ಕಣ್ಣ ತುಂಬಾ
ಕನಸುಗಳನ್ನು ಕಟ್ಟಿಕೊಂಡ
ಚೆಲುವಿ
ಕೂತಿದ್ದಾಳೆ
ಧ್ಯಾನಾವಸ್ಥೆಯಲ್ಲಿ
ಚಕ್ಕಮಕ್ಕಳ ಭಂಗಿ

ಚೋರನೊಬ್ಬ
ಬಂದ
ಆ ಕನಸುಗಳನ್ನು
ಧ್ಯಾನಿಸುತ್ತಾ
ಮೋಹಗೊಂಡ
ತನ್ನ ಮನದ ಮಾತುಗಳನ್ನೆಲ್ಲಾ
ಅಂಗಳದಲ್ಲಿ ಹರವಿದ
ಆಕೆ ಕಣ್ಣು ತೆರೆಯಲಿಲ್ಲ

ನಿನ್ನ ಕನಸುಗಳಿಗೆ
ಜೀವವಾಗುತ್ತೇನೆ
ಎಂದು ಭರವಸೆ ಕೊಟ್ಟ
ಆಗಲೂ ಆಕೆ
ಅದೇ ಅವಸ್ಥೆಯಲ್ಲಿ

ಮರುಕ್ಷಣ
ಚೋರ
ಅವಳ ಕನಸುಗಳಾಗಿ ಬಿಟ್ಟ
ಪಕ್ಕನೆ ಕಣ್ತೆರೆದಳು
ಚೆಲುವಿ
ಅವನ
ಕನಸುಗಳಷ್ಟೇ ಇತ್ತು, ಚೆಲುವನಿರಲಿಲ್ಲ !