ಬಿಕ್ಕಿದ ಸಾಲುಗಳು-ಹೊಸತು
ಬಿಕ್ಕಿದ ಸಾಲು

ಬಿಕ್ಕಿದ ಸಾಲುಗಳು-ಹೊಸತು

ಹೂವು ಅರಳುತ್ತಿರುವಾಗ ಬಣ್ಣ ಕುಣಿಯುತ್ತಿತ್ತು * ರಸ್ತೆ ಮಧ್ಯೆ ಅನಾಥವಾಗಿ ಬಿದ್ದಿದ್ದ ಒಂದೇ ಚಪ್ಪಲಿ ಮತ್ತೊಂದರ ಕುಶಲದ ಬಗ್ಗೆಯೇ ಯೋಚಿಸುತ್ತಿತ್ತು * ಅಂಗಡಿಯ ಎದುರು ನಿಂತ ಆ ಬಾಲಕ ಗೋಡೆಯ ಬಣ್ಣದ ಆಯಸ್ಸನ್ನು ಅಳೆಯುತ್ತಿದ್ದ ದೊಡ್ಡ ಕೆರೆಯಲ್ಲಿ ಅರಳಿ ನಿಂತಿದ್ದ ತಾವರೆಗೆ ಏಕತಾನತೆ ಸಾಕಾಗಿದೆಯಂತೆ * ಅವನ ಕತ್ತಿಗೆ ಸುತ್ತಿಕೊಂಡಿದ್ದ ಟೇಪಿಗೂ ವಯಸ್ಸಾಗಿದೆ * ಚೆಸ್‌ ಬೋರ್ಡ್ ನ ರಾಜನ ದರಬಾರು ಇನ್ನೂ ಮುಗಿದಿಲ್ಲ * ಗೊಂಬೆಯೊಂದು ಸೂತ್ರ ಹರಿದು ಕೆಳಗೆ ಬಿತ್ತು ಜೀವ ಹೋಗಲಿಲ್ಲ ! … ಓದನ್ನು ಮುಂದುವರೆಸಿ

ನಗರೀಕರಣವೆಂಬ ಡೆಡ್ಎಂಡ್ ಇಲ್ಲದ ರಸ್ತೆ
ನಗರಮುಖಿ

ನಗರೀಕರಣವೆಂಬ ಡೆಡ್ಎಂಡ್ ಇಲ್ಲದ ರಸ್ತೆ

ಒಂದು ಮಾಯೆ ನಮ್ಮನ್ನು ಆವರಿಸಿಕೊಂಡಾಗ ನಮ್ಮದು ಅನಿವಾರ್ಯ ಸ್ಥಿತಿ. ಯೋಚಿಸುವ ಕೆಲಸಕ್ಕೆವಿರಾಮ ಹೇಳಿರುತ್ತೇವೆ. ಅದು ಮಾಡಿಸುತ್ತಿರುತ್ತದೆ. ನಾವು ಮಾಡುತ್ತಿರುತ್ತೇವೆ. ಇಲ್ಲಿ ಮಾಯೆಯೆಂಬುದು ಸಂದರ್ಭವಷ್ಟೇ. ಅದು ನಿರ್ಗುಣಿ. ಗುಣಾವಗುಣ ಆರೋಪವಿದ್ದರೂ ಅದನ್ನು ಎದುರಿಸುವವನದ್ದು. ನಗರವೆಂಬುದೇ ಮಾಯೆ. ಅದರ ಒಳಗೂ-ಹೊರಗೂ ನಾವಿದ್ದೇವಷ್ಟೇ. ಒಂದು ಮಸಾಲೆ ದೋಸೆ ನಮ್ಮೊಳಗೆ ಹೇಗೆ ನಗರ ಸಂವೇದನೆಯ ಬೀಜವನ್ನು ಬಿತ್ತಿದೆ ಎಂದು ಊಹಿಸಿಕೊಂಡರೆ, ನಿಜದಿ ನಾವೇನಾಗಿ ಉಳಿದಿದ್ದೇವೆ ಎನ್ನುವುದೇ ಸೋಜಿಗ. ಇದೊಂದು ಮಾಯೆ ಎನಿಸುವುದಿಲ್ಲವೇ? ಯಾಕೆಂದರೆ, ಮುಂಬು ಮಳೆಗೆ ಮುಳುಗಿತ್ತು, ಚೆನ್ನೈಯೂ ಮುಳುಗಿತ್ತು. ಈಗ ದಿಲ್ಲಿಯೇ … ಓದನ್ನು ಮುಂದುವರೆಸಿ