ಎವರೆಸ್ಟ್ ಅನುಭವ / ಚಿತ್ರಿಕೆ

ತ್ರಿವರ್ಣ ಧ್ವಜ ಹಾರಿಸುವಾಗ ನನ್ನನ್ನು ನಾನೇ ನಂಬಲಿಲ್ಲ

ಈ ಲೇಖನದೊಂದಿಗೆ ಎವರೆಸ್ಟ್ ಪ್ರವಾಸದ ಮಾಲಿಕೆ ಮುಗಿಯಿತು. ಎವರೆಸ್ಟ್ ಹತ್ತಿ ಕನ್ನಡದ ಬಾವುಟ ಹಾರಿಸಿದ ಪಿ.ಎನ್. ಗಣೇಶ್ ಈಗ ಮತ್ತೊಮ್ಮೆ ಏಕಬಾರಿಗೆ ಎರಡು ಪರ್ವತ ಹತ್ತುವ ಸಾಹಸಕ್ಕೆ ಇಳಿದಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಅಗತ್ಯವಿದೆ. ಈ ಸಂದರ್ಭದಲ್ಲೇ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತಲೇ ಈ ಮಾಲಿಕೆ ಮುಗಿಸುತ್ತಿದ್ದೇನೆ. ಪಿ.ಎನ್. ಗಣೇಶ್ ಅವರ ಮೊಬೈಲ್ ಸಂಖ್ಯೆ 98453 99705 ಮೇ 30 ರಂದು ಸಮಿಟ್‌ಗೆ ಪ್ರಯತ್ನಿಸುವುದಾಗಿ ಚೈತನ್ಯ ಹೇಳಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿದ್ದರು. ಮೇ 21,22 ರ … ಓದನ್ನು ಮುಂದುವರೆಸಿ

ಎವರೆಸ್ಟ್ ಅನುಭವ

ಗುರಿ ಮುಟ್ಟಲು ಎರಡು ದಿನ ಕಾಯಬೇಕು !

ಅಡ್ವಾನ್ಸಡ್ ಬೇಸ್ ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು. ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಷೇಶನ್) ಉಳಿದುಕೊಂಡೆ. ಒಮ್ಮೊಮ್ಮೆ … ಓದನ್ನು ಮುಂದುವರೆಸಿ

ಎವರೆಸ್ಟ್ ಅನುಭವ

ಹಿಮ ಪ್ರವಾಹದ ಎದುರು ಆತ್ಮವಿಶ್ವಾಸದ ಸವಾಲು

ಹಗ್ಗ ನಮ್ಮ ಹಿಡಿತಕ್ಕೆ. ಜತೆಗೆ ಹಿಮ ಪ್ರವಾಹ (ಅವಲಾಂಚ್)ದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವಂಥ ಸಾಧನ. ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು. ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ. ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮ ಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ … ಓದನ್ನು ಮುಂದುವರೆಸಿ

ಎವರೆಸ್ಟ್ ಅನುಭವ

ಅವರ ಹೆಸರು ಪುನರೂ…ಅಂಗ್ರಿತಾ

ಹಿಮ ಕುರುಡು (ಸ್ನೋ ಬರ್ನ್) ಎಲ್ಲರೂ ಬಳಲುವಂಥದ್ದು. ಪ್ರಖರವಾದ ಬಿಸಿಲು ಇರುವಾಗ ಸಂಭವಿಸುವ ದುರಂತ. ಮೇಲಕ್ಕೆ ದಿಟ್ಟಿಸುತ್ತಾ ಹತ್ತುವಾಗ ಪರ್ವತದ ಮೇಲೆ ಬಿದ್ದ ಸೂರ್ಯನ ಕಿರಣ ಕಣ್ಣನ್ನು ಕುಕ್ಕುತ್ತಿರುತ್ತದೆ. ಅದನ್ನು ನಾವು ಬರಿಗಣ್ಣಿಂದ ದಿಟ್ಟಿಸಿದರೆ ಕಣ್ಣೇ ಕಳೆದುಕೊಂಡ ಅನುಭವವಾಗುತ್ತದೆ. ಕೊರೆಯುವಿಕೆ ಎಂದರೆ ಗ್ಲೌಸ್ ಬಿಚ್ಚಿದರೆ ಆ ಕ್ಷಣದಲ್ಲೇ ನಮ್ಮ ರಕ್ತ ಹೆಪ್ಪುಗಟ್ಟಬಹುದು. ಕಾಲುಗಳೆಲ್ಲಾ ಮರಗಟ್ಟಿ ಹೋಗುತ್ತವೆ. ಮೂಗು, ಕೆನ್ನೆ ಎಲ್ಲವೂ ಸ್ಪರ್ಶ ಅನುಭವವನ್ನೇ ಕಳೆದುಕೊಳ್ಳುತ್ತವೆ. ಇದು ರೋಚಕವಲ್ಲವೇ ? ಹುಲಿ, ಸಿಂಹ, ಆನೆಗಳಿಂದ ತಪ್ಪಿಸಿಕೊಂಡರೆ ಮಾತ್ರ ರೋಚಕವೇ … ಓದನ್ನು ಮುಂದುವರೆಸಿ

ಎವರೆಸ್ಟ್ ಅನುಭವ

ಹಿಮಯಾತನೆ ಎಂಬ ಅನಿವಾರ್ಯ ಕಷ್ಟ

ಬೇಸ್‌ಕ್ಯಾಂಪ್‌ನಲ್ಲಿ ಲಯಾಸನ್ ಆಫೀಸರ್ (ಸಮನ್ವಯ ಅಧಿಕಾರಿ) ಇರುತ್ತಾರೆ. ಅವರಿಂದ ಮಾಹಿತಿ ಪಡೆದು ಸಿದ್ಧನಾಗತೊಡಗಿದೆ. ಮೊದಲು ಆ ವಾತಾವರಣ ಹೊಂದಿಕೊಳ್ಳಬೇಕಿತ್ತು. ಅಂದಾಜು -1 ಡಿಗ್ರಿ ಇರುವುದು ಇಲ್ಲಿ ಸಾಮಾನ್ಯ. ಅದಕ್ಕೆ ಮೊದಲು ಹೊಂದಿಕೊಳ್ಳಬೇಕು. ಆರಂಭದ ದಿನ ಸ್ವಲ್ಪ ಕಷ್ಟವಾಗುತ್ತದೆ. ಆದರೆ ಬಹಳ ತೊಂದರೆಯಾಗುವುದಿಲ್ಲ. ಹೈ ಆಟಿಟ್ಯೂಡ್‌ಗೆ ಹೋದಷ್ಟು ನಮಗೆ ಕಷ್ಟವಾಗುತ್ತಾ ಹೋಗುತ್ತದೆ. ಒಮ್ಮೊಮ್ಮೆ ಹವಾಮಾನದಲ್ಲಿ ಏರುಪೇರಾಗಿ – 20 ಡಿಗ್ರಿಗೆ ಇಳಿಯವುದೂ ಇದೆ. ಅಷ್ಟೇ ಅಲ್ಲ ಅದಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ. ಬಹಳ ಹಿಮ ಸುರಿಯುವಿಕೆ ಇದ್ದರೂ … ಓದನ್ನು ಮುಂದುವರೆಸಿ

ಎವರೆಸ್ಟ್ ಅನುಭವ

ಎವರೆಸ್ಟ್ ಏರಲು ಹದಿನೈದು ಮಾರ್ಗ ?

ಎವರೆಸ್ಟ್ ಏರಲು 15 ಮಾರ್ಗಗಳಿವೆ. ಆದರೆ ಜನಪ್ರಿಯವಾಗಿರುವುದು ಮುಖ್ಯವಾಗಿ ಎರಡು. ಒಂದು ಸುಲಭದಷ್ಟೇ ಅಲ್ಲ ; ದುಬಾರಿಯದ್ದು. ಮತ್ತೊಂದು ಅಗ್ಗದ್ದು ; ಕಷ್ಟದ್ದು. ಉಳಿದ ಮಾರ್ಗಗಳಲ್ಲಿ ಸಾಮಾನ್ಯವಾಗಿ ಹೋಗುವವರು ಕಡಿಮೆ. ಕೆಲವು ಘಟನೆಗಳಲ್ಲಿ ಹೊಸ ಮಾರ್ಗದಲ್ಲಿ ಹೋಗಲು ಹೋಗಿ ಕಣ್ಮರೆಯಾದ ಪ್ರಸಂಗಗಳೂ ಇವೆ. ನೇಪಾಳದ ದಾರಿ ಚೀನಾ, ಟಿಬೆಟ್ ದಾರಿಗಿಂತ ಸುಗಮ. ಕಾರಣವಿಷ್ಟೇ. ಈ ದಾರಿಯಲ್ಲಿ 12 ರಿಂದ 14 ಸಾವಿರ ಅಡಿವರೆಗೂ ಗಿಡಮರಗಳಿವೆ. ಹಸಿರಿರುವಲ್ಲಿ ಆಮ್ಲಜನಕದ ಸಮಸ್ಯೆ ಕಾಡುವುದಿಲ್ಲ. ಆದರೆ ನಾನು ಆರಿಸಿಕೊಂಡ ದಾರಿ ಕಷ್ಟದ್ದು. … ಓದನ್ನು ಮುಂದುವರೆಸಿ

ಎವರೆಸ್ಟ್ ಅನುಭವ

ನಾನು ಬೆಸೆಯಲು ಹೊರಟಿದ್ದು “ಸ್ನೇಹ ಸೇತುವೆ”

ದುಡ್ಡು ಹೊಂದಿಸುವುದು ಹೇಗೆ ? ನಾಲ್ಕೈದು ಗೆಳೆಯರಲ್ಲಿ ತೋಡಿಕೊಂಡೆ. ಅದಕ್ಕೆ ತಗಲುವ 16 ಲಕ್ಷ ರೂ. ಹೊಂದಿಸುವಾಗ ಪಿನಕಲ್ ಪ್ರತಿಷ್ಠಾನ ನೆರವು ನೀಡಿತು. ಲ್ಯಾಂಡ್‌ಮಾರ್ಕ್ ಎಜುಕೇಷನ್ ಮತ್ತಿತರ ಸಂಸ್ಥೆಗಳು ನೆರವು ನೀಡಿದವು. ನನ್ನ ಚಿಂತೆಯನ್ನು ದೂರ ಮಾಡುವ ಭರವಸೆ ನೀಡಿದ ಮೇಲೆ ಮಾರ್ಚ್ 27 ಕ್ಕೆ ಸಜ್ಜಾಗತೊಡಗಿದೆ. ಜನವರಿಯಲ್ಲಿ ಬಂದ ಆಯ್ಕೆ ಪತ್ರದಲ್ಲಿ ನನ್ನ ತಾಲೀಮಿಗೆ ಸೂಚನೆ ನೀಡಿದ್ದರು. ಅದರಂತೆ ತಯಾರಾಗತೊಡಗಿದೆ. ಪ್ರತಿ ದಿನ ಕನಿಷ್ಠ 6 ಕಿ. ಮೀ ಓಡಬೇಕು (ಜಾಗಿಂಗ್). ನಿತ್ಯ ಮೊಳಕೆ ಬರಿಸಿದ … ಓದನ್ನು ಮುಂದುವರೆಸಿ