೋಡೋದು ಅಂದ್ರೆ ನಿಜಕ್ಕೂ ಖುಷಿಯ ಸಂಗತಿ. ಈಗಾಗಲೇ ತಿಳಿಸಿದಂತೆ ಜನವರಿ 3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ “ಸಾಂಗತ್ಯ’ದ ಚಲನಚಿತ್ರೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಮೊನ್ನೆ ತಾನೇ ವಾದಿರಾಜ್, ಸುಧೀರ್ ಕುಮಾರ್, ಮಧುಕರ್ ಮಯ್ಯ ಸೇರಿದಂತೆ ಕುಪ್ಪಳ್ಳಿಗೆ ಹೋಗಿ ನೋಡಿ ಬಂದೆವು. ಪರಿಸರವಂತೂ ಅದ್ಭುತ. ಜತೆಗೆ ನಮ್ಮ ಯೋಗ-ಭಾಗ್ಯ ನೋಡಿ. ಅಲ್ಲಿನ ದೃಶ್ಯ-ಶ್ರವ್ಯ ಸ್ಟುಡಿಯೋ ಡಿ. 29 ರಂದು ಉದ್ಘಾಟನೆಗೊಳ್ಳುತ್ತಿದೆ. ತದ … ಓದನ್ನು ಮುಂದುವರೆಸಿ

ಚಿತ್ರಪಟ

ನಮ್ಮ ಚಿತ್ರೋತ್ಸವ-ಅಂತಿಮ ಕಂತು…

ನಮಸ್ಕಾರ. ಈಗಾಗಲೇ ತಿಳಿಸಿದಂತೆ ಜ. 3 ಮತ್ತು 4 ರಂದು ಕುಪ್ಪಳ್ಳಿಯಲ್ಲಿ ಹಮ್ಮಿಕೊಳ್ಳುತ್ತಿರುವ ಚಿತ್ರೋತ್ಸವಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ. ಅವಧಿಯವರು ಒಂದು ನೋಟ್ ಹಾಕಿ ಪ್ರಶಂಸಿದರು. ಹಾಗೆಯೇ ಹಲವು ಗೆಳೆಯರು ಸಲಹೆಗಳನ್ನು ನೀಡಿದರು. ಕೇಳಿದ್ದಕ್ಕೆ ಒಳ್ಳೆ ಚಿತ್ರಗಳ ಪಟ್ಟಿಯನ್ನೂ ಕೊಟ್ಟರು. ಆ ಪೈಕಿ ಕೆಲವನ್ನೂ ತೆಗೆದುಕೊಳ್ಳುತ್ತಿದ್ದೇವೆ. ಇದೆಲ್ಲದಕ್ಕಿಂತ ಮೊದಲು ಒಂದನ್ನು ಸ್ಪಷ್ಟಪಡಿಸಬೇಕು. ಈ ಚಿತ್ರೋತ್ಸವದ ಹಿಂದೆ ನಾನೊಬ್ಬನೇ ಇಲ್ಲ. ಮಂಥನದ ವಾದಿರಾಜ್ ಮತ್ತು ಹಲವು ಗೆಳೆಯರು ಇದ್ದಾರೆ. ಚಿತ್ರೋತ್ಸವದಂಥ ಚಟುವಟಿಕೆಗಳಿಗೆಂದೇ ನಮ್ಮ ಗುಂಪಿಗೆ ಇಟ್ಟುಕೊಂಡ ಹೊಸ ಹೆಸರು … ಓದನ್ನು ಮುಂದುವರೆಸಿ