ಹಲವು

ಮೆಂತ್ಯ ಹುಳಿ

ಬಹಳ ದಿನಗಳ ಮೇಲೆ ಮತ್ತೊಂದು “ರುಚಿ’ ಹೇಳುವ ಪ್ರಯತ್ನ. “ಗರಿಮುರಿ ಈರುಳ್ಳಿ ಪಕೋಡ’ ಚೆನ್ನಾಗಿದೆ ಎಂದು ಪ್ರೋತ್ಸಾಹಿಸಿದ್ದಕ್ಕೆ ಇದು. ಹೇಗಿದೆ ಎಂದು ದಯವಿಟ್ಟು ಹೇಳಿ.ಸಾಮಾನ್ಯವಾಗಿ ಮೆಂತ್ಯ ಹುಳಿ (ಸಾಂಬಾರ್) ಎಂದರೆ ಮೆಂತ್ಯೆ ಸೊಪ್ಪಿನದು. ಆದರೆ ನಾನು ಹೇಳುತ್ತಿರುವುದು ಮೆಂತ್ಯ ಕಾಳಿನದು. ಬಹಳ ವಿಶಿಷ್ಟ. ಆದರೆ ಕಷ್ಟವೇನೂ ಇಲ್ಲ. ಕಹಿ ಎಂದು ಭಯ ಪಡಬೇಕಿಲ್ಲ.

ನಾಲ್ಕಕ್ಕೆ ಒಂದರಷ್ಟು ಮೆಂತ್ಯೆ ಬೇಕು. ಅಂದರೆ ನಾಲ್ಕು ಮುಷ್ಠಿ ತೊಗರಿ ಬೇಳೆಗೆ ಒಂದು ಮುಷ್ಠಿ (ಸ್ವಲ್ಪ ಅದಕ್ಕಿಂತ ಕಡಿಮೆಯಾದರೂ ಪರವಾಗಿಲ್ಲ) ಮೆಂತ್ಯೆ ಹಾಕಬೇಕು. ಟೊಮೇಟೊವನ್ನು ಸ್ವಲ್ಪ ದೊಡ್ಡದಾಗಿ ಹೆಚ್ಚಿ ಹಾಕಿ ಕುಕ್ಕರ್‌ನಲ್ಲಿ ಬೇಯಲು ಇಡಬೇಕು. ಆರರಿಂದ ಏಳು ವಿಶಲ್ ಕೂಗಿಸಿ. ಬೇಳೆ ಶೇ. ೭೦ ರಷ್ಟು ಕರಗುವ ಸ್ಥಿತಿಗೆ ಬಂದಿರುತ್ತದೆ. ಆದರೆ ಮೆಂತ್ಯೆ ಕರಗಿರುವುದಿಲ್ಲ. ಮೆಂತ್ಯೆ ಹಾಗೆ ಕರಗುವುದೂ ಇಲ್ಲ.

ಕುಕ್ಕರ್ ತಣ್ಣಗಾಗುವುದರೊಳಗೆ ಚಿಕ್ಕದೊಂದು ಬಾಣಲಿ ಇಟ್ಟು ಸ್ವಲ್ಪ ಎಣ್ಣೆ ಹಾಕಿ, ಇಪ್ಪತೈದು ಕಾಳು (ಸುಮಾರು ಸಣ್ಣ ಚಟಾಕು) ಉದ್ದಿನಬೇಳೆ ಹಾಕಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹತ್ತು ಕಾಳು ಜೀರಿಗೆ, ಹದಿನೈದು ಕಾಳು ಕೊತ್ತಂಬರಿ (ಸ್ವಲ್ಪ ಸ್ವಲ್ಪ ಎನ್ನುವುದಕ್ಕೆ ಈ ಲೆಕ್ಕ) ಹಾಗೂ ಐದು ಒಣಮೆಣಸು ಹಾಕಿ ಹುರಿಯಿರಿ. ಕರಿಬೇವಿನಸೊಪ್ಪೂ ಹಾಕಿರಿ. ಪರಿಮಳ ಬಂದ ಮೇಲೆ ಅದಕ್ಕೆ ಕಾಯಿ ಹಾಕಿ ರುಬ್ಬಿರಿ.

ಕುಕ್ಕರ್ ನಿಂದ ತೆಗೆದ ಬೇಳೆ ಮತ್ತು ಮೆಂತ್ಯಯನ್ನು ಪಾತ್ರೆಯಲ್ಲಿ ಒಲೆಯ ಮೇಲಿಟ್ಟು  ( ಹೇಗಿದ್ದರೂ ಒಲೆ ಹಚ್ಚಿರುತ್ತೀರಿ. ಅದಕ್ಕೇ ಉಲ್ಲೇಖಿಸಿಲ್ಲ) ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಕುದಿಯಲಿ. ರುಚಿಗೆ ಉಪ್ಪು ಹಾಕುವುದಲ್ಲದೇ, ಅದಕ್ಕೆ ಎರಡು ಉಂಡೆ ಬೆಲ್ಲ ಹಾಕಬೇಕು. ಸಿಹಿ ಇಷ್ಟಪಡುವವರು ಮತ್ತೊಂದು ಉಂಡೆ ಬೆಲ್ಲ ಜಾಸ್ತಿ ಹಾಕಬಹುದು. ಕುದಿಯುವಾಗ ಕೊತ್ತಂಬರಿ ಸೊಪ್ಪು ಹಾಕಿ. ಇಳಿಸುವ ಮುನ್ನ ಒಂದೆರಡು ಹನಿ ಕೊಬ್ಬರಿ ಎಣ್ಣೆ ಹಾಕಿದರೆ ರುಚಿ ಹೆಚ್ಚು. ಕೊಬ್ಬರಿ ಎಣ್ಣೆ ಬಳಸದಿರುವವರು ತುಪ್ಪ ಹಾಕಬಹುದು. ಜಾಸ್ತಿ ಹಾಕಿದರೆ ಕಾರ ಕಡಿಮೆಯಾಗಿ ಸಪ್ಪೆ ಎನಿಸಬಹುದು.

ಇದು ಬಹಳ ನೀರಾಗಿ ಮಾಡಬೇಡಿ. ಸ್ವಲ್ಪ ದಪ್ಪಗಿದ್ದರೆ ಚಪಾತಿಗೆ ಚೆನ್ನ : ಊಟಕ್ಕೂ ಸೊಗಸು. ಅಂದ ಹಾಗೆ ಮೆಂತ್ಯೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಜತೆಗೆ ಮನೆಯಲ್ಲಿ ತರಕಾರಿಯೇ ಇಲ್ಲವೆಂದಾಗ ಇದನ್ನು ಪ್ರಯತ್ನಿಸಿ ಕೈ ತೊಳೆದುಕೊಳ್ಳಬಹುದು.
ನಮಸ್ಕಾರ.

Advertisements

8 thoughts on “ಮೆಂತ್ಯ ಹುಳಿ

 1. ನಾವಡರೆ,
  ನಾನು ಮೈಸೂರಿಗೆ ಬರುವ ಮೊದಲೆ ಹೇಳಿಬಿಡುತ್ತೇನೆ, ನನಗೆ ಇದೇ ಸಾರು ಬಡಿಸಿಬಿಡಿ!!!ಪಾಕವಿಧಾನವನ್ನ ಇಷ್ಟು ಚೆಂದವಾಗಿ ಎಲ್ಲರಿಗೂ ಮನದಟ್ಟು ಆಗುವಹಾಗೆ ಬರೆಯೋದು ಎಲ್ಲರಿಗೂ ಬರೊಲ್ಲ ಕಣ್ರಿ. ತ್ಯಾಂಕುಉಉಉ!!

 2. ಮತ್ತೆ ಇನ್ನೊಂದು ಕಂಪ್ಲೇಂಟು. ಈ ಟೆಂಪ್ಲೇಟೇನೊ ಚೆನ್ನಾಗಿದೆ, ಆದರೆ ನಿಮ್ಮ ಹಳೆಯ ಬರಹಗಳಿಗೆ ಇಲ್ಲಿ ಆಕ್ಸೆಸೇ ಇಲ್ಲ. ಸೊಲ್ಪ ಹಿಂಸೆ ಅನಿಸುತ್ತೆ. ಆಮೇಲೆ ಹೊಸ ಬ್ಲಾಗರುಗಳು, ಭೇಟಿ ಕೊಡುವವರಿಗೂ ತೊಂದರೆ. ಯಾವುದಾದರೂ ಇಷ್ಟೇ ಚೆಂದದ ಆದರೆ ಕಾಲಮ್ಸ್ ಇರುವ ಟೆಂಪ್ಲೇಟಿಗೆ ಬದಲಾಯಿಸಿ, ಪ್ಲೀಸ್!!

 3. ಚೇತನಾರೇ,
  ಟ್ರೈ ಮಾಡಿದ್ಮೇಲೆ ರುಚಿ ಹೇಳಿ. ಮರಿಬೇಡಿ.
  ಟೀನಾರೇ,
  ನೀವು ಹೇಳದೇ ಬರಬೇಡಿ. ಸಡನ್ನಾಗಿ ಅದನ್ನು ಮಾಡೋದು ಕಷ್ಟ. ಮುಂದಿನ ಸಾರಿ ಹೇಳಿ ಬನ್ನಿ. ಗ್ಯಾರಂಟಿ ಅದೇ ಹುಳಿಯನ್ನು ಮಾಡಿ ಬಡಿಸ್ತೀನಿ. ನಿಮ್ಮ ಮೆಚ್ಚುಗೆಗೆ (ಕಾಲು ಎಳೆದಿದ್ದು ಅಲ್ಲ ಅಂದ್ಕೊಂಡು …ಹ್ಲ..ಹ್ಲ) ಧನ್ಯವಾದ. ಜತೆಗೆ ನೀವು ಹೇಳಿದ್ದನ್ನು ಮಾಡಿದ್ದೇನೆ. ಟೆಂಪ್ಲೇಟ್ ಬದಲಾಯಿಸಿದ್ದೇನೆ. ತಿಳಿ ಬಾದಾಮಿ ಕಲರ್ !
  ಧನ್ಯವಾದಗಳೊಂದಿಗೆ
  ನಾವಡ

 4. ನಾವಡರೇ,
  ಆಮೇಲೆ ಬೇಜಾರಾಯ್ತು.
  ನನ್ನ ತಮ್ಮನ ಹೆಂಡ್ತಿ ಭಾನುವಾರ ಬರ್ತಾಳಂತೆ. ಐಟಮ್ ಎಲ್ಲ ತಂದಿಟ್ಟಿದೇನೆ. ನಾಳೆ ಪಾಪ ಅವಳಿಗೆ ಅದೇ ಕೆಲ್ಸ. ಹೇಗಿದ್ರೂ ಪ್ರಿಂಟ್ ಔಟ್ ತೆಗೆದ್ಕೊಂಡು ಹೋಗಿದೇನಲ್ಲ, ಮಾಡಿ ಕೊಡ್ತಾಳೆ…
  ಅವ್ಳಿಗೆ ಹೀಗೆಲ್ಲ ಹೊಸತಾಗಿ ಅಡುಗೆ ಮಾಡೋಕೆ- ಕಲಿಯೋಕೆ ಇಷ್ಟ… ಅದ್ಕೆ, ಸುಮ್ನೆ ನಾನ್ಯಾಕೆ ಅವ್ಳಿಗ್ ಬೇಜಾರ್ ಮಾಡ್ಲೀ ಅಂತ 😉

  “ತಿಳಿ ಬಾದಾಮಿ ಕಲರ್ರಾ!?” ಎಲ್ಲಿದೆ!!?

  – ಚೇತನಾ

 5. ಚೇತನಾರೇ,
  ಒಟ್ಟು ಚೆನ್ನಾಗಿ ಹೊಣೆಯನ್ನ ವರ್ಗಾಯಿಸ್ತೀರಿ..ಹ್ಲ..ಹ್ಲ. ಹೋಗ್ಲಿ, ಅವ್ರು ಮಾಡಿ ಕೊಟ್ಟಿದ್ದನ್ನು ಊಟ ಮಾಡಿಯಾದರೂ ರುಚಿ ಹೇಳಿ. ಅಂದ ಹಾಗೆ ತಿಳಿ ಬಾದಾಮಿ ಕಲರ್ ಅಲ್ಲ, ತಿಳಿ ಪಿಸ್ತ ಕಲರ್ !
  ನಾವಡ

 6. ನಾವಡರೇ,

  ಎಕ್ಸಲೆಂಟ್ ರೆಸಿಪೀ…. ಮಾಡಿ ನೋಡಿದೆ. ತುಂಬ ರುಚಿಯಾಗಿದೆ. ನಾವು ಇರೋದೇ ಇಬ್ಬರು. ಎಷ್ಟು ಕಡಿಮೆ ಮಾಡೋಣ ಅಂತ ಮಾಡಿದ್ರೂ ಎರಡು ದಿನಕ್ಕೆ ಸಾಕಾಗುವಷ್ಟು ಆಯ್ತು. ಅಲ್ಲದೇ ಪ್ರಮಾಣ ಕಡಿಮೆ ಮಾಡಿಕೊಂಡಿದ್ದರಿಂದ ನೀವು ಹೇಳಿದಂತೆ ಬರುತ್ತೋ ಇಲ್ಲವೋ ಸರಿಯಾಗಿದ್ಯೋ ಹ್ಯಾಗೋ ಅಂತ ಅಳುಕಿತ್ತು.. ಆದರೆ ತುಂಬ ರುಚಿಯಾಗಿ ಮತ್ತೆ ಮತ್ತೆ ತಿನ್ನುವ ಹಾಗಿತ್ತು. ಸಿಕ್ಕಾಪಟ್ಟೆ ಥ್ಯಾಂಕ್ಸ್.

  ನೀವು ಬರೆಯುವ ರೀತಿ ಬೇರೆ, ಇದನ್ನು ಮಾಡಿ ನೋಡದೇ ಇದ್ರೆ ಲೈಫೇ ವೇಸ್ಟು ಅನ್ನೋ ಹಾಗಿರುತ್ತೆ. ಮಾಡಿದ್ ಮೇಲೆ ಮಾಡದೆ ಇದ್ರೆ ಎಂಥಾ ರುಚಿ ಕಳ್ ಕೊಳ್ತಾ ಇದ್ನಲ್ಲಾ ಅನ್ನಿಸ್ತು.

  ಪ್ರೀತಿಯಿಂದ
  ಸಿಂಧು

 7. sir, nanu mente huli bagegina baraha ododkinta munchene nim kyle adna madskondu tindaytu….. eega adra taste hegirutte anta barile beku…… ulidavra anukoolakkadru………
  bahushaha nan nodida… allalla tinda ella huligaliginta bhinna matte hale huligalannella mareso ashtu ruchi
  …………. sakalla ishtu…..?
  -praveen

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s