ಬೊಗಸೆ ಹಿಡಿದು ನಿಂತಿದ್ದೆ. ಕೈ ತುಂಬಾ ಬೆಳಕನ್ನು ಸುರಿದುಬಿಟ್ಟ ಆತ. ಈಗ ಚೂರು ಕತ್ತಲೆಯನ್ನು ಹುಡುಕುತ್ತಿದ್ದೇನೆ..ಬೆಳಕಿಗೆ ದೃಷ್ಟಿ ಬೊಟ್ಟು ಇಡಬೇಕು.,,!

**

ಒಂದು ಪುಟ್ಟ ಕಥೆ. ಹೇಳುವುದರಲ್ಲೇ ಮುಗಿದು ಹೋಗಿಬಿಡುತ್ತೆ…ಮಗು ಪುಟ್ಟದು, ಓಡುತ್ತಿತ್ತು ಪುಟಪುಟನೆ…ಹೆಜ್ಜೆಯ ಶಬ್ದವೂ ಕೇಳುತ್ತಿರಲಿಲ್ಲ…ಓಡುವಾಗ ಚಪ್ಪಲಿಯನ್ನೂ ಹಾಕಿರಲಿಲ್ಲ. ಹಾಗಾಗಿ ಚಪ್ಪಲಿ ಪೀಪಿಯ ಶಬ್ದವೂ ಇಲ್ಲ..ನಾನೂ ಹಾಗೇ ಓಡತೊಡಗಿದೆ…ಮಗು ಹಿಂತಿರುಗಿ ನೋಡಿ ನಕ್ಕಿತು..ನಾನು ಗಲಿಬಿಲಿಗೊಂಡೆ..ಮಗು ಯಾಕೆ ನಗುತ್ತಿದೆ ಎಂದು. ಅದು ಇನ್ನಷ್ಟು ಪುಟ ಪುಟನೆ ನೆಗೆಯುವಂತೆ ಓಡತೊಡಗಿತು. ನಾನು ಹಿಡಿಯಲು ಹೋದವ ಬಿದ್ದುಬಿಟ್ಟೆ…ಈಗ ಮಗು ನಿಂತು ನಗುತ್ತಿದೆ.

**

ಜೋರಾದ ಮಳೆ ನಮ್ಮನ್ನೂ ನೆನೆಸಿಬಿಡುತ್ತದೆ, ನಮ್ಮೊಳಗಿನ ಬೆಂಕಿ ಬಿಸಿಯಾಗಿಸುತ್ತದೆ..ಬದುಕಿನಲ್ಲೂ ಅಷ್ಟೇ…ಅನುಭವ ನೆನೆಸಿಬಿಡುತ್ತದೆ, ಆತ್ಮವಿಶ್ವಾಸ ಮತ್ತೆ ಹುರಿಗೊಳಿಸುತ್ತದೆ..ಎಷ್ಟೊಂದು ವಿಚಿತ್ರ..

++

ಗಣಿತ ಬಾರದಿದ್ದರೂ ಪರವಾಗಿಲ್ಲ, ಬದುಕಿಗೆ ಲೆಕ್ಕಾಚಾರ ಗೊತ್ತಿರಬೇಕು…

++

ಎಲ್ಲ ಸಮಸ್ಯೆಗಳೂ ಶುರುವಾಗುವುದು ಸುಖದಲ್ಲೇ ಹೊರತು ದುಃಖದಲ್ಲಲ್ಲ…ನಮ್ಮ ಬಗೆಗಿನ ಅಹಂಕಾರ, ಅವಳ ಬಗೆಗೆ ಒಂದು ಸಣ್ಣ ಹೊಟ್ಟೆ ಕಿಚ್ಚು, ಗೆಳೆಯನ ಬಗ್ಗೆ ಕೊಂಚ ಅನುಮಾನ…ಹೀಗೇ ಎಲ್ಲವೂ…!

++

ಸೋಪಿನ ಗುಳ್ಳೆಯನ್ನು ಒಡೆಯಲು ಪ್ರಯತ್ನಿಸಿದ್ದೀರಾ…ಒಡೆದು ನೋಡಿ…ಒಳ್ಳೆ ಅನುಭವ….ಹಾಗೆಯೇ ಬದುಕೂ ಸಹ…

**

ಕುರುಡುಗಣ್ಣಿನ ಕಷ್ಟ ಏನೂ ಅಂತ ಹೇಳೋದು?

++

ಹರಡಿ ನಿಂತ ಆಕಾಶಕ್ಕೆ ಎಷ್ಟೊಂದು ಆಸೆ, ಭೂಮಿಯನ್ನು ಪ್ರೀತಿಸುವಷ್ಟು..

++

ಒಂದು ಸಂಜೆ, ಮೂರು ಆಕಾಶ, ನೂರು ಚಂದ್ರ, ನಕ್ಷತ್ರ ಇದ್ದದ್ದರ ಸಾವಿರದಷ್ಟು…ಎರಡೇ ಕಣ್ಣು…!

++

ದು:ಖ ಉಮ್ಮಳಿಸಿ ಬರುತ್ತಿದೆ
ಏನು ಮಾಡಲಿ
ಮನೆಯಲ್ಲಿ ನೀರಿದೆ !

++

ನಾವು ದಿನೇದಿನೆ ಸೋಲುತ್ತಲೇ ಇರುತ್ತೇವೆ ಹಲವು ಸಂಗತಿಗಳಿಗೆ, ಗೆಲ್ಲಬೇಕೆಂಬ ಹಂಬಲದಲ್ಲಿ ಮತ್ತು ಗೆದ್ದೇವೆಂಬ ನಂಬಿಕೆಯಲ್ಲಿ. ಗೆಲ್ಲಲೇಬೇಕೆಂಬ ಹಠವಿದ್ದಾಗ ಕಹಿ ಎನಿಸುವ ಇದೇ ಸೋಲು, ಹಂಬಲದ ಹಂತದಲ್ಲಿದ್ದಾಗ ಸವಿಯಾಗೇ ಇರುತ್ತದಲ್ಲ…ಎಷ್ಟೊಂದು ವಿಚಿತ್ರ!

++

ಸುರಂಗದೊಳಗೆ ಪ್ರಯಾಣ ಹೊರಟೆ, ಒಂದಿನಿತೂ ಬೆಳಕಿಲ್ಲ..ಕತ್ತಲೆಯಲ್ಲಿ ದಾರಿ ತಿಳಿಯುತ್ತಿಲ್ಲ…ಆದರೂ ಬೆಳಕಿನಲಿ ಕಳೆದುಹೋಗುವ ಭಯವಿಲ್ಲ…!

++

ಯಾಕೋ ಗೊತ್ತಿಲ್ಲ…ಅಮ್ಮ ನನಗೂ ಮೊದಲು ಬಾನಿನಲ್ಲಿ ಚಂದ್ರನನ್ನೇ ತೋರಿಸಿದಳು..ಸೂರ್ಯನನ್ನಲ್ಲ…ಈಗ ಕೆಲವರು ಹೇಳುತ್ತಾರೆ…ಚಂದ್ರ ಚಂಚಲನಂತೆ, ಸೂರ್ಯ ತೇಜಸ್ಸಂತೆ !

++

ಹೊಸ ಹೊಸ ಅನುಭವಗಳಿಗೆ ಧುಮುಕುವುದನ್ನು ನಾವು ಜಲಪಾ