ನಮ್ಮ ಚಿತ್ರೋತ್ಸವದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಎರಡು ದಿನಗಳೊಳಗೆ ನಿರ್ಧಾರವಾಗುತ್ತೆ. ತಕ್ಷಣವೇ ದಿನಾಂಕ ಪ್ರಕಟಿಸ್ತೇನೆ. ಆಸಕ್ತರು ಬರಬಹುದು. ಮಿಕ್ಕೆಲ್ಲಾ ವಿವರಗಳನ್ನೂ ತಿಳಿಸುತ್ತೇನೆ.
ಅಂದಹಾಗೆ, ನಾವು ಒಂದಿಷ್ಟು ಚಿತ್ರಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಕನ್ನಡ ಚಿತ್ರಗಳೂ ಇವೆ. ಆದರೆ ಬೇರೆ ಭಾಷೆ-ವಿದೇಶಿ ಭಾಷೆಗಳ ಚಿತ್ರಗಳನ್ನು ಆರಿಸುತ್ತಿದ್ದೇವೆ. ನೀವು ನೋಡಿದ ಒಳ್ಳೆಯ ಚಿತ್ರಗಳಿದ್ದರೆ ದಯವಿಟ್ಟು ತಿಳಿಸಿ. ನಾವೂ ನೋಡುತ್ತೇವೆ. ನೀವು ನೀಡಿದ ಪಟ್ಟಿಯಲ್ಲೂ ಒಂದಿಷ್ಟನ್ನು ಆರಿಸಿಕೊಂಡು ವೀಕ್ಷಿಸುತ್ತೇವೆ. ಫಿಲ್ಮ್ ಹೆಸರು ಹೇಳಿ ದಯವಿಟ್ಟು…