ಚಿತ್ರಿಕೆ

ಬೊಗಸೆ ಲೆಕ್ಕದ ಅಪ್ಪ

ತಕ್ಕಡಿ ಹಿಡಿದು ಕುಳಿತಿರುವ ಮನೆಯ ಮುಂದಣ ವ್ಯಾಪಾರಿಗೆ ಹಲವು ಚಿಂತೆ. ಊರಿನದು-ಕೇರಿಯದು-ಕೇರಿ ಮಕ್ಕಳದು-ಅವರ ಅಪ್ಪಂದರಿದು-ಅಜ್ಜಿಯರದ್ದು. ಹೀಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಎಲ್ಲರದ್ದೂ. ಕೊಟ್ಟ ಕಡ ಮರಳಿ ಪಡೆಯುವ ಹೊಣೆಯೂ ಸಹ. ಅದಕ್ಕೇ ಆತ ಘನ-ಗಂಭೀರ.
ವಿಶ್ವ ಪ್ರಯತ್ನದ ನಡುವೆಯೂ ನಗಲಾರ.
ಈತನ ನೋಂದಣಿಯಲ್ಲಿ ಸಾಲ ಪಡೆಯದವರಾರು ? ಬೀಬಿ ಫಾತಿಮಾಳ ಮಗ ಕುಡಿಯಲಿಕ್ಕೆ, ಹೊಸ ಕುಪ್ಪಸಕ್ಕೆಂದು ಜಯರಾಮಣ್ಣನ ಸೊಸೆ, ರಾಮುಕಾಕಾನ ಎರಡನೇ ಹೆಂಡತಿ ಸುನಾ ಬೆಹನ್ ಅಂದರೆ ಬಾಬುವಿನ ಚೋಟಾಮಾ, ದೇಶದ ಪ್ರಧಾನಿ, ರಾಷ್ಟ್ರಪತಿ-ಹೀಗೆ ವಿಶ್ವಕ್ಕೆ ವಿಶ್ವವೇ. ಎಲ್ಲರಿಗೂ ಈತನಿಗೂ ದೊಡ್ಡ-ಅಪ್ಪ.
ಧನ ಕನಕಗಳ ಲೆಕ್ಕದಲ್ಲಿ ವ್ಯಾಪಾರಿ ಮುಳುಗಿಲ್ಲ. ಅವನ ಸಾಲದ ಲೆಕ್ಕಾಚಾರ ನೋಟಿನಲ್ಲಲ್ಲ, ಬೊಗಸೆಯಲ್ಲಿ. ಬೊಗಸೆ ಲೆಕ್ಕದಲ್ಲಿಯೇ ಸಾಲ ತುಂಬಿ ಕೊಡಬೇಕು. ಎಲ್ಲಾ ಬೊಗಸೆ-ಬಾಳೂ ಬೊಗಸೆ.
“ಬದುಕಿನ’ ಅಂಗಡಿಗೆ ಸ್ವಲ್ಪ ಉತ್ಸಾಹ ನೀಡಿದ್ದಾನೆ. ಅದು ಮೂಲ ಬಂಡವಾಳ, ಒಂದಿಷ್ಟು ಪ್ರೀತಿ ಇನ್‌ಕ್ರಿಮೆಂಟ್. ಪ್ರತಿಕ್ಷಣದ ಬಾಳಿಗೂ ಒಂದಿಷ್ಟೇ ಸಂಭ್ರಮ-ಸಂತಸ-ಉಲ್ಲಾಸ- ಎಂಬ ಟಿ.ಎ, ಡಿ.ಎ.. ಇಷ್ಟೆಲ್ಲಾ ಪಡೆದು ಈಗ ಅಂಗಡಿ ಜೀರ್ಣವಾಗಿದೆ. ಪಡೆದ ಲೆಕ್ಕಾಚಾರ ಒಪ್ಪಿಸಬೇಕು. ನಂತರ ಅಂಗಡಿಗೆ ವಿರಾಮ.
ತಕ್ಕಡಿಯ ಎರಡು ಬಟ್ಟಲು ಸಮಸ್ಥಿತಿಯಲ್ಲಿವೆ. ಸ್ಥಿತ ಪ್ರಜ್ಞೆಯುಳ್ಳವು, ಸಮಾಧಿ ಸ್ಥಿತಿ. ಎರಡೂ ಬಟ್ಟಲುಗಳಲ್ಲಿ ಬಂದು ಕುಳಿತವು. ಕೊಟ್ಟ ಬಾಳು ಒಂದೆಡೆ, ಬದುಕಿದ ಬಾಳು ಮತ್ತೊಂದೆಡೆ. ವ್ಯಾಪಾರಿಯ ಮಗ ಬಿಳಿ ಪಟ್ಟಿ ಓದಲಾರಂಭಿಸಿದ.
ರಸ್ತೆಯಲ್ಲಿ ಬಿದ್ದ ಪುಟ್ಟ ಮಗುವನ್ನು ರಕ್ಷಿಸಿದ್ದು-ಮಳ್ಳು ಬದುಕಿದ ಬಟ್ಟಲ ಕಡೆ ವಾಲತೊಡಗಿತು.
ಅಷ್ಟರಲ್ಲಿ ಮತ್ತೊಬ್ಬ ಮಗ ಕೆಂಪು ಪಟ್ಟಿ ಓದ ತೊಡಗಿದ.
“ಸುಮ್ಮನೆ ಹೋಗುತ್ತಿದ್ದ ನಾಯಿಗೆ ಹೊಡೆದಿದ್ದು, ಸರಕಾರಕ್ಕೆ ತೆರಿಗೆ ವಂಚಿಸಿದ್ದು, ತರಕಾರಿಯಮ್ಮನ ಬಳಿ ಒಂದು ರೂ. ಸಾಲ ಇರಿಸಿಕೊಂಡಿದ್ದು, ಬಾರ್‌ನಲ್ಲಿ ಕುಡಿದು ಮಾಣಿಯರಿಗೆ ಹೊಡೆದದ್ದು…ವಿಶ್ವರೂಪವೆಲ್ಲಾ ಜಗಜ್ಜಾಹೀರು’. ಬದುಕಿದ ಬಾಳಿನ ಮುಖದಲ್ಲಿ ಬೆವರು.
ಅರ್ಧಕ್ಕೆ ನಿಲ್ಲಿಸಿದ ಬಿಳಿ ಪಟ್ಟಿಯವ ಮುಂದುವರಿಸಿದ.
ನೆನೆದು ಹೋಗುತ್ತಿದ್ದ ಅಜ್ಜಿಗೆ ಕೊಡೆ ಹಿಡಿದು ಮನೆಗೆ ಮುಟ್ಟಿಸಿದ್ದು, ಪಕ್ಕದ್ಮನೆ ಸರಸೂಗೆ ಆತನ ಗಂಡ ಕುಡಿದು ಬಂದು ದಿನಾ ಹೊಡೆಯುವಾಗ ತಡೆಯುತ್ತಿದ್ದದ್ದು, ಹಸಿದ ಭಿಕ್ಷುಕನಿಗೆ ಹತ್ತೇ ಪೈಸೆ ನೀಡಿದ್ದು, ಸಿಗ್ನಲ್ ಬಿಟ್ಟಾಗಲೂ ಹೆಳವ ರಸ್ತೆ ದಾಟುವವರೆಗೆ ತಾಳ್ಮೆಯಿಂದ ಕಾದದ್ದು..’
ಮುಳ್ಳು ಈ ಬದಿಗೆ ಏರುತ್ತಲೇ ಒಮ್ಮೆಲೆ ನಿಂತಿತು.
ತಕ್ಕಡಿ ಹಿಡಿದ ಎದ್ದು ನಿಂತ. ಬದುಕಿದ ಬಾಳಿಗೆ ಪುನಾ ಮತ್ತಷ್ಟು ಸಾಲ ಕೊಟ್ಟ. ಮುಳ್ಳು ಸಮಸ್ಥಿತಿಗೆ ಬಂತು. ಅಲ್ಲಿಗೆ ಸಾಲದ ತುಲಾಭಾರ ಖತಂ. ವ್ಯಾಪಾರಿ ತನ್ನ ನೋಟ್ಸ್ ಪುಸ್ತಕದಲ್ಲಿ ಹೊಸ ಸಾಲದ ಬಗ್ಗೆ ವಿವರ ಹೀಗೆ ಬರೆದ-
“ಒಂದೆರಡೇ ಬೊಗಸೆ ಪ್ರೀತಿ, ಅದಕ್ಕೊಂದು ಬೊಗಸೆ ಲವಲವಿಕೆ’.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s