ಗೆಳೆಯರೇ,

ನಾನು ಮೊದಲು ಚೆಂಡೆಮದ್ದಳೆ ಬ್ಲಾಗ್ ಆರಂಭಿಸಿದ್ದು ಬ್ಲಾಗ್ ಸ್ಪಾಟ್ ನಲ್ಲಿ. ಆದರೆ ಯಾಕೋ ಅದರ ನಿರ್ವಹಣೆ ಬಹಳ ಕಷ್ಟ ಎನಿಸಿತ್ತು. ಹಾಗಾಗಿ ಯಾಕೋ ಬೇಡ ಎನಿಸಿ ಹೀಗೇ ಸಿಕ್ಕಿದ ವರ್ಡ್ ಪ್ರೆಸ್ ಗೆ ಬಂದು ಬ್ಲಾಗ್ ಆರಂಭಿಸಿದೆ. ಈಗಾಗಲೇ ಒಂದು ವರ್ಷದಿಂದ ನಮ್ಮ ಬರಹ ಸಾಗಿದೆ.

ಇತ್ತೀಚೆಗೆ ಸುಧನ್ವಾ ಬದಲಿಸಿದ ಟೆಂಪ್ಲೇಟ್ ನೋಡಿ ನನಗೂ ಯಾಕೋ ಖುಷಿಯಾಯ್ತು. ಆ ದಾರಿ ಹುಡುಕಿಕೊಂಡು ಹೋದಾಗ ಹೊಸ ಟೆಂಪ್ಲೇಟ್ ಸಿಕ್ಕಿತು. ಮೊದಲು ಅಪ್ ಲೋಡ್ ಕಷ್ಟ ಎನಿಸಿತು. ಆದರೆ ನಾನಂದುಕೊಂಡದ್ದಕ್ಕಿಂತ ಸುಲಭವಾಗಿ ಟೆಂಪ್ಲೇಟ್ ಬದಲಾಯಿಸಿದೆ ನನ್ನ ಬ್ಲಾಗ್ ಸ್ಪಾಟ್ ನ ಚೆಂಡೆಮದ್ದಳೆಯಲ್ಲಿ. ಅದನ್ನು ಕಂಡ ಮೇಲೆ ಅಲ್ಲೂ ಬರೆಯಬೇಕೆನಿಸತೊಡಗಿದೆ. ಹಾಗಾಗಿ ಅಲ್ಲಿಯೂ ಬರವಣಿಗೆ ಮುಂದುವರಿಸಬೇಕೆಂದಿದ್ದೇನೆ.

ಸ್ವಲ್ಪ ಗದ್ಯವನ್ನು ಅಂದರೆ ವಿಚಾರಗಳನ್ನು ಹಂಚಿಕೊಳ್ಳಲು ಬ್ಲಾಗ್ ಸ್ಪಾಟ್ ನ ಬ್ಲಾಗ್ ನ್ನು ಬಳಸುತ್ತೇನೆ. ಇಲ್ಲಿ ಎಂದಿನಂತೆ ಒಂದಿಷ್ಟು ಲಹರಿ, ಚಿತ್ರಿಕೆ, ಬಿಕ್ಕಿದ ಸಾಲುಗಳನ್ನು ಬರೆಯುತ್ತೇನೆ. ಎರಡಕ್ಕೂ ಭೇಟಿ ನೀಡಿ ಪ್ರೋತ್ಸಾಹಿಸಿ. ಇದುವರೆಗೂ ಬೆನ್ನುತಟ್ಟಿದ್ದೀರಿ…ಮುಂದೆಯೂ ತಟ್ಟುತ್ತಿರಿ…! www.chendemaddale.blogspot.com