ಕಥೆ

ಮಳೆ ಇನ್ನೂ ನಿಂತಿಲ್ಲ…!

ಮೊನ್ನೆ ಮುಗಿದ ಮಳೆಗಾಲದ ಒಂದು ರಾತ್ರಿಯ ಕೆಲವು ಕ್ಷಣ. ಊರ ದೀಪಗಳೆಲ್ಲಾ ಹೊತ್ತಿ ಕೊಂಡಿದ್ದವು. ಆದರೂ ಕತ್ತಲೆ ಕಳೆದಿರಲಿಲ್ಲ. ಅಲ್ಲಲ್ಲಿ ಚಂದ್ರನ ಬೆಳಂದಿಂಗಳು ಮಾಡಿಗೆ ಹೊದಿಸಿದ ತೆಂಗಿನಗರಿ (ಮಡ್ಲೆಡೆ)ಗಳ ತೂತುಗಳಿಂದ ಬಿದ್ದಂತೆ ಕತ್ತಲೆಯೂ ಅಲ್ಲಲ್ಲಿ ಹೊಳೆಯುತ್ತಿತ್ತು. ಅಷ್ಟು ಬೆಳಕಿನ ಮಧ್ಯೆ ಕತ್ತಲೆ ಹೊಳೆದಿದ್ದನ್ನು ಕಂಡದ್ದು ಅಂದೇ. ಹತ್ತಿರದ ಪೇಟೆ ಬದಿಯಿಂದ ಮನೆಗೆ ನಡೆದು ಬರುತ್ತಿದ್ದೆ. ಚಿಕ್ಕದಾದ ದಾರಿ. ಪಕ್ಕದಲ್ಲಿ ಹರಿಯುತ್ತಿದ್ದ ತೋಡು. ಮಳೆ ಹನಿ ಬೀಳುತ್ತಿದ್ದುದು ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಯಾಕೋ, ನನಗೂ ತಿಳಿದಿಲ್ಲ. ನನ್ನ ಹೆಜ್ಜೆಗಳು ಭಾರವಾಗುತ್ತಿದ್ದವು. … ಓದನ್ನು ಮುಂದುವರೆಸಿ

ಕಥೆ

ಪೂರ್ಣಗೊಳ್ಳದ ಚಿತ್ರ

ಬಂದ ಪತ್ರದಲ್ಲಿ ಮೂರೇ ಪದಗಳಿದ್ದವು. “ಎಲ್ಲರಿಗೂ ನಮಸ್ಕಾರ, ವಂದೇ’. ಪತ್ರ ತೆರೆದವನ ಮನಸ್ಸು ವ್ಯಾಕುಲಗೊಂಡಿತು; ತೀರಾ. ಏನೂ ಹೇಳಲು ತೋಚಲಿಲ್ಲ. ಸುಮ್ಮನೆ ಗೋಡೆಯನ್ನು ನೋಡುತ್ತಾ ಕುಳಿತ. ಗೋಡೆಯ ಎದುರು ನಾಲ್ಕೈದು ಚಿತ್ರಗಳಿದ್ದವು. ಯಾವುದಕ್ಕೂ ಬಣ್ಣ ಬಳಿದಿರಲಿಲ್ಲ. ಗೋಡೆಯ ಬಣ್ಣವನ್ನೂ ಹೊದ್ದುಕೊಂಡಿರಲಿಲ್ಲ. ಒಂದು ಮನುಷ್ಯನ ಚಿತ್ರ. ಥೇಟ್ ಅವನನ್ನೇ ಹೋಲುವಂಥದ್ದು. ಕಾಲುಗಳು ತೀರಾ ತೆಳ್ಳಗೆ, ಕೈಗಳೂ ಭಿನ್ನವಾಗಿರಲಿಲ್ಲ. ಮುಖ ಮಾತ್ರ ದಪ್ಪ. ಅದರ ಮಧ್ಯೆ ಕಣ್ಣಿಗೆ ದೃಷ್ಟಿಯೇ ಇರಲಿಲ್ಲ. ಹೀಗೆ ಏನೇನೋ ಆಗಿ ಅವನನ್ನೇ ನೆನಪಿಸುತ್ತಿತ್ತು. ಅದನ್ನು ಕಂಡು … ಓದನ್ನು ಮುಂದುವರೆಸಿ

ಕಥೆ

ಎರಡು ಹನಿಯ ಕಥೆಗಳು

ಬೆಳಕು ಮತ್ತು ಕತ್ತಲೆ ಬೆಳಕಿನ ಕುಡಿಯೊಂದು ಕಾಡನ್ನು ಸೀಳಿಕೊಂಡು ಮುನ್ನಡೆಯುತ್ತಿತ್ತು. ದಟ್ಟವಾದ ಕಾಡು, ಎಲ್ಲೆಲ್ಲೂ ಹಸಿರು. ಬೇಸಗೆಯಾಗಿದ್ದರೂ ಹಸಿರಿಗೆ ಕೊರತೆಯಿರಲಿಲ್ಲ. ಕೆಲವೆಡೆಯಂತೂ ಸೂರ್‍ಯನ ಬೆಳಕೇ ಬೀಳದಷ್ಟು ಕತ್ತಲೆ. ಈ ಬೆಳಕಿನ ಕುಡಿಗೆ ಕಾಡೇನೂ ಹೊಸದಲ್ಲ. ಸಂಜೆಯಾಗುತ್ತಿದ್ದ ಸಮಯ. ನಿಂತ ಮರವೂ ನಿಂತಲ್ಲೇ ವಿಶ್ರಮಿಸಿಕೊಳ್ಳುವಂಥ ಕಾಲ. ತನ್ನೊಳಗೆ ಕಟ್ಟಿದ ಗೂಡುಗಳಲ್ಲಿ ಕಲರವ ಕೇಳುವ ಸಂಭ್ರಮದಲ್ಲಿ ಮುಳುಗುತ್ತಿತ್ತು. ಈ ಕುಡಿ ನಡೆದು ನಡೆದು ದಣಿವಾದಂತೆನಿಸಿತು. ಅಷ್ಟರಲ್ಲಿ ಒಂದು ಮಿಣುಕು ಹುಳು ಎದುರಾಯಿತು. ಕುಡಿಗೆ ಅಚ್ಚರಿ. ನನ್ನ ಹಾಗೆಯೇ ಇದ್ದೀ. ಆಗಾಗ … ಓದನ್ನು ಮುಂದುವರೆಸಿ

ಕಥೆ

ತಪ್ಪಿಗೆ ಮೊಹರು ಹಾಕು ಬಾ-ಉತ್ತರಾರ್ಧ

ಕಾಲೇಜಿನಲ್ಲಿ ನಿನ್ನ ಮಾತು ಕೇಳಲಿಕ್ಕೆಂದೇ ಬರುವವರಿದ್ದರು, ಆ ಮೊದಲು ನನಗಂತೂ ಮಾತೇ ಬರುತ್ತಿರಲಿಲ್ಲ. ಅದನ್ನೂ ನಾನು ಕಲಿತದ್ದು ನಿನ್ನಿಂದಲೇ. ಕಲಿಯುತ್ತಾ ಹೋದೆ, ಕಲಿತೆ, ಮಾತೇ ಆಗಿ ಹೋದೆ. ನೀನು ಮಾತಿನ ಮಧ್ಯೆ ಮಧ್ಯೆ ನೀನು ತುಂಬುತ್ತಿದ್ದ ಮೌನದ ಲಯವನ್ನು ಕಲಿಯುವುದು ಮರೆತೇ ಹೋಯಿತು. ನಿನ್ನ ಮೌನದ ಕಸೂತಿಯ ಪಾಠ ಆಗಲೇ ಇಲ್ಲ ನನಗೆ. ಅದಕ್ಕೇ ಇರಬೇಕು, ನನ್ನದು ಬರಿಯ ಮಾತಾಗತೊಡಗಿತು, ಅರ್ಧ ತುಂಬಿದ ಬಿಂದಿಗೆಗಳ ಸದ್ದಿನಂತೆ. ನನ್ನ ಗೆಳೆಯರು ವಾಚಾಳಿ ಎನ್ನತೊಡಗಿದ್ದರು. ಆದರೂ ಮಾತನಾಡುವುದನ್ನು ನಿಲ್ಲಿಸಿರಲಿಲ್ಲ, ಕಾರಣವಿಷ್ಟೇ. … ಓದನ್ನು ಮುಂದುವರೆಸಿ

ಕಥೆ

ತಪ್ಪಿಗೆ ಮೊಹರು ಹಾಕು ಬಾ

ಇವತ್ತು ನಿನ್ನ ಎಲ್ಲ ಷರತ್ತುಗಳಿಗೂ ನಾನು ಬದ್ಧ. ಬಂದು ಬಿಡು. ನೀನು ಹೇಳಿದಂತೆ ಕೇಳುತ್ತೇನೆ. ಎಲ್ಲವನ್ನೂ ಒಪ್ಪಿಕೊಳ್ಳುತ್ತೇನೆ, ಎದುರಾಡುವುದಿಲ್ಲ. ನಿನ್ನಂತೆಯೇ ನಾನೂ ಆಗಿ ಬಿಡುತ್ತೇನೆ ಅದಕ್ಕಾಗಿ ಮನಸ್ಸು-ಬುದ್ಧಿ ಎಲ್ಲವನ್ನೂ ಪಕ್ಕಾಗಿಸಿದ್ದೇನೆ. ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ ; ಉತ್ತರಕ್ಕಾಗಿಯೇ ನನ್ನ ಕಿವಿಗಳಿನ್ನು ಮೀಸಲು. ನನ್ನ ಕಣ್ಣುಗಳೂ ಎತ್ತಲೂ ಚಲಿಸುವುದಿಲ್ಲ ; ನಿನ್ನನ್ನು ಬಿಟ್ಟು. ಇದರ ಆಣೆ ಪಡೆಯಲಾದರೂ ಒಮ್ಮೆ ಬಂದು ಬಿಡು. ಅಂದು…ನನ್ನ ಬಾಳದಿಕ್ಕು ಬದಲಾಗುವ ಲಕ್ಷಣ ಕಂಡಾಗ ಭವಿಷ್ಯವನ್ನು ಅರಿಯಬೇಕಿತ್ತು. ಅದಾಗಲಿಲ್ಲ. ಆಗ ನಾನು ಸೋತಿದ್ದು ನಿಜ, … ಓದನ್ನು ಮುಂದುವರೆಸಿ

ಕಥೆ

ಯಶವಂತ

 ಜೋರಾದ ಗಾಳಿ ಬೀಸುತ್ತಿದ್ದ ದಿನಗಳವು. ಮನೆಯ ಹೊರಗೆ ಗೇಟು ತೆಗೆದ ಶಬ್ದವಾಯಿತು. ಯಶವಂತ ಕಿಟಕಿಯಲ್ಲಿ ಇಣುಕಿ ನೋಡಿದ. ಅಂಚೆಯಣ್ಣ ಕೈಯಲ್ಲಿ ಕಾಗದ ಹಿಡಿದು ನಿಂತಂತಿತ್ತು. ಗೇಟಿನ ಚಿಲಕ ತೆಗೆಯಲು ಅಮ್ಮನ ಕಡೆ ನೋಡಿದ. ಅಡುಗೆ ಮನೆಯಲ್ಲಿದ್ದ ಅಮ್ಮ ಗೇಟು ತೆಗೆಯುತ್ತಿದ್ದಂತೆ ಅವ ಹೊರಗೆ ನುಗ್ಗಿದ. ಕಾಗದ ಕಿತ್ತುಕೊಂಡವನೇ ಅಮ್ಮನಿಗೆ ಕೊಟ್ಟ. ಹೊರಗೆ ತಣ್ಣಗೆ ಗಾಳಿ ಬೀಸುತ್ತಿತ್ತು. ಆಹ್ವಾದಕರ ಪರಿಸರ, ಕೊಂಚ ಆಡೋಣ ಎನ್ನಿಸಿತು. “ಅಮ್ಮ, ಇಲ್ಲೇ ಸ್ವಲ್ಪ ಹೊತ್ತು ಆಡಿ ಬರುತ್ತೇನೆ’ ಎಂದ. ಅಮ್ಮನೂ ಒಪ್ಪಿಗೆ ಕೊಟ್ಟಳು … ಓದನ್ನು ಮುಂದುವರೆಸಿ

ಕಥೆ / ಸುಲಲಿತ

ಬಾನ ಪ್ರೀತಿ

“ಅವಳು ನಿನಗೆ ಸರಿಯಾದ ಜೋಡಿ’ ಎಂದ ಇವನು. “ನನಗೂ ಹಾಗೆನಿಸುತ್ತಿದೆ’ ಎಂದ ಅವ.  “ಆದರೆ…’ ಮಾತು ಅರ್ಧಕ್ಕೆ ನಿಂತಿತು. “ಆದರೆ… ಯಾವುದರಲ್ಲಿ ಆಕೆ ನಿನಗಿಂತ ಕನಿಷ್ಠ’ ಎಂದು ಪ್ರಶ್ನೆ ಹಾಕಿದ ಇವನು. ಅದಕ್ಕೆ ಅವನಲ್ಲಿ ಉತ್ತರವಿರಲಿಲ್ಲ. ಮನಸ್ಸಿನಲ್ಲೇ ತನಗೂ, ಅವಳಿಗೂ ಇರುವ ಸಾಮ್ಯವನ್ನು ಲೆಕ್ಕ ಹಾಕುತ್ತಾ ಹೋದ. ಒಂದು ಹಂತದಲ್ಲಿ ಎಲ್ಲದರಲ್ಲೂ ಆಕೆ ತನ್ನನ್ನೇ ಮೀರುತ್ತಾಳೆ ಎನಿಸಿತು. ಒಳಗಿನ ಮನಸ್ಸು ಅದಕ್ಕೆ ಒಪ್ಪಲಿಲ್ಲ. “ಆದರೂ…’ ಮತ್ತೆ ರಾಗ ಎಳೆದ. ಇವನಿಗೆ ಅರ್ಥವಾಗಲಿಲ್ಲ. “ಏನು ಬಣ್ಣವೇ…?’ ಪ್ರಶ್ನೆ ಇಟ್ಟ. … ಓದನ್ನು ಮುಂದುವರೆಸಿ