
ಹೀಗೆ ಕಂಸನಂತೆ ಕನಸುಗಳನ್ನು ಕೊಲ್ಲುತ್ತಲೇ ಇದ್ದ ಆತ…
ಅವನ ದೃಷ್ಟಿಯಲ್ಲಿ ಅದು ಸ್ವರಕ್ಷಣೆ
ಎಲ್ಲಿಯವರೆಗೆ ಕೊಲ್ಲುತ್ತಿದ್ದ ಕನಸಿನ ಟಿಸಿಲೊಡೆದು ಮತ್ತೊಂದು
ಕನಸು ಜಿಗಿದೇ ಬಿಟ್ಟಿತು…
ಅದು ಹಾರಿ ಹೋದದ್ದಷ್ಟೇ ಈತನಿಗೆ ಕಂಡಿದ್ದು
ಚಿಗಿತಿದ್ದೂ ಕಾಣಲಿಲ್ಲ, ಬೆಳೆದಿದ್ದೂ ಸಹ…
ಕಾಲ ಅದನ್ನು ಕಾಪಾಡುತ್ತಿದೆ…
ಕನಸಿನೊಳಗಣ ಕಣ್ಣು ಒಡೆದು
ಹೊರಗಿನದೆಲ್ಲಾ ಸಿರಿ-ಐಸಿರಿ….
***
ಕನಸಿಗೊಂದು
ಇಟ್ಟ ಹೆಸರು
ಮರೆತು ಹೋಗಿದೆ
ಅಯ್ಯೋ
ಕನಸೂ ಮಾಸಿ ಹೋಗಿದೆ
***
ಹೀಗೇ ಕಣ್ತೆರೆದು
ಕುಳಿತಿದ್ದೆ
ಕಣ್ಣು ತೆರೆದಂತೆಯೇ ಇತ್ತು
ಬೆಳಕೊಂದು ಒಳಗೆ
ಹೊತ್ತಿಕೊಂಡಂತೆ
ಅನಿಸಿತು
ಕಣ್ಮುಚ್ಚಿದೆ
ಒಳಗೇ ಒಂದು
ಬಗೆಯ ಅನಂದ
ನಾನೇ ಬೆಳಕಾಗುವಂತೆ
***
ಪ್ರೀತಿ
ತನ್ನ ಪ್ರಿಯಕರನನ್ನು
ಕಂಡು
ಕೇಳಿತು
“ನಿಜವಾಗಲೂ ಹೇಳು
ನೀನು ನನ್ನನ್ನು
ಪ್ರೀತಿಸುತ್ತೀಯಾ?”
ಅದಕ್ಕೆ
ಪ್ರಿಯಕರ ಹೇಳಿದ
“ನೀನೂ ನಿಜವಾಗಲೂ
ಹೇಳು !”
Monthly Archives: October 2011
ಪುಟ್ಟ ಪುಟ್ಟ ಕಥೆ

ಚೆಂದದ ಗೊಂಬೆಗೆ ಹೆಸರಿಡಲು ಊರೆಲ್ಲಾ ಹುಡುಕಿದರು. ಎಲ್ಲೂ ಚೆಂದದ ಹೆಸರು ಸಿಗಲಿಲ್ಲ. ಸಿಕ್ಕ ಹೆಸರುಗಳೆಲ್ಲಾ ಎಲ್ಲೋ ಕೇಳಿದಂತಿದ್ದವು. ಇನ್ನು ಸಿಕ್ಕ ಕೆಲವು ಹೆಸರುಗಳೂ ಪಂಚಾಂಗ, ನಕ್ಷತ್ರ ಏನೇನೋ ಕಾರಣಗಳಿಂದ ಇಡಲು ಯಾಕೋ ಇಷ್ಟವಾಗುತ್ತಿರಲಿಲ್ಲ. ಬೆಳಗ್ಗೆ ಅಂಗಳದಲ್ಲಿ ಮಗು ಚಾಪೆಯಲ್ಲಿ ಹರಡಿಕೊಂಡಿದ್ದಾಗ ರಸ್ತೆಯಲ್ಲಿ ಹೋಗುತ್ತಿದ್ದ ಹುಚ್ಚಿಯೊಬ್ಬಳು ಮಗುವನ್ನು ಕಂಡು “ಬಚ್ಚಿ” ಎಂದು ಕರೆದಳು. ಕೋಣೆಯಲ್ಲಿ ಕಚೇರಿಗೆ ತೆರಳಲು ಸಿದ್ಧಗೊಳ್ಳುತ್ತಿದ್ದ ಗಂಡ, ತನ್ನ ಹೆಂಡತಿಗೆ ಕೂಗಿ ಹೇಳಿದ…”ಅದೇ ಹೆಸರಿಟ್ಟು ಬಿಡು…!’
ನನ್ನ ಮತ್ತಷ್ಟು ಚಿತ್ರಗಳನ್ನು ಕಾಣಲು ಫೋಟೋ ಬ್ಲಾಗ್ ಗೆ ಹೋಗಿ.
ನನ್ನ ಚಿತ್ರಗಳ ಬ್ಲಾಗ್
ಹೌದು, ಬಹಳ ದಿನಗಳ ಕನಸು. ಫೋಟೋಗ್ರಫಿ ನನ್ನ ಆಸಕ್ತಿಯ ಕ್ಷೇತ್ರ. ಈಗ ತಾನೇ ಕಲಿಯಲು ಶುರು ಮಾಡಿದ್ದೇನೆ. ಹೀಗೆ ಸಿಕ್ಕ ಚಿತ್ರಗಳನ್ನು ಕ್ಲಿಕ್ಕಿಸಿ, ಒಂದೆಡೆಗೆ ರಾಶಿ ಹಾಕಬೇಕೆಂದೆನಿಸಿತ್ತು.ಅದೇ ಪ್ರಯತ್ನ ಸಾಗಿದೆ. ಮೊನ್ನೆ ತಾನೇ ಮುಗಿದ ಕುದ್ರೋಳಿ ದಸರಾದ ಒಂದಿಷ್ಟು ಫೋಟೋಗಳನ್ನು ಹಾಕಿದ್ದೇನೆ. ಈ ಚಿತ್ರಗಳಿಗಾಗಿ ಚಿತ್ರಸಾಲು ಬ್ಲಾಗ್ ಮಾಡಿದ್ದೇನೆ. ಅಲ್ಲಿಗೆ ಹೋಗಿ ನೋಡಿ, ಅಭಿಪ್ರಾಯಿಸಿ.
