ಬಿಕ್ಕಿದ ಸಾಲುಗಳು-ಕೊನೆಯ ಕಂತಲ್ಲ
ಮಳೆ ನಿಂತ
ಮೇಲೆ
ಹನಿ ಉದುರಿತು
ಅದು ಬಿಕ್ಕಿ ಬಿಕ್ಕಿ
ಅತ್ತ
ಮುಗಿಲಿನ
ಕೊನೆ ಹನಿ
****
ದೀಪ ಆರದಿರಲಿ
ಎಂಬುದು
ನನ್ನ ಕಾಳಜಿ
ಅದರೊಳಗೆ
ಅವನಿದ್ದಾನೆ
ಕಣ್ಣತುಂಬುತ್ತಾನೆ
ಆರಿದ ಹೊತ್ತು
ನಾನೂ
ಕಣ್ಣ ಮುಚ್ಚುತ್ತೇನೆ !
****
ಕಣ್ಣಂಚಿಗೆ
ಬಂದು ನಿಂತ
ಹನಿಗೂ
ಅವಳ ಮೇಲೆ
ಕರುಣೆ
ಉದುರಿ ಹಗುರವಾಗಿಸಿತು !
*****
Loading...
ವಾವ್……….ಸೂಪರ್ ಟೆಂಪ್ಲೆಟ್. . . ‘ಕೊನೆಯ ಕಂತಲ್ಲ’ ಟೈಟಲ್ಲೇ ಸಕತ್ತಾಗಿದೆ.
ಕಣ್ಣಂಚಿಗೆ
ಬಂದು ನಿಂತ
ಹನಿಗೂ
ಅವಳ ಮೇಲೆ
ಕರುಣೆ
ಉದುರಿ ಹಗುರವಾಗಿಸಿತು !
ಇಷ್ಟವಾಯ್ತು
shreedevi kalasad - August 12, 2008 at 6:01 am
ಕೊನೆಯ ಕಂತು ಯಾವಾಗ ಮುಗಿಸುತ್ತೀರಿ ಹೇಳಿ! ಹಿಂಗೆಲ್ಲಾ ಎಮೋಷನಲ್ ಆಗಿ ಬರೆದು ನಮ್ಮಂಥವರ ಮನ ಹಿಂಡುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ಜಿತೇಂದ್ರ ಸಿ.ರಾ.ಹುಂಡಿ - August 12, 2008 at 1:28 pm
ಶ್ರೀದೇವಿಗೆ ಥ್ಯಾಂಕ್ಸ್.
ಜಿತೇಂದ್ರ ಮುಗಿಯದ ಕಂತಿಗೆ ಹುಡುಕುತ್ತಿದ್ದೇನೆ. ಸಿಕ್ಕ ಕೂಡಲೇ ಮುಗಿಸುತ್ತೇನೆ. ಹೀಗೆ ಬರ್ತಾ ಇರು, ಅಭಿಪ್ರಾಯಿಸುತ್ತಾ ಇರು.
ಧನ್ಯವಾದ
ನಾವಡ
navada - August 12, 2008 at 3:00 pm