ಮತ್ತೊಬ್ಬ ಪನ್ನೀರ್ ಸೆಲ್ವಂ ಹುಟ್ಟುವ ಹೊತ್ತು?
ಕಟ್ಟಾ-ಮೀಠಾ

ಮತ್ತೊಬ್ಬ ಪನ್ನೀರ್ ಸೆಲ್ವಂ ಹುಟ್ಟುವ ಹೊತ್ತು?

ಮತ್ತೊಬ್ಬ ಪನ್ನೀರ್ ಸೆಲ್ವಂ ಹುಟ್ಟುವ ಸಂದರ್ಭ ಎದುರಾಗಿದೆ. ಸುಮಾರು 120 ಕ್ಕೂ ಹೆಚ್ಚು ಶಾಸಕರ ಬಲವನ್ನು ಹೊಂದಿದ್ದು, ಇನ್ನೇನು ಮುಖ್ಯಮಂತ್ರಿ ಪಟ್ಟ ಏರಬೇಕೆಂದಿದ್ದ ಶಶಿಕಲಾ ನಟರಾಜನ್ ಗೆ ಸುಪ್ರೀಂಕೋರ್ಟ್ ತೀರ್ಪು ದೊಡ್ಡ ಆಘಾತವನ್ನು ನೀಡಿದೆ. ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೋರ್ಟ್ 4 ವರ್ಷಗಳ ಜೈಲುವಾಸವನ್ನು ವಿಧಿಸಿದೆ. ಇದರೊಂದಿಗೆ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲುವಂತೆಯೂ ಇಲ್ಲ. ಹಾಗಾಗಿ ಸದ್ಯಕ್ಕಂತೂ ಶಶಿಕಲಾಳ ರಾಜಕೀಯ ಜೀವನ ಮುಗಿದಂತೆಯೇ. ಪ್ರಕರಣ ಪಡೆದಿರುವ ಕುತೂಹಲ ಮತ್ತೊಂದು ಕಡೆ. ಯಾಕೆಂದರೆ, ಶಶಿಕಲಾರ … ಓದನ್ನು ಮುಂದುವರೆಸಿ

ಕಟ್ಟಾ-ಮೀಠಾ

ತಿರಸ್ಕರಿಸುವುದನ್ನು ಕಲಿಯೋಣ

ನಾವು ಸಂದೀಪನ ತಂದೆಗೆ ಭೇಷ್ ಹೇಳಬೇಕು ! ಹಾಗೆಯೇ ಹೇಮಂತ ಕರ್ಕರೆಯ ಕುಟುಂಬಕ್ಕೂ ಸಹ. ರಾಜಕಾರಣಿಗಳ ಭಿಕ್ಷೆ ನೀಡುವ ತಂತ್ರವನ್ನು ಅತ್ಯಂತ ದಾರ್ಷ್ಟ್ಯದಿಂದ ತಿರಸ್ಕರಿಸಿದ ವೀರರ ಕುಟುಂಬಕ್ಕೆ ನಾವೆಲ್ಲರೂ ವಂದಿಸಬೇಕು. ಕೇರಳದ ಮುಖ್ಯಮಂತ್ರಿ ಅಚ್ಯುತಾನಂದನ್, ಯಾರಿಗೋ ಉಪಕಾರಕ್ಕೆ ಎನ್ನುವಂತೆ ಸಂದೀಪನ ಮನೆಗೆ ಬಂದು ಸಾಂತ್ವನ ಹೇಳಲು ಬಂದಿದ್ದು ಮತ್ತೆ ರಾಜಕೀಯ ಉದ್ದೇಶಕ್ಕಾಗಿಯೇ ಹೊರತು ಮತ್ತೇನೂ ಅಲ್ಲ. ಅದಕ್ಕೆ ಸಂದೀಪನ ತಂದೆ “ನನ್ನ ಮಗ ಇಡೀ ದೇಶದವನು, ಒಂದು ರಾಜ್ಯದವನಲ್ಲ’ ಎಂದು ಹೇಳಿದ ಮಾತು ಕೇಳಿ ನನ್ನ ಹೃದಯ … ಓದನ್ನು ಮುಂದುವರೆಸಿ

ಕಟ್ಟಾ-ಮೀಠಾ

ಈ ಬುಧವಾರದ ಕ್ರೌರ್ಯ !

ನಿಜಕ್ಕೂ ಘೋರ. ಬುಧವಾರ ರಾತ್ರಿ ೧೧ ರಿಂದ ಕಣ್ಣು ಕೀಳದೇ ಸುಮಾರು ಬೆಳಗಿನ ಜಾವ ೩. ೩೦ ವರೆಗೂ ಟಿ. ವಿ. ಮುಂದೆ ಕುಳಿತಿದ್ದೆ. ಪ್ರತಿ ಕ್ಷಣದ ಆತಂಕ ನಮ್ಮ ವ್ಯವಸ್ಥೆಯ ಬಗ್ಗೆಯೇ ಅಸಹನೆ ಹುಟ್ಟಿಸಿತು. ರೋಸಿ ಹೋಗಿ ಮಲಗಿಕೊಂಡೆ. ಗುರುವಾರ ಬೆಳಗ್ಗೆ ಎಲ್ಲವೂ ಮುಗಿದು, ಸಾವಿನ ಸಂಖ್ಯೆಗೂ ವಿರಾಮ ಸಿಕ್ಕಿ, ಒಳಗಿದ್ದ ಉಗ್ರರೆಲ್ಲಾ ಸತ್ತು ಇಲ್ಲವೋ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುತ್ತಾರೆಂದು ಬೆಳಗ್ಗೆ ೯ ಕ್ಕೆ ಟಿ. ವಿ. ಹಾಕಿದರೆ ಮತ್ತಷ್ಟು ವಿಷಾದ ಆವರಿಸಿಕೊಂಡಿತು. ನಂತರ … ಓದನ್ನು ಮುಂದುವರೆಸಿ

ಕಟ್ಟಾ-ಮೀಠಾ

ಅವನು ಸಾಯಲೆಂದೇ ಬದುಕುತ್ತಿದ್ದಾನೆ…

ಸಾವಿಗೆ ಕಾಯವುದು ಎಂದರೆ …!? ಬಹಳ ಕಷ್ಟ. ಅದರಲ್ಲೂ ಬದುಕಬೇಕೆಂದು ಬಯಸಿದವ ಸಾವನ್ನು ನಿರೀಕ್ಷಿಸುತ್ತಾ ಕುಳಿತುಕೊಳ್ಳುವುದು ರಣಹಿಂಸೆ. ಈಗ ಆ ರಣಹಿಂಸೆಯನ್ನು ಅನುಭವಿಸಬೇಕಾದವ ಶ್ರದ್ಧಾನಂದ. ಇವನ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಆದರೂ ಕೊಂಚ ಮಾಹಿತಿ. ೧೯೯೧ ರ ಏಪ್ರಿಲ್ ೨೮ ರಂದು ತನ್ನ ಪತ್ನಿ ಬೇಗಂ ಶಕೀರಾ ನಮಾಜಿ ಅವರನ್ನು ಕೊಂದಿದ್ದ. ಇವನ ನಿಜವಾದ ಹೆಸರು ಮುರಳಿ ಮನೋಹರ್ ಮಿಶ್ರಾ. ಬೆಂಗಳೂರಿನ ರಿಚ್ಮಂಡ್ ರಸ್ತೆಯ ತನ್ನ ಬಂಗಲೆಯ ಕಾಂಪೌಂಡ್ ಮೂಲೆಯೊಂದರಲ್ಲಿ ಹೆಣವನ್ನು ಹೂತ. ಸರಿ, ಎಲ್ಲದರಂತೆ ಮುಚ್ಚಿ … ಓದನ್ನು ಮುಂದುವರೆಸಿ

ಕಟ್ಟಾ-ಮೀಠಾ

ಬ್ಲಾಗಿಗರ ಅಂಗಣದಿಂದ

ಬ್ಲಾಗ್ ಗಳಲ್ಲಿ ಏನು ಬರೆಯಬೇಕೆಂಬುದು ನನ್ನನ್ನು ಕಾಡುತ್ತಿದ್ದ ಸಂಗತಿ. ಅದರ ಬಗ್ಗೆ ಬರೆಯಬೇಕೆಂದನಿಸಿ ಏನನ್ನೋ ಬರೆದೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಚಕೋರರು (ಬ್ಲಾಗಿಗರ ಅಂಗಣದಿಂದ) ಪ್ರಬುದ್ಧವಾದ ಲೇಖನ ಬರೆದಿದ್ದಾರೆ. ಅದನ್ನೇ ನಮ್ಮೊಳಗೆ (ಬ್ಲಾಗಿಷ್ಟರೊಳಗೆ) ಸಕಾರಾತ್ಮಕವಾದ, ಒಳ್ಳೆಯ ಚರ್ಚೆಯಾಗಲಿ ಎಂಬ ಉದ್ದೇಶದಿಂದ ಚೇತನಾರೂ ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿದ್ದಾರೆ. ಒಳ್ಳೆಯ ಚರ್ಚೆಗೆ ವೇದಿಕೆಯಾದ ಇವರಿಬ್ಬರಿಗೂ ಧನ್ಯವಾದಗಳು. ನಾವಡ ಓದನ್ನು ಮುಂದುವರೆಸಿ

ಕಟ್ಟಾ-ಮೀಠಾ

ಬ್ಲಾಗೆಂಬ ಆಕಾಶ ಉಳಿಯಲಿ, ತಾರೆಗಳು ಹೊಳೆಯಲಿ !

ಇದು ಮಳೆ ನಿಂತ ಮೇಲಿನ ಹನಿ. ಕೆಲ ದಿನಗಳಿಂದ ಬ್ಲಾಗ್‌ಗಳಲ್ಲಿ ಒಂದೇ ಬಗೆಯ ಚರ್ಚೆ. ಬ್ಲಾಗ್‌ಗಳಲ್ಲಿ ಏನನ್ನು ಬರೆಯಬೇಕು ? ವಿಚಾರವೋ ? ಭಾವ ಲಹರಿಯೋ ? ಮಾಹಿತಿಯೋ ? ಹೊಸ ಬಗೆಯ “ವರದಿ’ಗಳೋ?- ಏನು ? ಯಾವುದು ಬ್ಲಾಗ್‌ಗಳಿಗೆ ಆಹಾರವಾಗಬೇಕು? ಬೆಂಗಳೂರಿನಲ್ಲಿ ಇತ್ತೀಚೆಗೆ ಮಹಾತ್ವಾಕಾಂಕ್ಷೆಯಿಂದ ಪ್ರಣತಿ ಆಯೋಜಿಸಿದ್ದ ಬ್ಲಾಗಿಗರ ಭೇಟಿಯಲ್ಲಿ ಎದುರಾದ ಪ್ರಶ್ನೆಗಳೂ ಇವೇ. ದಟ್ಸ್ ಕನ್ನಡದ ಎಸ್. ಕೆ. ಶಾಮಸುಂದರ್ “ಹಿರಿಯ ಪ್ರಜೆಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಎಲ್ಲೂ ಮಾಹಿತಿಯಿಲ್ಲ’ ಎಂದು ಹೇಳುವ … ಓದನ್ನು ಮುಂದುವರೆಸಿ