ಚಿತ್ರಿಕೆ / ಸುಲಲಿತ

ಕತ್ತಲ ದಾರಿ ದೂರ

ತೆರೆದ ಅಂಗಡಿ ಮುಂದೆ ನಿಂತವರು ನಾಲ್ಕೇ ಮಂದಿ. ಅಪ್ಪ-ಅಮ್ಮ, ಮಗಳು, ಬಿಟ್ಟರೆ ಅಂಗಡಿಯವ. ಮಗಳಿಗೆ ಹೆಚ್ಚೆಂ ದರೆ ಎಂಟರ ಪ್ರಾಯ. ಅಪ್ಪನಿಗೆ ಮೂವತ್ತೈದರ ಆಸುಪಾಸು. ಅಮ್ಮನ ವಯಸ್ಸು ಹೇಳುವಂತಿಲ್ಲ. ಊಹಿಸಿಕೊಳ್ಳಬೇಕಷ್ಟೇ. ಜಾ ಸ್ತಿ ಎನ್ನಬೇಡಿ, ಅಮ್ಮ ಹಳಬಳಾಗಿಬಿಡಬಹುದು. ಜೇನು ಹಳೆಯದಾದಷ್ಟೂ ರುಚಿಯಂತೆ !
ಈ ಅಂಗಡಿಯಲ್ಲಿ ಎಲ್ಲವೂ ಸಿಗುತ್ತದೆ. ಊರ ಶೆಟ್ಟರ ಅಂಗಡಿಯಿದ್ದ ಹಾಗೆ. ಚಿಕ್ಕದೊಂದು ಗುಂಡುಸೂಜಿಯಿಂದ ಹಿಡಿದು ಏನಾದರೂ ಕೇಳಿ, ನಗುಮೊಗದ ಸೇವೆಗೆ ಸದಾ ಸಿದ್ಧ. ಕೆಲವೊಮ್ಮೆ ಅವನು ಹೇಳಲು ತೊಡಗುವ ಹೆಸರು, ಬ್ರ್ಹಾಂಡ್ ನಮಗೆ ತಿಳಿದಿರದು. ಅವನಿಗೆ ಎಲ್ಲವೂ ತಿಳಿದಿದೆ. ವ್ಯಾಪಾರಸ್ಥ ಎಂದ ಮೇಲೆ ಅದು ಅವನ ಕರ್ತವ್ಯ ಎನ್ನಬಹುದು.
ಮರೆತಿದ್ದು ನಿಜ, ಅಂಗಡಿಯವನ ಪ್ರಾಯ ಹೇಳಲಿಲ್ಲ. ಅವನಿಗೆ ಅಜಮಾಸು ಐವತ್ತಾಗಿರಬಹುದು. ಜೀವನದ ಅರ್ಧದಾರಿ ಕ್ರಮಿಸಿದ್ದಾನೆ ಎಂದುಕೊಳ್ಳೋಣ. ಅದರಲ್ಲಿ ಹತ್ತು ವರ್ಷಕ್ಕೊಂದು ಮೈಲುಗಲ್ಲು ಇಟ್ಟುಕೊಂಡರೆ ಮೊದಲ ಮೈಲುಗಲ್ಲು ಬಿಡಿ, ಕೈ ಹಿಡಿದು ನಡೆದದ್ದು. ನಂತರದ್ದು ನಡೆಯಲು ಕಲಿತದ್ದು.
ಮೂರನೆಯ ಮೈಲುಗಲ್ಲು ಮುಟ್ಟಲು ಎಷ್ಟೊಂದು ಮಂದಿ ಮಾರ್ಗದರ್ಶನವಿತ್ತವರು. ಅಜ್ಜ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಊರ ಹಿರಿಯರು, ಒಬ್ಬರೇ, ಇಬ್ಬರೇ-ಲೆಕ್ಕವಿಟ್ಟುಕೊಂಡದ್ದೇ ಕಡಿಮೆ. ಎಲ್ಲರ ಮುಖಗಳೂ ಜ್ಞಾಪಕ ಚಿತ್ರಶಾಲೆಯಲ್ಲಿ ಅಚ್ಚಾಗಿವೆ. ನೆನಪಿನ ಕೋಣೆಯ ಜಾಗಕ್ಕೆ ತಕ್ಕಂತೆ ಜೋಡಿಸಿಕೊಳ್ಳುವುದು ಯಾರು ಕಲಿತವರು ?
ನಿಂತ ನೆಲೆಯ ಮೇಲೆ ಸಿಕ್ಕವರನ್ನೆಲ್ಲಾ ಪರಿಚಯವಾಗುತ್ತಾರೆ. ರಸ್ತೆಯಲ್ಲಿ ನಡೆದು ಹೋಗುವಾಗ ಎಡವಬೇಡ ಎಂದು ಹೇಳುವುದೂ ನಮ್ಮದೊಂದು ಸಂಸ್ಕೃತಿಯಲ್ಲವೇ? ಅದನ್ನೇ ಪಾಲಿಸಿದವರು ಹಲವರು. ಅಂಥವರೆಲ್ಲಾ ಅಂಗಡಿಯವನ ಚಿತ್ರಶಾಲೆಯಲ್ಲಿ ಅಚ್ಚಾಗಿವೆ. ಒಂದರೆ ಮೇಲೊಂದರಂತೆ ಪೇರಿಸಿಟ್ಟುಕೊಂಡಿದ್ದಾನೆ. ಒಂದನ್ನು ವೀಕ್ಷಿಸಲು ಇನ್ನೊಂದನ್ನು ಪಕ್ಕಕ್ಕೆ ಸರಿಸಿಟ್ಟುಕೊಳ್ಳಬೇಕು. ಇಲ್ಲವೇ ನೆನಪುಗಳ ಫ್ರೇಮ್‌ನಲ್ಲಿ ಸರಣಿ ಸರಣಿಯಾಗಿ ಸುರಿದುಕೊಳ್ಳಬೇಕು.
ಇಷ್ಟೆಲ್ಲದರ ನಡುವೆ ಮೂರನೇ ಮೈಲುಗಲ್ಲು ಮುಟ್ಟಿದ್ದೇ ತಿಳಿಯುವುದಿಲ್ಲ. ನಾಲ್ಕನೆಯದ್ದು ಸ್ವಲ್ಪ ತಲೆ ಎತ್ತಿ ನಡೆದದ್ದು. ಸ್ವಲ್ಪ ಸ್ವತಂತ್ರ, ಸ್ವಾಭಿಮಾನ ಎಲ್ಲವೂ ಒಟ್ಟುಗೊಂಡು ಚೆಂದಗೊಂಡಿದ್ದು. ಈಗ ಐದನೆಯದ್ದು ಮುಟ್ಟಿದ್ದಾನೆ. ಆರನೆಯದ್ದಕ್ಕೆ ಸಜ್ಜುಗೊಳ್ಳುವ ತವಕವೇನೋ ಇದೆ. ಸ್ವಾಭಿಮಾನದಿಂದ ಸ್ವತಂತ್ರವಾಗಿಡಬಹುದಾದ ಹೆಜ್ಜೆಯನ್ನು ಊಹಿಸಿಕೊಳ್ಳುತ್ತಿದ್ದಾನೆ. ಹೇಗಿರಬಹುದು ?
ಮೊದಲನೇ ಮೈಲುಗಲ್ಲು ಮುಟ್ಟಲು ಸಜ್ಜಾದಾಗ ಕೈ ಹಿಡಿದು ನಡೆಸಿದ್ದು ಅಮ್ಮ-ಅಪ್ಪ ಮನೆಯವರೆಲ್ಲಾ. ಅದೇ ಮಾದರಿಯೇ ಈಗಲೂ. ಅಲ್ಲಲ್ಲ ಎಂದುಕೊಂಡರೆ ಮತ್ತ್ಯಾವುದು ? ಎರಡ್ಹೆಜ್ಜೆ ಇಟ್ಟಾಗಲೇ ಊರಿಗೇ ಊರೇ ಸಂಭ್ರಮ ಪಟ್ಟ ಕ್ಷಣವದು. ಆ ಹೆಜ್ಜೆಯಲ್ಲಿನ ನಂಬಿಕೆಯೇ ಈಗ ಆರನೇ ಮೈಲುಗಲ್ಲುವರೆಗೆ ನಡೆಸಿದೆ. ಈಗಲೂ ಅಷ್ಟೇ.
ಅಂಗಡಿಯವ ನಿಂತ ಕ್ಷಣಗಳೆಲ್ಲಾ ಹಳೆಯದ್ದರ “ಛಾಯಾಪ್ರತಿ’ಯನ್ನು ಒರೆಸಿ ನೋಡುತ್ತಾನೆ. ಹೆಜ್ಜೆಯಲ್ಲಿನ ವಿಶ್ವಾಸದ ಬೆಳಕು ಅಷ್ಟು ದೂರಕ್ಕೆ ಹಾಯುತ್ತದೆ. ಕತ್ತಲ ದಾರಿ ದೂರ…
ಎಂಟರ ಪ್ರಾಯದ ಮಗುವನ್ನು ಕಂಡು ಅನಿಸಿದ್ದೂ ಅಂಗಡಿಯವನಿಗೆ ಅದೇ. ಈತ ಜ್ಞಾಪಕಚಿತ್ರಶಾಲೆಗೆ ಹೊಕ್ಕಾಗ ಈ ಅಪ್ಪ-ಅಮ್ಮ-ಮಗಳೂ ಸಹ ಅಚ್ಚಾಗಿ ಹೋದರು. ಈ ಕ್ಷಣದಲ್ಲಿ ಮತ್ತೊಂದು ಅಂಗಡಿಯವನ ಚಿತ್ರಶಾಲೆಯ ಮುಂದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s