ಹಲವು

ಹೊಸ ಬ್ಲಾಗ್ “ಪಾಕ ಚಂದ್ರಿಕೆ’ !

ಏನೋ, ಸುಮ್ಮನೆ ಒಂದಿಷ್ಟು ಪಾಕ ಸಂಗತಿಗಳನ್ನು ಬರೆದೆ. ಒಳ್ಳೆಯ ಮಾತುಗಳನ್ನು ಆಡಿದರು. ನನಗೂ ಸ್ವಲ್ಪ ಅಡುಗೆ ಬಗ್ಗೆ ಕುತೂಹಲವಿದ್ದೇ ಇದೆ. ಅದು ಮುಂಚಿಂದಲೂ.
ಅದನ್ನೇ ಬ್ಲಾಗ್‌ನಲ್ಲಿ ಹಂಚಿಕೊಳ್ಳಬೇಕೆಂದೆನಿಸಿತ್ತು. ನನ್ನ ಚೆಂಡೆಮದ್ದಳೆಯಲ್ಲೇ ಕೆಲವು “ರೆಸಿಪಿ’ಗಳನ್ನು ಬರೆದೆ. ಆದರೆ ಪದ್ಯ, ಗದ್ಯ, ಬ್ರಹ್ಮಚಾರಿಗಳ ಪುಟ…ಇತ್ಯಾದಿಗಳ ಮಧ್ಯೆ ಯಾಕೋ ನನ್ನ ಪಾಕ ಸಂಗತಿ ರುಚಿಸುವುದಿಲ್ಲ ಎನಿಸತೊಡಗಿತು. ಹಾಗೆಂದು ಅದನ್ನು ಸಂಪೂರ್ಣ ಬಿಟ್ಟು ಬಿಡಲು ಮನಸ್ಸೂ ಇಲ್ಲ. ಅದಕ್ಕೇ ನನ್ನದೇ ಹೊಸದು “ಪಾಕ ಚಂದ್ರಿಕೆ’ ಎಂಬ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಅದರಲ್ಲೇನಿದ್ದರೂ ಪಾಕದ ಬಗ್ಗೆಯೇ ಮಾತು.
ಪಾಕ ಎಂಬುದು ಗೊತ್ತಿದ್ದೇ. ಚಂದ್ರಿಕೆ ಎಂದರೆ ರೇಷ್ಮೆ ಹುಳು ಹಾಕುವ ಬುಟ್ಟಿ ಎಂದಿದೆ. ಅಷ್ಟೇ ಅಲ್ಲ. ಅಡುಗೆ ಮನೆಯಲ್ಲಿ ಅನ್ನವನ್ನು ಬಸಿದು ಹಾಕುವುದು ಇಂಥದ್ದೇ ಬುಟ್ಟಿಯಲ್ಲಿ. ಜತೆಗೆ “ಚಂದ್ರಿಕೆ’ ಅದೇಕೋ ನನಗೆ ಅತ್ಯಂತ ಖುಷಿ ಕೊಡುವ ಪದ. ಆದ ಕಾರಣ ಅದೇ ಹೆಸರಿಟ್ಟೆ. ಸದಾ ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ನನ್ನ ಪಾಕಕ್ಕೆ ಚೂರು ಉಪ್ಪು-ಖಾರ ನೀವೂ ಬೆರೆಸಬಹುದು.

Advertisements

5 thoughts on “ಹೊಸ ಬ್ಲಾಗ್ “ಪಾಕ ಚಂದ್ರಿಕೆ’ !

 1. ನಾವಡರೇ…
  ‘ಚಂದ್ರಿಕೆ’ ಅಂದರೆ ಬೆಳದಿಂಗಳು ಅಂತಲೂ ಆಗುತ್ತದಲ್ಲವಾ? ನನ್ನಿಷ್ಟದ ಪದ.
  ‘ಪಾಕ ಚಂದ್ರಿಕೆ’ ಶೀರ್ಷಿಕೆಯೇ ತುಂಬ ಆಕರ್ಷಕವಾಗಿದೆ.
  ಪಾಕ ಚಂದ್ರಿಕೆ ಸುತ್ತೆಲ್ಲ ಹರಡಲಿ, ನಾವೂ ಒಂದಿಷ್ಟು ಮೊಗೆದಿಟ್ಟುಕೊಳ್ಳುತ್ತೇವೆ.
  ಸವಿಯುತ್ತೇವೆ.

 2. Great News!!
  ಸುಲಭ ಸುಲಭದ, ಬೇಗ ಬಾಗ ಆಗುವ ತಿಂಡಿ- ಅಡುಗೆಗಳನ್ನ ಹೇಳಿಕೊಡಿ ನಾವಡರೇ ಪ್ಲೀಸ್…
  ಈಗ ಅಮ್ಮನ್ನೋ, ಅತ್ತಿಗೆಯರನ್ನೋ ಕೇಳಲಿಕ್ಕೆ ನಾಚಿಕೆ 😦
  ಪುಸ್ತಕಗಳೂ work out ಆಗ್ತಿಲ್ಲ 😦

  – ಚೇತನಾ

 3. ಯಾಕೆ ಯಾರೂ ಕಾಣ್ತಿಲ್ಲ ಅಡುಗೆ ಮನೇಲಿ ತುಂಬಾ ದಿನ ಆಯ್ತು. ಸಾಮಾನುಗಳು ಕದಲೇ ಇಲ್ಲ. ಪದಾರ್ಥಗಳು ಇನ್ನೂ ತರಬೇಕು. ಹೀಗೆ ಮನೆಗೆ ಬಂದ ಅತಿಥಿಗಳನ್ನ ಹಾಗೇ ಕಳಿಸೋದು ಮಹಾಪರಾಧ. ಈ ಅಪರಾಧಕ್ಕೆ ನಿಮಗೆ ತಕ್ಕ ಶಿಕ್ಷೆಯಾಗಬೇಕು. ಯಾರಲ್ಲಿ? ಈ ಮನೆಯ ಒಡೆಯನಿಗೆ ಹೇಳು… ‘ಒಂದು ವಾರದಲ್ಲಿ ಏಳು ಬಗೆಯ ದೋಸೆ ತಯಾರಿಸುವುದನ್ನು ಬರೆದುಕೊಂಡು ಬರಬೇಕು, ಅಷ್ಟೇ ಅಲ್ಲ ಬಂಧು ಬಳಗದವರೆಲ್ಲರಿಗೂ ಹಂಚಬೇಕು ಎಂದ’

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s