ಪದ್ಯ

ಆಕೆ ಯಾರಿಗೆ ರೂಪಕ !

ಆಕೆ…ಆಕೆ
ಯಾರಿಗೆ ರೂಪಕ ?
ಅವನಿಗೋ ?
ಪ್ರೀತಿಗೋ?

ಅಂಗಳದಿ ಅರಳಿದ ಹೂವ
ಕಂಡು ಸೊಗಸ
ಕಣ್ಣ ತುಂಬಿಕೊಂಡಳಲ್ಲ,
ಬರಿದೇ ಇರಲಿಲ್ಲ
ಮನದೊಳಗೂ ತುಂಬಿಹೋದದ್ದು
ಅರಿವೇ ಬರಲಿಲ್ಲ

ಕಣಿವೇಲಿ ನಡೆಯುವಾಗ
ಆದ ಹೆಜ್ಜೆಯ ಸದ್ದ
ಆಲಿಸಿದ್ದಷ್ಟೇ,
ಕಣ್ಣನೆತ್ತಿಯೂ ನೋಡಲಿಲ್ಲ,
ಅದೆಂಥದೋ ಭಾವ
ಅವಳ ಬಿಡಲಿಲ್ಲ

ತಣ್ಣನೆ ಹರಿಯುವ ಝರಿ,
ಸುಮ್ಮನೆ ಬೀಸುವ ಗಾಳಿ,
ಮಧ್ಯೆ ತೇಲಿ ಬರುವ ಕೊಳಲ
ಉಸಿರಿನೋನ್ಮಾದ
ಮೋಹಗೊಳ್ಳಲಿಲ್ಲ ಆಕೆ,
ಕರಗಿ ಹೋದಳು

ಅವನ ಪಡೆಯಲಿಲ್ಲ ಆಕೆ,
ಅದನೂ ಬಯಸಿದವಳಲ್ಲ
ಹೂವ ಮುಡಿದು
ಚೆಲುವೆಯಾಗ ಮನಸು ಒಪ್ಪಲಿಲ್ಲ್ಲ

ಏಕೋ ಏನೋ ಆಕೆಗೂ
ತಿಳಿಯದು
ಹೂವ ಸೊಬಗ ಅಷ್ಟೇ ಸಾಕು,
ಅವನು ಸಿಕ್ಕಿದ ಹಾಗೆ

ಆಕೆ…ಆಕೆ..
ಯಾರಿಗೆ ರೂಪಕ ?
ಪ್ರೀತಿಗೋ? ಅವನಿಗೋ ? ( ಈ ಪದ್ಯ ನನಗೂ ತೃಪ್ತಿ ನೀಡಿಲ್ಲ. ಸುಮ್ಮನೆ ಸಾಲುಗಳು ಬಂದವು, ಜೋಡಿಸಿಟ್ಟಿದ್ದೇನೆ)

Advertisements

9 thoughts on “ಆಕೆ ಯಾರಿಗೆ ರೂಪಕ !

 1. ಆಕೆ ಪ್ರೀತಿಯ ದ್ಯೋತಕ.. ಆಕೆಯ ಹೆಸರೊಂದಿಗೆ ಆತನ ಹೆಸರು ಬೆಸೆದು ಆಗಿಹುದೊಂದು ಸಂಪೂರ್ಣ ಹೆಸರು. ಅದೇ “ರಾಧಾಕೃಷ್ಣ”! ಇಬ್ಬರೂ ಒಬ್ಬರೊನ್ನೊಬ್ಬರನ್ನು ಪಡೆಯದೇ ಸಂಪೂರ್ಣರು! ಕವನ ಇಷ್ಟವಾಯಿತು.

 2. ಅವನ ಪಡೆಯಲಿಲ್ಲ ಆಕೆ,
  ಅದನೂ ಬಯಸಿದವಳಲ್ಲ
  ಹೂವ ಮುಡಿದು
  ಚೆಲುವೆಯಾಗ ಮನಸು ಒಪ್ಪಲಿಲ್ಲ್ಲ… ಸುಂದರ ಸಾಲುಗಳು. ಅರ್ಥ ಕೂಡ.

  ರಾಧೆ ಪ್ರೀತಿ, ಕೃಷ್ಣ ಇಬ್ಬರಿಗೂ ದ್ಯೋತಕ…. ಹೇಗೆ ನೋಡಿದರೆ ಹಾಗೆ!
  ಚಂದದ ಕವಿತೆ. ಇಷ್ಟ ಆಯ್ತು.

 3. ತೇಜಸ್ವಿನಿಯವರೇ ಬಹಳ ದಿನಗಳ ಮೇಲೆ ಭೇಟಿ ಕೊಟ್ಟು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ.
  ವೈಶಾಲಿಯವರೇ, ನನಗೂ ಆ ಸಾಲುಗಳಲ್ಲೇ ಇಷ್ಟವಾದದ್ದು. ಅದರಲ್ಲೂ ಚೆಲುವಾಗ ಮನಸು ಒಪ್ಪಲಿಲ್ಲ ಬಹಳ ಖುಷಿ ನೀಡಿತು. ಅಭಿಪ್ರಾಯಿಸಿದ್ದಕ್ಕೆ ಧನ್ಯವಾದ.
  ಶ್ರೀದೇವಿ…ಹಾಗೇ ಕಣೇ ವಿಷ್ಯ.
  ಸುನಾಥರಿಗೆ ಥ್ಯಾಂಕ್ಸ್.
  ಜಿತೇಂದ್ರ…ಹೀಗೇ ಸುಮ್ಮನೆ ಬಂದಿದ್ದೋ ಮಾರಾಯ.
  ಚೇತನಾರಿಗೆ ನಮಸ್ಕಾರ. ಹೇಗಿದ್ದೀರಿ ? ಬಹಳ ದಿನಗಳಾಯಿತು. ನಿಮಗೆ ಇಷ್ಟವಾದ್ರೆ ಓಕೆ. ಧನ್ಯವಾದಗಳೊಂದಿಗೆ
  ನಾವಡ

 4. ಇದನ್ನ ’ಪದ್ಯ’ ಅಂತ ಯಾಕಂತೀರಿ? ಸುಮ್ಮನ ವಾಕ್ಯಗಳನ್ನ ಒಂದರಡಿ ಇನ್ನೊಂದ ಜೊಡಿಸಿದ್ರ ಪದ್ಯ ಆಗಿಹೋಗ್ತದೇನು?

  .. ಅಲ್ಲ, ಸುಮ್ಮನ ನಂಗ ಅನ್ನಿಸಿದ್ದನ್ನ ನಿಮ್ಮುಂದ ಇಟ್ಟೀನಿ ನೋಡ್ರಿ.. ತಪ್ಪು ತಿಳೀಬ್ಯಾಡ್ರಿ..

  –ಶ್ರೀ

 5. ಶ್ರೀ ಅವರೇ,
  ಹೌದೂರೀ, ನೀವು ಹೇಳ್ದಂಗೆಯೇ…ಸಾಲು ಸಾಲು ಜೋಡಿಸಿದ್ರೆ ಪದ್ಯ ಆಗಾಗಿಲ್ಲರೀ..ನನ್ನ ಜೋಡಿಸಿದ ಸಾಲುಗಳು ನಿಮಗೆ ಪದ್ಯ ಅನಿಸಿದೇ ಇದ್ರೆ ಸಾರೀರಿ….
  ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s