ತೇಲಿಬರುತ್ತಿದ್ದ
ಅಲೆಯೊಂದು
ನಿಲ್ಲಲು
ಯತ್ನಿಸಿತು
ಹಿಂದಿನವ
ಬಿಡಲೇ ಇಲ್ಲ
**
ಕೆಂಪುಲಾಬಿಗಿಂತ
ಆಚೀಚಿನ
ಎಳೆ ಅರೆ ಹಸಿರಿನ
ಎಲೆಗಳೇ
ಚೆಂದೆನಿಸುತ್ತಿವೆ
**
ಮೌನಕ್ಕೆ
ಹೆಸರಿಡಬೇಕಿಲ್ಲ
ಹೇಗಿದ್ರೂ
ಅದನ್ನು
ಕರೆಯುವುದೇ
ಇಲ್ಲವಲ್ಲ
**
ಮಾತನಾಡದಿದ್ದವರ
ಬಳಿ
ಮೌನದ
ಬಗ್ಗೆಯೂ
ಹೇಳಿದರೂ
ಸಿಟ್ಟು
**