ಹೀಗೆ ಕಂಸನಂತೆ ಕನಸುಗಳನ್ನು ಕೊಲ್ಲುತ್ತಲೇ ಇದ್ದ ಆತ…
ಅವನ ದೃಷ್ಟಿಯಲ್ಲಿ ಅದು ಸ್ವರಕ್ಷಣೆ
ಎಲ್ಲಿಯವರೆಗೆ ಕೊಲ್ಲುತ್ತಿದ್ದ ಕನಸಿನ ಟಿಸಿಲೊಡೆದು ಮತ್ತೊಂದು
ಕನಸು ಜಿಗಿದೇ ಬಿಟ್ಟಿತು…
ಅದು ಹಾರಿ ಹೋದದ್ದಷ್ಟೇ ಈತನಿಗೆ ಕಂಡಿದ್ದು
ಚಿಗಿತಿದ್ದೂ ಕಾಣಲಿಲ್ಲ, ಬೆಳೆದಿದ್ದೂ ಸಹ…
ಕಾಲ ಅದನ್ನು ಕಾಪಾಡುತ್ತಿದೆ…
ಕನಸಿನೊಳಗಣ ಕಣ್ಣು ಒಡೆದು
ಹೊರಗಿನದೆಲ್ಲಾ ಸಿರಿ-ಐಸಿರಿ….
***
ಕನಸಿಗೊಂದು
ಇಟ್ಟ ಹೆಸರು
ಮರೆತು ಹೋಗಿದೆ
ಅಯ್ಯೋ
ಕನಸೂ ಮಾಸಿ ಹೋಗಿದೆ
***
ಹೀಗೇ ಕಣ್ತೆರೆದು
ಕುಳಿತಿದ್ದೆ
ಕಣ್ಣು ತೆರೆದಂತೆಯೇ ಇತ್ತು
ಬೆಳಕೊಂದು ಒಳಗೆ
ಹೊತ್ತಿಕೊಂಡಂತೆ
ಅನಿಸಿತು
ಕಣ್ಮುಚ್ಚಿದೆ
ಒಳಗೇ ಒಂದು
ಬಗೆಯ ಅನಂದ
ನಾನೇ ಬೆಳಕಾಗುವಂತೆ
***
ಪ್ರೀತಿ
ತನ್ನ ಪ್ರಿಯಕರನನ್ನು
ಕಂಡು
ಕೇಳಿತು
“ನಿಜವಾಗಲೂ ಹೇಳು
ನೀನು ನನ್ನನ್ನು
ಪ್ರೀತಿಸುತ್ತೀಯಾ?”
ಅದಕ್ಕೆ
ಪ್ರಿಯಕರ ಹೇಳಿದ
“ನೀನೂ ನಿಜವಾಗಲೂ
ಹೇಳು !”