madhur-bhandarkarಹಲವು ಗೆಳೆಯರ ಸಿನಿಮಾ ಬ್ಲಾಗ್ “ಸಾಂಗತ್ಯ” ವಿಶಿಷ್ಟವಾಗಿಯೇ ಬೆಳೆಯುತ್ತಿದೆ. ಹಲವರ ಕನಸು ಬಣ್ಣ ಪಡೆದುಕೊಳ್ಳುತ್ತಿರುವುದ ಕಂಡರೆ ಖುಷಿಯಾಗುತ್ತದೆ. “ಗ್ರೂಪ್ ಬ್ಲಾಗಿಂಗ್” ಕನ್ನಡದಲ್ಲಿ ಅಷ್ಟೊಂದು ಇಲ್ಲ. ಬಹುತೇಕ ಬ್ಲಾಗ್ ಗಳು ವೈಯಕ್ತಿಕವಾದವು ಅಂದರೆ ಒಬ್ಬರಿಗೇ ಸಂಬಂಧಪಟ್ಟವು.

ಆದರೆ ಉಳಿದವರ ಬರಹಗಳಿಗೆ ವೇದಿಕೆಯಾಗುತ್ತಾ, ತಾನು ಕಂಡ ಒಳ್ಳೆಯದನ್ನು ಉಳಿದವರೂ ಕಾಣಲೆಂದು ಬಯಸುವುದು ಇಂಥ “ಗ್ರೂಪ್ ಬ್ಲಾಗಿಂಗ್” ನಿಂದ ಸಾಧ್ಯ. ಸಂಘಟಿತ ಪ್ರಯತ್ನದಿಂದ ಎಲ್ಲರೂ ಒಳ್ಳೆಯದನ್ನು ಕಾಣಬಹುದು, ಸವಿಯಬಹುದು ಎಂಬುದು ಇದರ ಉದ್ದೇಶ. “ಅವಧಿ” ಆ ಪ್ರಯತ್ನವನ್ನು ಮಾಡುತ್ತಿದೆ.

ಹೀಗೇ ಸುಮ್ಮನೆ ಸಿನಿಮಾ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ “ಸಾಂಗತ್ಯ” ಈಗ ಉತ್ಸವದತ್ತ ಮುಖ ಮಾಡಿದೆ. ಭಾರತದ ಹೆಮ್ಮೆಯ ಚಿತ್ರ ನಿರ್ದೇಶಕ ಮಧುರ್ ಭಂಡಾರ್ಕರ್ ಅವರ ಕುರಿತ ಉತ್ಸವಕ್ಕೆ ಸಜ್ಜಾಗಿದೆ. ಅವರ ಚಿತ್ರಗಳ ವಿಮರ್ಶೆ, ಅವರ ವಿಶಿಷ್ಟತೆ ಕುರಿತ ಬರಹ-ಹೀಗೆ ಒಟ್ಟೂ ಅವರ ಕುರಿತ ಚರ್ಚೆಗೆ ವೇದಿಕೆ. ನೀವೂ www.saangatya.wordpress.com ಗೆ ಭೇಟಿ ಕೊಡಿ.