ಕಡಲ ಪ್ರೀತಿಸಿದವಳ
ಕಣ್ಣಹನಿಗೆ
ಬೆಲೆಯೇ ಇಲ್ಲ !
***
ಅವಳು
ಮುತ್ತಾಗಬೇಕಾದವಳು
ಕಡಲಿನ ಚಿಪ್ಪಿನೊಳಗೆ
ಸಿಕ್ಕು
ಮೌನವಾಗಿದ್ದಾಳೆ !
***
ಬಾಳ ಮೆರವಣಿಗೆಯಲ್ಲಿ
ಸೇರಿಕೊಂಡವರೆಷ್ಟು ಮಂದಿ
ಸೊಗಸು-ಸಂಭ್ರಮ ತುಂಬಿದವರೆಷ್ಟು ಜನ
ಲೆಕ್ಕಕ್ಕಿಲ್ಲ
ಎಣಿಸಲು ಹೋದಾಗಲೆಲ್ಲಾ
ಲೆಕ್ಕ ತಪ್ಪುತ್ತೇನೆ
***
ಬದುಕಿನ ಅಂಬರದಲ್ಲಿ
ಹಾರುತ್ತಿರುವ ಗಾಳಿಪಟಕ್ಕೆ
ಸಂಬಂಧದ ದಾರ ಅದೆಷ್ಟು ಉದ್ದ
***
ಮೌನಿ
ಆಕೆ
ಕಡ ತಂದ
ಮಾತುಗಳನ್ನಾಡದೇ
ಕುಸಿದು ಬಿದ್ದಳು
ಈಗ ಅವಳ
ಬಗ್ಗೆಯೇ
ಉಳಿದವರೆಲ್ಲಾ
ಮಾತನಾಡುತ್ತಾರೆ !

( ಇವೆಲ್ಲವೂ ಪ್ರತ್ಯೇಕ ಪದ್ಯವಾಗಲು ಹುಟ್ಟಿಕೊಂಡವು. ಆದರೆ ಮಧ್ಯೆಯೇ ಶ್ರುತಿ ಸರಿಮಾಡಿ ಕೊಳ್ಳುವ ಸಂಗೀತಗಾರನ ಸ್ವರದಂತೆ ಬೇರೆ ಬೇರೆಯಾಗಿವೆ.ಮುರಿದು ಬಿದ್ದ ಪದ್ಯಗಳು ಬಿಕ್ಕಿದ ಸಾಲುಗಳಿವು)