ಅನಿಸಿದ್ದು

ಮತ್ತೆ ಬರೆಯಬೇಕೆನಿಸಿದೆ !

ಇಷ್ಟು ದಿನ ಅಕ್ಷರಶಃ ನನ್ನ ಬ್ಲಾಗ್ “ಐಸಿಯು” ನಲ್ಲೇ ಇತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಕಾರ್ಯ ಒತ್ತಡದ “ಕ್ಯಾನ್ಸರ್” ಆವರಿಸಿಕೊಂಡಿದ್ದು ನಿಜ. ಆಗಾಗ್ಗೆ ಇನ್ನೂ ಬ್ಲಾಗ್ ಬದುಕಿದೆ ಎನ್ನುವುದಕ್ಕೆ ಸಣ್ಣದೊಂದು ಲೇಖನವೋ, ಪದ್ಯವೋ ಹಾಕಿ ಮುಗಿಸುತ್ತಿದ್ದೆ. ಹಲವು ಕಾರ್ಯಗಳು ಒಮ್ಮೆಲೆ ನನ್ನೆದುರು ನಿಂತಿದ್ದರಿಂದ ಆ ಒತ್ತಡದಲ್ಲಿ ಮುಳುಗಿದ್ದೆ. ಹಾಗಾಗಿ ಬ್ಲಾಗ್ ನಲ್ಲಿ ಬರೆಯಲು ಅಷ್ಟೊಂದು ತಲೆ ಕೊಂಡಿರಲಿಲ್ಲ. ಈಗ ನಾನೇನೂ ಫುಲ್ ಫ್ರೀ ಆಗಿಲ್ಲ. ಪತ್ರಿಕೆಯಲ್ಲೂ ಬರೆಯುವುದನ್ನು ಕಡಿಮೆ ಮಾಡಿದ್ದೆ. ಒಂದಿಷ್ಟು ದಿನ ಸುಮ್ಮನಿರಬೇಕೆನಿಸಿತ್ತು. ಎಲ್ಲವನ್ನೂ ಬರೆದು … ಓದನ್ನು ಮುಂದುವರೆಸಿ

ಅನಿಸಿದ್ದು

ಬದುಕಲಿಕ್ಕೆ ಮತ್ತೊಂದು ವರ್ಷ ..!

೨೦೦೯…! ಬದುಕಲಿಕ್ಕೆ ಮತ್ತೊಂದು ವರ್ಷ. ಬದುಕಿನ ಹಾದಿ ದೊಡ್ಡದು ; ಅದರಲ್ಲಿ ನಡೆದು ಹೋಗುವ ನಾವೇ ಚಿಕ್ಕವರು. ಗಮ್ಯವನ್ನು ಹುಡುಕುತ್ತಲೇ ನಾವೆಲ್ಲೋ ಕಳೆದು ಹೋಗುತ್ತೇವೆ. ಸಾಗಿದ ದಿನಗಳನ್ನು ಲೆಕ್ಕ ಹಾಕುತ್ತಾ ಕುಳಿತಾಗ ದಿನಗಳಿರಲಿ ; ವರ್ಷಗಳೇ ಕಳೆದು ಹೋಗಿರುತ್ತವೆ. ಅವ್ಯಾವುದೂ ಲೆಕ್ಕಕ್ಕೆ ಉಳಿಯುವುದಿಲ್ಲ. ಇಟ್ಟ ಸಾವಿರಾರು ಹೆಜ್ಜೆಗಳಲ್ಲಿ ಎಲ್ಲೋ ಒಂದೆರಡು…ಇಲ್ಲದಿದ್ದರೆ ಮೂರೋ ನಾಲ್ಕು…ಮೈಲಿಗಲ್ಲುಗಳಾಗಿ ತೋರಬಹುದು. ಅದೇ ಹಾದಿಯಲ್ಲಿ ನಂತರ ಸಾಗಿ ಹೋಗುವವರಿಗೆ ಕೈ ಮರದಂತೆ ತೋರಬಹುದು. ಆದರೆ ಅಂತ ನಾಲ್ಕೈದು ಹೆಜ್ಜೆ ಮೂಡಿಸುವುದೂ ಸುಲಭದ ಮಾತಲ್ಲ. ಕಾರಣವಿಷ್ಟೇ, … ಓದನ್ನು ಮುಂದುವರೆಸಿ

ಅನಿಸಿದ್ದು / ಲಹರಿ

ಸಂಪಿಗೆ ಸಂಸಾರ

ಹೆಸರು ನಂಜಮ್ಮ. ಸುಮಾರು ಎಂಬತ್ತರ ಪ್ರಾಯ. ಸುಕ್ಕು ಗಟ್ಟಿದ ಮುಖ. ಒಳಗೆ ಹೆಪ್ಪುಗಟ್ಟಿದ ದುಃಖ. ಅದರ ಮಧ್ಯೆಯೂ ತೆಳ್ಳಗೆ ಬೆಳ್ಳಿಗೆರೆಯ ಹಾಗೆ ತೇಲಿ ಬರುವ ಪುಟ್ಟದೊಂದು ನಗೆ. ಅದು ಮುಖದ ಅಂದವನ್ನೇ ಬದಲಿಸುವಷ್ಟು ಸಾಮರ್ಥ್ಯವುಳ್ಳದ್ದು. ಕೆ.ಆರ್. ಮಾರುಕಟ್ಟೆಯ ಒಳಗೆ ಪ್ರವೇಶಿಸುವಾಗಲೇ ಅವಳು ಎಲ್ಲರನ್ನೂ ಎದುರುಗೊಳ್ಳುತ್ತಾಳೆ. ತನ್ನೆದುರಿಗಿದ್ದ ಸಂಪಿಗೆ ರಾಶಿಯನ್ನು ಕಾಣುತ್ತಲೇ ಜೀವನ ಸವೆಸುತ್ತಾಳೆ. ಕೆಂಡಸಂಪಿಗೆಯಂತೆ ಎದುರಿಗೆ ಬಂದ ಗಿರಾಕಿಯ ಕಂಡು ನಗುತ್ತಾಳೆ. ಐದು ರೂ. ಗೆ ಏಳರಿಂದ ಎಂಟು, ಹತ್ತು ರೂ. ಗೆ ಈ ಲೆಕ್ಕಕ್ಕಿಂತ ಇನ್ನೂ … ಓದನ್ನು ಮುಂದುವರೆಸಿ

ಅನಿಸಿದ್ದು

ಕನಸುಗಾರನ ಕೈ ಕುಲುಕಿದೆ !

ಅಂಥದೊಂದು ಪುಳಕ ಅನುಭವಿಸಲು ಆರು ವರ್ಷದಿಂದ ಕಾಯುತ್ತಿದ್ದೆ ! ಹಿರಿಯ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗುತ್ತಾರೆಂಬ ಸುದ್ದಿ ಹರಡಿದಾಗ ಆದ ಖುಷಿ ಅಷ್ಟಿಷ್ಟಲ್ಲ. ದೇವರಲ್ಲಿ ಬೇಡಿಕೊಂಡಿದ್ದೂ ಅದನ್ನೇ. ಕಾರಣವಿಷ್ಟೇ. ಇದುವರೆಗೆ ಬಹುಪಾಲು ವಯೋವೃದ್ಧ ರಾಜಕೀಯ ನಿರಾಶ್ರಿತರು ಈ ಪಟ್ಟ ಕಟ್ಟಿಕೊಂಡು ಮೆರೆದರೇನೋ ನಿಜ. ಆದರೆ  ರಾಷ್ಟ್ರಕ್ಕೆ ಆದ ಲಾಭ ಅಷ್ಟಕಷ್ಟೇ. ಒಂದು ಸಂದರ್ಭದಲ್ಲಂತೂ ರಾಷ್ಟ್ರಪತಿ ಹುದ್ದೆ ಎಂದರೆ “ರಬ್ಬರ್ ಸ್ಟ್ಯಾಂಪ್’ ಎನ್ನುವಂತಾಗಿತ್ತು. ಈ ಹುದ್ದೆಗೆ ಆಯ್ಕೆಯಾದವರು ಶೈಕ್ಷಣಿಕವಾಗಿ ಉತ್ತಮವಾಗಿರಬಹುದು. ಆದರೆ ಭಾರತದ ಬಗ್ಗೆ … ಓದನ್ನು ಮುಂದುವರೆಸಿ