ಸುದ್ದಿ ಮಾಧ್ಯಮಕ್ಕಿಂತ ಮೊದಲು ನಾವು ಎಚ್ಚೆತ್ತುಕೊಳ್ಳೋಣ ನಮ್ಮಲ್ಲಿ ಸಮೂಹ ಮಾಧ್ಯಮದ ಕಾಲವಿದು. ಹಲವು ತಲೆಮಾರುಗಳನ್ನು ತನ್ನ ದೃಶ್ಯಶಕ್ತಿಯಿಂದಲೇ ಮಣಿಸಲು ಹೊರಟಿರುವ ಸಂದರ್ಭ. ಕೆಲವೊಮ್ಮೆ ರೇಜಿಗೆ ಹುಟ್ಟಿಸುವಂತೆ ಕಂಡು ಬಂದರೂ, ಅಭಿವೃದ್ಧಿಯ ನೆಲೆಯಲ್ಲಿ ತನ್ನದೇ ಪಾತ್ರ ವಹಿಸುತ್ತಾ ಬಂದಿರುವುದನ್ನು ಎಲ್ಲರೂ ಗಮನಿಸಲೇಬೇಕಾದ ವಾಸ್ತವ.

ಇಂದು ಸಮೂಹ ಮಾಧ್ಯಮಗಳಿಂದ ಪ್ರಭಾವಿತಗೊಳ್ಳದ ವ್ಯಕ್ತಿಯೇ ಇಲ್ಲ. ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳನ್ನೂ ಇದು ಬಿಟ್ಟಿಲ್ಲ. ಒಂದಲ್ಲ ಒಂದು ವಿಧಾನದಿಂದ ಅಥವಾ ವಿಧದಿಂದ ಪ್ರತಿಯೊಬ್ಬರನ್ನೂ ತಲುಪತ್ತಲೇ ಇವೆ. 1960-70 ರ ದಶಕದಲ್ಲಿ ಭಾರತದಲ್ಲಿ ಸಮೂಹ ಮಾಧ್ಯಮವೆಂದರೆ ಪತ್ರಿಕೆ ಮತ್ತು ರೇಡಿಯೊ. ದೂರದರ್ಶನ ನಮಗಿನ್ನೂ ಅಷ್ಟೊಂದು ಪರಿಚಯವಾಗಿರಲಿಲ್ಲ. ಅದರಲ್ಲೂ ಪ್ರಾದೇಶಿಕ ನೆಲೆಯಲ್ಲಿ ವಿಸ್ತಾರಗೊಂಡಿರಲಿಲ್ಲ. ನಾಲ್ಕು ತಿಂಗಳಿಗೊಮ್ಮೆ ಸರತಿಯಂತೆ ಬರುವ ಕನ್ನಡ ಸಿನಿಮಾ ಬಿಟ್ಟರೆ ಬೇರೆ ಕನ್ನಡವಿರಲಿಲ್ಲ.

ಇನ್ನು, ಸಿನಿಮಾ ತನ್ನ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಅದು ಮನರಂಜನೆಯ ನೆಲೆಯಲ್ಲಷ್ಟೇ ಇತ್ತು. ಪತ್ರಿಕೆಯಲ್ಲಿ ಬರುವುದೆಂದರೆ ಸಾವಿರಾರು ಜನರನ್ನು ಏಕಕಾಲದಲ್ಲಿ ಮುಟ್ಟುವ ಪ್ರಯತ್ನವೆಂದೇ. ಸುದ್ದಿಗಷ್ಟೇ ಮುಖ್ಯವಾಗಿದ್ದ ಪತ್ರಿಕೆಗಳು ಎಂದಿನ ಸುದ್ದಿಯನ್ನು ಹಂಚುತ್ತಲೇ, ಗಾಢವಾಗಿ ಆವರಿಸಿಕೊಳ್ಳತೊಡಗಿದವು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಪತ್ರಿಕೆಗಳು ಸಾಮೂಹಿಕವಾಗಿ ಜನರ ಮೇಲೆ ಪ್ರಭಾವ ಬೀರಿರುವುದಲ್ಲದೇ, ಚಳವಳಿಗೆ ಶಕ್ತಿ ತುಂಬುವಲ್ಲಿ ಯಶಸ್ವಿಯಾಗಿದ್ದವು. ಕಲ್ಲಚ್ಚಿನಲ್ಲಿ ಸುದ್ದಿಯನ್ನು ಮುದ್ರಿಸಿ ಮಾರಾಟ ಮಾಡುತ್ತಿದ್ದ ದಿನವೂ ಇತ್ತು.

ಅವೆಲ್ಲವೂ ಈಗ ಇತಿಹಾಸ. ಅಚ್ಚರಿಯ ಸಂಗತಿಯೆಂದರೆ, ಅಂಥದೊಂದು ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ಇಂದಿನ ವರ್ತಮಾನವನ್ನು ನೋಡಿದರೆ ಅಬ್ಬಾ ಎನಿಸುತ್ತದೆ. ಪತ್ರಿಕೆಯಲ್ಲದೇ, ವಿವಿಧ ಸಮೂಹ ಮಾಧ್ಯಮಗಳು ಬೆಳೆದಿರುವ ಬಗೆ ಮತ್ತು ಜನರನ್ನು ಒಳಗೊಂಡಿರುವ ನೆಲೆ ಕಂಡರೆ ಆಶ್ಚರ್ಯ ಎನಿಸುವುದು ನಿಜ. ಆ ಒಳಗೊಳ್ಳುವ ಬಗೆ ಸಕಾರಾತ್ಮಕವಾಗಿಯೋ, ಋಣಾತ್ಮಕವಾಗಿಯೋ ಎಂಬುದನ್ನು ಬೇರೆಯಾಗಿಯೇ ಚರ್ಚಿಸೋಣ…ಮುಂದೆ ಓದಿ