ಹಲವು

ಕೇದಗೆಬನವೆಂಬ ಹೊಸ ಬ್ಲಾಗ್

ಕನ್ನಡದಲ್ಲಿ  ಬ್ಲಾಗ್‌ಗಳೆಂಬ ಸುಮಗಳು ಅರಳಿ ಪರಿಮಳ ಸೂಸುತ್ತಿರುವ ಸಂದರ್ಭದಲ್ಲೇ ಹೊಸದೊಂದು ಅಂಗಳದಲ್ಲಿ ಹೊಸ ಸುಮ ಅರಳಿದೆ. ಹೆಸರು ಕೇದಗೆಬನ. ಬ್ಲಾಗಿಗರ ಬಗ್ಗೆ ಮಗುಮ್ಮಾಗಿ ‘ಗಂಧಸುಗಂಧ’ರೆಂದು ಹೇಳಿಕೊಂಡಿದ್ದಾರೆ. ಚೆಂದವಾಗಿದೆ.
ಅದರಲ್ಲಿ ಸಾಹಿತ್ಯದ ಬಗ್ಗೆ ಏನೂ ಇರುವುದಿಲ್ಲ ಎಂದು ತೋರುತ್ತದೆ. ತಮ್ಮ ಬಗ್ಗೆ ಬರೆಯುತ್ತಿರುವಾಗ ಸಂಗೀತ, ಕಲೆ, ಫಿಲ್ಮ್ ಹೀಗೆ ಸಾಹಿತ್ಯ ಹೊರತಾದ ಆಸಕ್ತಿ ಕ್ಷೇತ್ರಗಳ ಬಗ್ಗೆ ಗಂಭೀರವಾದ ಬರಹಗಳನ್ನು ಬರೆಯಬೇಕೆಂದು ಹೇಳಿಕೊಂಡಿದ್ದಾರೆ.
ಮೊದಲ ಪೋಸ್ಟ್ ಆಗಿ ‘ವಿಂಗ್ಡ್ ಮೈಗ್ರೇಷನ್’ ಪಕ್ಷಿಗಳ ಕುರಿತಾದ ಫಿಲ್ಮ್ ಬಗ್ಗೆ ಬರೆದಿದ್ದಾರೆ. ಎರಡನೇ ಪೋಸ್ಟ್ ಆಗಿ ‘ಲಲಿತಕಲೆಗಳಿಗೆ ವಿಮರ್ಶೆ ಬೇಕೇ?’ ಎಂಬ ಲೇಖನವಿದೆ.
‘ಜುಗಲ್‌ಬಂದಿ’ ಯಡಿ ಪೋಸ್ಟ್ ಮಾಡಿರುವ ಆ ಲೇಖನದ ಚರ್ಚೆಗೆ ಆಗು ಮಾಡಿದ್ದಾರೆ. ಚರ್ಚೆಗೆಂದೇ ಅಂಕಣ ಆರಂಭಿಸಿರುವುದು ಆಸಕ್ತಿದಾಯಕ. ಅನುಭವದ ನೆಲೆಯಲ್ಲಿ ದಕ್ಕಿಸಿಕೊಳ್ಳಬೇಕಾದ ಲಲಿತಕಲೆಗಳಿಗೆ ವಿಮರ್ಶೆಯ ಹಂಗು ಏಕೆ ಎಂಬುದು ಲೇಖಕರ ನಿಲುವು. ಕುತೂಹಲದಾಯಕವಾಗಿದೆ. ಚರ್ಚಿಸುವ ಆಸಕ್ತರು, ಈ ಕ್ಷೇತ್ರಗಳ ಆಸಕ್ತರೂ ಕೇದಗೆಬನಕ್ಕೆ ಭೇಟಿ ನೀಡಿ ಚರ್ಚೆ ಬೆಳೆಸಬಹುದು. ಹೊಸ ಬ್ಲಾಗ್‌ಗೆ ಶುಭವಾಗಲಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s