ಬಿಕ್ಕಿದ ಸಾಲುಗಳು ಹೊಸತು
ನಡೆದ
ಪಾದಗಳು
ಸವೆದಿವೆ
ಒಂದೆರಡೂ ಗೆರೆಗಳು
ಉಳಿದಿಲ್ಲ
ನನ್ನದೆಂದು
ಹೇಳಲಿಕ್ಕೆ
***
ಮೌನದೊಳಗೆ
ಹೊಕ್ಕು
ಒಂದಾಗಿ ಬಿಡಲು
ಮಾತು
ಬಿಡುತ್ತಿಲ್ಲ
***
ಅವಳ
ಮುಂದೆ
ಎಲ್ಲವನ್ನೂ
ತೆರೆದಿಡಲು
ಹೋದೆ
ಯಾಕೋ
ಮನಸ್ಸಾಗಲಿಲ್ಲ
ನನ್ನೊಳಗೇ
ಅವಿತುಕೊಂಡ
ನನಗೆ
ಅವಳೂ
ಕಾಣದಾದಳು !
Loading...
ಹೇಗಂದ್ರೆ . . . ಮುದ್ದುಮುದ್ದಾದ ಮಗುವನ್ನ ಕೂರಿಸಿಕೊಂಡು ಅದು ಎಷ್ಟು ಚೆಂದ ಅಂತ ಹೇಳೊದಿಕ್ಕೆ ಆಗದೇ ಅದನ್ನ ಹಾಗೇ ನೋಡ್ತಾ ಕೂತ್ಕೊಂಡ್ ಹಾಗೆ ಈ ಬಿಕ್ಕಿದ ಸಾಲುಗಳು. ಖಂಡಿತ ಓದಿಬಿಡಲು ಲಾಯಕ್ಕಲ್ಲ ಇವು.
ಮನಸಿನಲ್ಲಿಟ್ಟುಕೊಳ್ಳಲು.
shreedevi kalasad - September 5, 2008 at 11:31 am
ಶ್ರೀದೇವಿ,
ಓದಿ ಬಿಡಬೇಡ. ಥ್ಯಾಂಕ್ಯೂ.
ನಾವಡ
navada - September 5, 2008 at 5:38 pm
ಸುಂದರವಾದ ಝಲಕ್.
sunaath - September 7, 2008 at 12:45 pm
ಸುನಾಥರಿಗೆ,
ಧನ್ಯವಾದ.
ನಾವಡ
navada - September 8, 2008 at 5:55 am
ನಡೆದ
ಪಾದಗಳು
ಸವೆದಿವೆ
ಒಂದೆರಡೂ ಗೆರೆಗಳು
ಉಳಿದಿಲ್ಲ
ನನ್ನದೆಂದು
ಹೇಳಲಿಕ್ಕೆ
adbhuta kalpane gurugale:)
ನವಿಲಗರಿ - September 13, 2008 at 4:31 am