ಅವಳು ಪ್ರೀತಿಸಿದ್ದು
ಸಮುದ್ರವನ್ನೇ
ಆಲಿಂಗಿಸಿದ್ದು
ಅನುಭವಿಸಿದ್ದು
ಎಲ್ಲವೂ

ಅವಳ ಅವನು
ಮತ್ತೆ ಮತ್ತೆ
ಹೊತ್ತು ತರುತ್ತಾನೆ ದಡಕ್ಕೆ
ಅವಳೋ ನಾಚಿಕೊಳ್ಳುತ್ತಾಳೆ
ಮತ್ತೆ ಕರೆದೊಯ್ಯುತ್ತಾನೆ
ಬಂದು ಹೋದ ನೆನಪಿಗಿಷ್ಟು
ರೇವು, ಅದರೊಳಗೆ
ಮತ್ತಷ್ಟು ಕಪ್ಪೆ ಚಿಪ್ಪು ತಂದು
ಸುರಿಯುತ್ತಾನೆ

ಬೇಕಾದ್ರೆ ಚಿಪ್ಪು ಇಟ್ಟುಕೊಳ್ಳಿ
ಆ ಒದ್ದೆ ರೇವಿನ ಮೇಲೆ
ಏನೂ ಬರೆಯಬೇಡಿ
ಅವರ ಬಗ್ಗೆ ಸಹ
ಅವನು ಪುನಾ ಬಂದು ಅಳಿಸುತ್ತಾನೆ !

(ನನ್ನನ್ನು ಸದಾ ಕಾಡುವ ಇಮೇಜ್ ಗಳೆಂದರೆ ಕಡಲು ಮತ್ತು ಸಾವು. ಈ ಸಾಲುಗಳನ್ನು ಯಾವ ವರ್ಗಕ್ಕೆ ಸೇರಿಸಬೇಕೆಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು)