ಬಿಕ್ಕಿದ ಸಾಲುಗಳು ಹೊಸ ಕಂತು
ಕೊಳದಲ್ಲಿ
ಕಾಲುಚಾಚಿ
ಕುಳಿತಿದ್ದೆ
ತಣ್ಣನೆಯ
ಸ್ಫರ್ಶ
ಅವಳನ್ನೇ
ನೆನಪಿಸುತ್ತಿತ್ತು
ಪುಟ್ಟ ಪುಟ್ಟ
ಮೀನುಗಳೂ
ಅದನ್ನೂ ಕಿತ್ತು ತಿನ್ನುತ್ತಿದ್ದವು !
***
ಮಳೆಯ ಮೊದಲ
ಹನಿ
ಬಿದ್ದ ಕ್ಷಣ
ಮಾತು ಮುಸುಕೆಳೆದು
ಮಲಗಿತು
ನನ್ನೊಳಗಿನ
ಮೌನ
ಅಂಗಳಕೆ ಜಿಗಿಯಿತು
ಅದಕೆ
ಹನಿಗಳೆಲ್ಲಾ
ಮುತ್ತಾಗುವುದ ನೋಡುವ
ತವಕ
***
ಕನಸು ಕಟ್ಟುವ
ಸಮಯದಲ್ಲಿ
ಬರೀ ಕತ್ತಲೆ
ನನಸಾಗುವಾಗಲೆಲ್ಲಾ
ಭಾರೀ ಬೆಳಕು
ಬೆಳಕ ಹಿಡಿದವ
ಸಾಗಿ ಮುಟ್ಟಿದ್ದು
ಮತ್ತೆ ಕತ್ತಲೆಗೆ !
Loading...
ಹೂಂ….ಪುಟ್ಟ ಪುಟ್ಟ ಸಾಲುಗಳಲ್ಲಿ ದೊಡ್ಡ ದೊಡ್ಡ ಅರ್ಥ… ಸರಳ ನುಡಿಯಲ್ಲಿ . ಇಷ್ಟವಾಯ್ತು ..
ಶ್ರೀದೇವಿ ಕಳಸದ - July 10, 2008 at 10:57 am
ನಾವಡರೆ…
ಬಿಕ್ಕುತ್ತಲೇ ಮನಹೊಕ್ಕುವ ಸಾಲುಗಳು, ಇಷ್ಟವಾದ್ವು ಪ್ರತಿ ಸಾಲುಗಳೂ.
ಶಾಂತಲಾ ಭಂಡಿ - July 11, 2008 at 9:24 pm
ಶಾಂತಲಾ ಭಂಡಿ ಮತ್ತು ಶ್ರೀದೇವಿಗೆ ಧನ್ಯವಾದ, ಸಾಲುಗಳನ್ನು ಮೆಚ್ಚಿದ್ದಕ್ಕೆ ಮತ್ತು ಪ್ರೋತ್ಸಾಹಿಸಿದ್ದಕ್ಕೆ.
ನಾವಡ
navada - July 18, 2008 at 10:24 am
Kavigale,
Padya chennagide antha heloke phone madidre nimma phonee sigtilla..
Number badalgideya?
Girija - August 2, 2008 at 5:53 pm
ಪುಟ್ಟ ಪುಟ್ಟ ಸಾಲುಗಳಲ್ಲಿ
ಬೆಟ್ಟದಷ್ಟು ಅರ್ಥ ಕಟ್ಟಿ
ಭಾವಗಳು ಹರಿದು ಉಕ್ಕಿ
ಮನಸ್ಯಾಕೋ ಅಳುತಿತ್ತು ಬಿಕ್ಕಿ
ತುಂಬಾ ಸುಂದರವಾದ ಭಾವಾಭಿವ್ಯಕ್ತಿಯ ಸಾಲುಗಳು
antarangadaapthaswara - August 11, 2008 at 6:28 am
ಅಂತರಂಗದ ಆಪ್ತಸ್ವರದವರಿಗೆ
ನಮಸ್ಕಾರ. ಬಿಕ್ಕಿದ ಸಾಲುಗಳಿಗೆ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದ.
ನಾವಡ
navada - August 11, 2008 at 10:58 am