ಒಂದಿಷ್ಟು ಗೆಳೆಯರು ಸೇರಿ ಒಂದಷ್ಟು ಫಿಲ್ಮ್‌ಗಳನ್ನು ನೋಡಲು ನಿರ್ಧರಿಸಿದ್ದೇವೆ. ಒಂದೆಡೆ ಕುಳಿತು, ಚಿತ್ರ ನೋಡಿ ನಮಗನ್ನಿಸಿದ್ದನ್ನು ಅಂದುಕೊಳ್ಳುವುದು ಬಹಿರಂಗವಾಗಿ, ಅದೇ ಚರ್ಚೆಯಂತಿರಬಹುದು. ಆದರೆ ಎಲ್ಲವೂ ಅನೌಪಚಾರಿಕವಾಗಿ.
ನಮ್ಮ ಕನ್ನಡದ ಕೆಲ ನಿರ್ದೇಶಕರನ್ನೂ ನಮ್ಮೊಂದಿಗೆ ಸೇರಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದೇವೆ. ಇನ್ನೂ ದಿನಾಂಕ ನಿರ್ಧಾರವಾಗಬೇಕಿದೆ. ಬಹುಶಃ ಡಿಸೆಂಬರ್ ಮಧ್ಯಭಾಗ ಅಥವಾ ಜನವರಿ ಮೊದಲನೇ ವಾರದಲ್ಲಿ. ದಿನಾಂಕ ಯಾವುದೇ ಆದರೂ ವಾರ ಮಾತ್ರ ಶನಿವಾರ ಮತ್ತು ಭಾನುವಾರ.
ಒಂದೆರಡು ದಿನ ಯಾವುದೋ ಮೂಲೆಯಲ್ಲಿ ಕುಳಿತು ಒಂದಿಷ್ಟು ಮಂದಿ ಕುಳಿತು ಏಳೆಂಟು ಫಿಲ್ಮ್ ಗಳನ್ನು ನೋಡುವುದು ಯೋಜನೆ. ತೀರ್ಥಹಳ್ಳಿ ಅಥವಾ ಶೃಂಗೇರಿ ಕಡೆ ಹೋಗಬೇಕು ಅಂತಿದ್ದೇವೆ. ಒಂಥರಾ ಚಿತ್ರೋತ್ಸವ… ಫಿಲ್ಮ್ ಫೆಸ್ಟಿವಲ್ !
ಅದಕ್ಕಾಗಿ ಒಂದಿಷ್ಟು ಫಿಲ್ಮ್ ಗಳನ್ನು ಹೆಕ್ಕಿ ಇಡಲಾಗಿದೆ. ಅದಕ್ಕೆ ಸೂಕ್ತ ವ್ಯವಸ್ಥೆಯೂ ನಡೆಯುತ್ತಿದೆ. ಆಸಕ್ತರನ್ನು ನಮ್ಮ ಗುಂಪಿಗೆ ಸೇರಿಸಿಕೊಳ್ಳೋ ಆಲೋಚನೆಯೂ ಇದೆ. ಬಹಳ ಭಿನ್ನವಾದ ಫೆಸ್ಟಿವಲ್ ಮಾಡಬೇಕೂಂತ ನಮ್ಮ ಇರಾದೆ. ಏನಾಗುತ್ತೋ ನೋಡ್ಬೇಕು ? ಆಸಕ್ತಿಯಿದ್ದವರು ಭಾಗವಹಿಸಬಹುದು. ಸದ್ಯವೇ ದಿನಾಂಕ, ಸ್ಥಳದ ವಿವರ ಹಾಕ್ತೇನೆ.